ನಿರ್ದೇಶಕ “ಜೋಗಿ’ ಪ್ರೇಮ್ ಅವರ “ಅಮ್ಮನ ತೋಟಕ್ಕೆ’ ಗುಜರಾತ್‌ನ ಕಚ್‌ನಿಂದ ಅತಿಥಿಗಳು ಬಂದಿದ್ದಾರೆ. ಮುಂದೆ ಅವರ ವಾಸ್ತವ್ಯ ಅದೇ ತೋಟದಲ್ಲಿ. ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ಪ್ರೇಮ್ ತಮ್ಮ ನಿರ್ದೇಶನದ “ಏಕ್‌ಲವ್ಯ’ ಚಿತ್ರದ ಲೊಕೇಶನ್ ಹುಡುಕಾಟಕ್ಕಾಗಿ ಗುಜರಾತ್‌ನ ಕಚ್‌ಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಅವರಕಣ್ಣಿಗೆ ಎಮ್ಮೆಯೊಂದು ಬೀಳುತ್ತದೆ. ಅದನ್ನು ನೋಡಿ ಖುಷಿಯಾದ ಪ್ರೇಮ್ ಅದನ್ನು ಅಮ್ಮನ ತೋಟಕ್ಕೆ ತಂದಿದ್ದಾರೆ.
ಇದನ್ನೂ ಓದಿ : ಅಂಬಿ ಇಲ್ಲದ ಎರಡು ವರ್ಷ : ಇಂದು ರೆಬೆಲ್ ಸ್ಟಾರ್ ಪುಣ್ಯ ತಿಥಿ
ಈ ಬಗ್ಗೆ ಹೇಳುವ ಪ್ರೇಮ್, “ಏಕ್‌ಲವ್ಯ’ ಶೂಟಿಂಗ್ ಲೊಕೇಶನ್ ನೋಡಲು ಗುಜರಾತ್‌ನ ಕಚ್‌ಗೆ ಹೋಗಿದ್ದೆ. ಅಲ್ಲೊಂದು ಎಮ್ಮೆ ನೋಡಿ, ಇಷ್ಟ ಆಯ್ತು. ಯಾಕೆ ಇದನ್ನು ಅಮ್ಮನ ತೋಟಕ್ಕೆ ತಗೊಂಡು ಹೋಗಬಾರದು ಅಂದುಕೊಂಡು ಡಿಸೈಡ್ ಮಾಡಿದೆ.2000ಕಿ.ಮೀ ಜೊತೇಲಿ ಕರೆದುಕೊಂಡು ಬಂದೆ. ತಾಯಿಗೆ “ಮಂಡೋದರಿ’ ಮಗಳಿಗೆ “ಭೈರವಿ’ ಎಂದು ಹೆಸರಿಟ್ಟೆ. ಅಲ್ಲಿಗೆ ಅಮ್ಮನ ತೋಟಕ್ಕೆ ಹೊಸ ಅತಿಥಿ ಎಂಟ್ರಿ ಆದ್ರು’ ಎಂದಿದ್ದಾರೆ. ಪ್ರೇಮ್ ಹೊಸ ಸಿನಿಮಾದಲ್ಲಿ ರಾಣಾ ನಾಯಕರಾಗಿ ನಟಿಸಸುತ್ತಿದ್ದು, ರಿಶಾ ನಾಯಕಿ.