Advertisement

ಈ ಭಾರತೀಯನನ್ನು ಹೊರತುಪಡಿಸಿದರೆ ಟಿ20 ಯಲ್ಲಿ ಯಾರೂ ಕಠಿಣ ಬ್ಯಾಟ್ಸಮನ್ ಅಲ್ಲ: ಆರ್ಚರ್

09:37 AM May 13, 2020 | keerthan |

ಲಂಡನ್: ಜೋಫ್ರಾ ಆರ್ಚರ್ ಇಂಗ್ಲೆಂಡ್ ತಂಡ ಘಾತಕ ವೇಗಿ. ಏಕದಿನ ಕ್ರಿಕೆಟ್ ಮಾದರಿಯಲ್ಲಿ ಕ್ರಿಕೆಟ್ ಜನಕರು ವಿಶ್ವ ಚಾಂಪಿಯನ್ ಆಗುವಲ್ಲಿ ಜೋಫ್ರಾ ಆರ್ಚರ್ ನ ಪಾಲು ಬಹುದೊಡ್ಡದು. ಮೂರು ಮಾದರಿ ಕ್ರಿಕೆಟ್ ನಲ್ಲಿ ಮಿಂಚುತ್ತಿರು ಜೋಫ್ರಾ ಟಿ20 ಕ್ರಿಕೆಟ್ ಮಾದರಿಯಲ್ಲಿ ವಿಶ್ವದ ಕಠಿಣ ಬ್ಯಾಟ್ಸಮನ್ ರನ್ನು ಹೆಸರಿಸಿದ್ದಾರೆ.

Advertisement

ನ್ಯೂಜಿಲ್ಯಾಂಡ್ ನ ಸ್ಪಿನ್ನರ್ ಇಶ್ ಸೋಧಿ ಜೊತೆಗಿನ ಲೈವ್ ಮಾತುಕತೆಯಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಚುಟುಕು ಕ್ರಿಕೆಟ್ ನಲ್ಲಿ ಬೌಲಿಂಗ್ ಮಾಡಲು ಅತ್ಯಂತ ಕಠಿಣ ಬ್ಯಾಟ್ಸಮನ್ ರನ್ನು ಹೆಸರಿಸಿದ್ದಾರೆ.

ಜೋಫ್ರಾ ಆರ್ಚರ್ ಗೆ ಟಿ20ಯಲ್ಲಿ ಕಠಿಣ ಬ್ಯಾಟ್ಸಮನ್ ಭಾರತೀಯ. ಆದರೆ ನಾಯಕ ವಿರಾಟ್ ಕೊಹ್ಲಿ ಅಥವಾ ಉಪನಾಯಕ ರೋಹಿತ್ ಶರ್ಮಾ ಅಲ್ಲ. ಅವರೆಂದರೆ ಕನ್ನಡಿಗ ಕೆ ಎಲ್ ರಾಹುಲ್.

ಹೌದು ಕನ್ನಡಿಗ ಕೆ ಎಲ್ ರಾಹುಲ್ ಗೆ ಬೌಲಿಂಗ್ ಮಾಡುವುದು ಕಷ್ಟವಂತೆ. ಐಪಿಎಲ್’ನಲ್ಲಿ ನಾನು ಸಾಕಷ್ಟು ಬಾರಿ ಕೆ ಎಲ್ ರಾಹುಲ್ ಗೆ ಬಾಲ್ ಹಾಕಿದ್ದೇನೆ. ರಾಹುಲ್ ಹೊರತುಪಡಿಸಿದರೆ ಬೇರೆ ಯಾರೂ ನನಗೆ ಕಠಿಣ ಎನಿಸುತ್ತಿಲ್ಲ ಎಂದು ಆರ್ಚರ್ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next