Advertisement

Joe Root: ಟೆಸ್ಟ್‌ ಕ್ರಿಕೆಟ್‌ನಲ್ಲಿ 12 ಸಾವಿರ ರನ್‌ ಪೂರೈಸಿದ ರೂಟ್‌

10:13 PM Jul 27, 2024 | Team Udayavani |

ಬರ್ಮಿಂಗ್‌ಹ್ಯಾಮ್‌: ವೆಸ್ಟ್‌ ಇಂಡೀಸ್‌ ವಿರುದ್ಧದ 3ನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಬ್ಯಾಟರ್‌ ಜೋ ರೂಟ್‌ 87 ರನ್‌ ಗಳಿಸಿದ ವೇಳೆ ಮೈಲುಗಲ್ಲೊಂದನ್ನು ನೆಟ್ಟಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 12 ಸಾವಿರ ರನ್‌ ಪೂರೈಸಿದ ಅವರು, ವಿಂಡೀಸ್‌ ದಂತಕತೆ ಬ್ರಿಯಾನ್‌ ಲಾರಾ ದಾಖಲೆಯನ್ನು ಬದಿಗಟ್ಟಿದ್ದಾರೆ.

Advertisement

131 ಪಂದ್ಯಗಳಲ್ಲಿ 11,953 ರನ್‌ ಬಾರಿಸಿದ್ದ ಲಾರಾ, ಟೆಸ್ಟ್‌ ಕ್ರಿಕೆಟ್‌ನ ಅತ್ಯಧಿಕ ರನ್‌ ಸಾಧಕರ ಯಾದಿಯಲ್ಲಿ 7ನೇ ಸ್ಥಾನದಲ್ಲಿದ್ದರು. ಆದರೆ ರೂಟ್‌ ಈಗ ಲಾರಾ ಅವರನ್ನು ಕೆಳಗಿಳಿಸಿ 7ನೇ ಸ್ಥಾನಕ್ಕೇರಿದ್ದಾರೆ.

ಪಂದ್ಯಕ್ಕೆ ಮಳೆ ಅಡ್ಡಿ:

ದ್ವಿತೀಯ ದಿನದಾಟ ಮಳೆಯಿಂದ ನಿಂತಾಗ ಇಂಗ್ಲೆಂಡ್‌ 7 ವಿಕೆಟಿಗೆ 274 ರನ್‌ ಗಳಿಸಿತ್ತು. ವೆಸ್ಟ್‌ ಇಂಡೀಸ್‌ ಮೊದಲ ಇನ್ನಿಂಗ್ಸ್‌ನಲ್ಲಿ 282 ರನ್‌ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next