Advertisement

ರ್‍ಯಾಂಕಿಂಗ್‌: 5ರಿಂದ ಅಗ್ರಸ್ಥಾನಕ್ಕೆ ನೆಗೆದ ರೂಟ್‌

09:43 PM Sep 01, 2021 | Team Udayavani |

ದುಬಾೖ: ಭಾರತದೆದುರಿನ ಸರಣಿಯಲ್ಲಿ ಹ್ಯಾಟ್ರಿಕ್‌ ಶತಕದೊಂದಿಗೆ 507 ರನ್‌ ರಾಶಿ ಹಾಕಿರುವ ಇಂಗ್ಲೆಂಡ್‌ ಟೆಸ್ಟ್‌ ತಂಡದ ನಾಯಕ ಜೋ ರೂಟ್‌ ನೂತನ ಐಸಿಸಿ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೆ ನೆಗೆದಿದ್ದಾರೆ.

Advertisement

ಈ ಸರಣಿಗೂ ಮುನ್ನ ರೂಟ್‌ 5ನೇ ಸ್ಥಾನದಲ್ಲಿದ್ದರು. ಲೀಡ್ಸ್‌ ಟೆಸ್ಟ್‌ ಪಂದ್ಯಕ್ಕೂ ಮುನ್ನ ದ್ವಿತೀಯ ಸ್ಥಾನಕ್ಕೆ ಏರಿದರು. ಐದರಿಂದ ಅಗ್ರಸ್ಥಾನಕ್ಕೆ ಏರುವ ಹಾದಿಯಲ್ಲಿ ಅವರು ಕೊಹ್ಲಿ, ಲಬುಶೇನ್‌, ಸ್ಮಿತ್‌ ಮತ್ತು ವಿಲಿಯಮ್ಸನ್‌ ಅವರನ್ನೆಲ್ಲ ಹಿಂದಿಕ್ಕಿದರು. 916 ಅಂಕ ಹೊಂದಿರುವ ರೂಟ್‌, ದ್ವಿತೀಯ ಸ್ಥಾನಿ ವಿಲಿಯಮ್ಸನ್‌ಗಿಂತ 15 ಅಂಕಗಳ ಮುನ್ನಡೆಯಲ್ಲಿದ್ದಾರೆ.

917 ರೂಟ್‌ ಅವರ ಜೀವನಶ್ರೇಷ್ಠ ಅಂಕವಾಗಿದೆ. ಇದನ್ನ ವರು 2015ರ ಆ್ಯಶಸ್‌ ಸರಣಿಯ ವೇಳೆ ಗಳಿಸಿದ್ದರು. ಇವರಿಗಿಂತ ಹೆಚ್ಚಿನ ಅಂಕ ಹೊಂದಿರುವ ಇಂಗ್ಲೆಂಡಿನ ಬ್ಯಾಟ್ಸ್‌ ಮನ್‌ಗಳೆಂದರೆ ಲೆನ್‌ ಹಟನ್‌, ಜಾಕ್‌ ಹಾಬ್ಸ್, ಪೀಟರ್‌ ಮೇ ಮತ್ತು ಡೆನ್ನಿಸ್‌ ಕಾಂಪ್ಟನ್‌.

ಕೊಹ್ಲಿ ಕುಸಿತ:

ಇಂಗ್ಲೆಂಡ್‌ ಎದುರಿನ ಸರಣಿಯಲ್ಲಿ ಬ್ಯಾಟಿಂಗ್‌ ವೈಫ‌ಲ್ಯ ಕಾಣುತ್ತಿರುವ ನಾಯಕ ವಿರಾಟ್‌ ಕೊಹ್ಲಿ ಒಂದು ಸ್ಥಾನ ಕೆಳಗಿಳಿದು ಆರಕ್ಕೆ ಬಂದಿದ್ದಾರೆ. ಆರರಲ್ಲಿದ್ದ ರೋಹಿತ್‌ ಶರ್ಮ ಐದಕ್ಕೆ ಏರಿದ್ದಾರೆ. ಇದು ರೋಹಿತ್‌ ಅವರ ಅತ್ಯುತ್ತಮ ರ್‍ಯಾಂಕಿಂಗ್‌ ಆಗಿದೆ.

Advertisement

ಕೊನೆಯ ಸಲ ಕೊಹ್ಲಿಗಿಂತ ಮೇಲ್ಮಟ್ಟದಲ್ಲಿದ್ದ ಭಾರತದ ಆಟಗಾರನೆಂದರೆ ಚೇತೇಶ್ವರ್‌ ಪೂಜಾರ. 2017ರ ನವಂಬರ್‌ನಲ್ಲಿ ಪೂಜಾರ 2ನೇ, ಕೊಹ್ಲಿ 5ನೇ ಸ್ಥಾನದಲ್ಲಿದ್ದರು. ಪೂಜಾರ ಈಗ 15ನೇ ರ್‍ಯಾಂಕಿಂಗ್‌ ಹೊಂದಿದ್ದಾರೆ.

ಬೌಲಿಂಗ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾ 10ರಿಂದ 9ಕ್ಕೆ ಏರಿದ್ದಾರೆ.

ಟಾಪ್‌-10 ಬ್ಯಾಟ್ಸ್‌ಮನ್‌ :

  1. ಜೋ ರೂಟ್‌ 916
  2. ಕೇನ್‌ ವಿಲಿಯಮ್ಸನ್‌ 901
  3. ಸ್ಟೀವನ್‌ ಸ್ಮಿತ್‌ 891
  4. ಮಾರ್ನಸ್‌ ಲಬುಶೇನ್‌ 878
  5. ರೋಹಿತ್‌ ಶರ್ಮ 773
  6. ವಿರಾಟ್‌ ಕೊಹ್ಲಿ 766
  7. ಬಾಬರ್‌ ಆಜಂ 749
  8. ಡೇವಿಡ್‌ ವಾರ್ನರ್‌ 724
  9. ಕ್ವಿಂಟನ್‌ ಡಿ ಕಾಕ್‌ 717
  10. ಹೆನ್ರಿ ನಿಕೋಲ್ಸ್‌ 714
Advertisement

Udayavani is now on Telegram. Click here to join our channel and stay updated with the latest news.

Next