Advertisement

KSCA ಪರ ಬೌಲಿಂಗ್‌ ಮಾಡಿದ ಇಂಗ್ಲೆಂಡ್‌ ತಂಡದ ವೇಗಿ ಜೋಫ್ರಾ ಆರ್ಚರ್‌!

12:08 AM Mar 16, 2024 | Team Udayavani |

ಆಲೂರು: ಇಂಗ್ಲೆಂಡ್‌ ತಂಡದ ವೇಗಿ ಜೋಫ್ರಾ ಆರ್ಚರ್‌ ಕೆಎಸ್‌ಸಿಎ ಪರ ಬೌಲಿಂಗ್‌ ಮಾಡಿದ ಸ್ವಾರಸ್ಯಕರ ವಿದ್ಯಮಾನವಿದು.

Advertisement

ಇಲ್ಲಿ ಕೆಎಸ್‌ಸಿಎ ಎಲೆವೆನ್‌ ಮತ್ತು ಸಸೆಕ್ಸ್‌ ಕೌಂಟಿ ನಡುವೆ ಅಭ್ಯಾಸ ಪಂದ್ಯವೊಂದು ನಡೆಯುತ್ತಿದೆ. ಇದರಲ್ಲಿ ಜೋಫ್ರಾ ಆರ್ಚರ್‌ ಕೆಎಸ್‌ಸಿಎ ಇಲೆವೆನ್‌ ತಂಡವನ್ನು ಪ್ರತಿನಿಧಿಸಿ ತಮ್ಮದೇ ಕೌಂಟಿ ವಿರುದ್ಧ 7 ಓವರ್‌ಗಳ ಸ್ಪೆಲ್‌ ಒಂದನ್ನು ನಡೆಸಿದರು. 22 ರನ್ನಿತ್ತು 2 ವಿಕೆಟ್‌ ಉಡಾಯಿಸಿದರು.

ಮಣಿಗಂಟಿನ ನೋವಿನಿಂದಾಗಿ ಮಾರ್ಚ್‌ 2023ರಿಂದ ಜೋಫ್ರಾ ಆರ್ಚರ್‌ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಮುಂಬೈ ಪರ ಐಪಿಎಲ್‌ ಆಡುತ್ತಿದ್ದಾಗ ನಡುವಲ್ಲೇ ವಾಪಸಾಗಿದ್ದರು.
ಕೆಎಸ್‌ಸಿಎಯ 201ಕ್ಕೆ ಉತ್ತರವಾಗಿ ಸಸೆಕ್ಸ್‌ 365 ರನ್‌ ಪೇರಿಸಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೆಎಸ್‌ಸಿಎ 4ಕ್ಕೆ 162 ರನ್‌ ಗಳಿಸುವುದರೊಂದಿಗೆ 2 ದಿನಗಳ ಪಂದ್ಯ ಡ್ರಾಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next