ಇಂಗ್ಲೆಂಡಿನ ಪ್ರಾಥಮಿಕ ತಂಡದಲ್ಲಿ ಇವರಿಬ್ಬರೂ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಆರ್ಚರ್ ಮೀಸಲು ಆಟಗಾರರ ಯಾದಿಯಲ್ಲಿದ್ದರು. ಇವರಿಬ್ಬರಿಗಾಗಿ ಡೇವಿಡ್ ವಿಲ್ಲಿ ಮತ್ತು ಜೋ ಡೆನ್ಲಿ ಅವರನ್ನು ಹೊರಗಿರಿ ಸಲಾಯಿತು. ಉದ್ದೀಪನ ವಿವಾದದಲ್ಲಿ ಸಿಲುಕಿ ನಿಷೇಧ ಕ್ಕೊಳಗಾಗಿರುವ ಆರಂಭಕಾರ ಅಲೆಕ್ಸ್ ಹೇಲ್ಸ್ ಬದಲು ಜೇಮ್ಸ್ ವಿನ್ಸ್ ಮುಂದುವರಿಯಲಿದ್ದಾರೆ.
Advertisement
ಪ್ರಚಂಡ ಫಾರ್ಮ್ನಲ್ಲಿದ್ದ ಜೋಫ್ರಾ ಆರ್ಚರ್ ಅವರನ್ನು ಕೈಬಿಟ್ಟದ್ದು ಇಂಗ್ಲೆಂಡ್ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಆರ್ಚರ್ ಇಲ್ಲದೇ ವಿಶ್ವಕಪ್ ತಂಡ ಪರಿಪೂರ್ಣವಾಗದು ಎಂಬುದೇ ಎಲ್ಲರ ವಾದವಾಗಿತ್ತು.
ಇಯಾನ್ ಮಾರ್ಗನ್ (ನಾಯಕ), ಜಾಸನ್ ರಾಯ್, ಜಾನಿ ಬೇರ್‌ಸ್ಟೊ, ಜೋ ರೂಟ್, ಜೇಮ್ಸ್ ವಿನ್ಸ್, ಜಾಸ್ ಬಟ್ಲರ್, ಬೆನ್ ಸ್ಟೋಕ್ಸ್, ಮೊಯಿನ್ ಅಲಿ, ಆದಿಲ್ ರಶೀದ್, ಕ್ರಿಸ್ ವೋಕ್ಸ್, ಲಿಯಮ್ ಪ್ಲಂಕೆಟ್, ಟಾಮ್ ಕರನ್, ಲಿಯಮ್ ಡಾಸನ್, ಜೋಫ್ರಾ ಆರ್ಚರ್, ಮಾರ್ಕ್ ವುಡ್.