Advertisement
ಗೆಲುವಿಗೆ 277 ರನ್ ಸವಾಲು ಪಡೆದಿದ್ದ ಇಂಗ್ಲೆಂಡ್, ಒಂದು ಹಂತದಲ್ಲಿ 69ಕ್ಕೆ 4 ವಿಕೆಟ್ ಕಳೆದುಕೊಂಡು ಅಪಾಯದ ಸ್ಥಿತಿಯಲ್ಲಿತ್ತು. ಆಗ ಕ್ರೀಸ್ ಆಕ್ರಮಿಸಿಕೊಂಡ ಜೋ ರೂಟ್ ಮತ್ತು ಬೆನ್ ಸ್ಟೋಕ್ಸ್ 5ನೇ ವಿಕೆಟಿಗೆ 90 ರನ್ ಪೇರಿಸಿ ತಂಡಕ್ಕೆ ರಕ್ಷಣೆ ಒದಗಿಸಿದರು. ಸ್ಟೋಕ್ಸ್ 54 ರನ್ ಬಾರಿಸಿ ಕಪ್ತಾನನ ಆಟವಾಡಿದರು.
170 ಎಸೆತಗಳನ್ನು ಎದುರಿಸಿದ ಜೋ ರೂಟ್ 115 ರನ್ನುಗಳ ಸ್ಮರಣೀಯ ಇನ್ನಿಂಗ್ಸ್ ಒಂದನ್ನು ಕಟ್ಟಿದರು. ಅವರ 26ನೇ ಶತಕ ಹಾಗೂ 10 ಸಾವಿರ ರನ್ ಸಾಧನೆ ಒಟ್ಟೊಟ್ಟಿಗೆ ಆದುದೊಂದು ವಿಶೇಷ. ರೂಟ್ 10 ಸಾವಿರ ರನ್ ಗಳಿಸಿದ ವಿಶ್ವದ 14ನೇ ಹಾಗೂ ಇಂಗ್ಲೆಂಡಿನ ಕೇವಲ 2ನೇ ಕ್ರಿಕೆಟಿಗ. ಅಲಸ್ಟೇರ್ ಕುಕ್ ಮೊದಲಿಗ (12,472 ರನ್).
ಆಸ್ಟ್ರೇಲಿಯ ವಿರುದ್ಧ ಅನುಭವಿಸಿದ 0-4 ಆ್ಯಶಸ್ ಸರಣಿ ಸೋಲಿನ ಸಂಕಟದಿಂದ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದ ಜೋ ರೂಟ್, ಈಗ ಲಾರ್ಡ್ಸ್ ಟೆಸ್ಟ್ ಪಂದ್ಯದ ಗೆಲುವಿನ ರೂವಾರಿಯಾಗಿ ಮೂಡಿಬಂದದ್ದು ಇಂಗ್ಲೆಂಡ್ ಪಾಲಿನ ಮಹತ್ವದ ಸಂಗತಿಯಾಗಿದೆ. ಸಂಕ್ಷಿಪ್ತ ಸ್ಕೋರ್
ನ್ಯೂಜಿಲ್ಯಾಂಡ್-132 ಮತ್ತು 285. ಇಂಗ್ಲೆಂಡ್-141 ಮತ್ತು 5 ವಿಕೆಟಿಗೆ 279 (ರೂಟ್ ಔಟಾಗದೆ 115, ಸ್ಟೋಕ್ಸ್ 54, ಪೋಕ್ಸ್ ಔಟಾಗದೆ 32, ಜೇಮಿಸನ್ 79ಕ್ಕೆ 4). ಪಂದ್ಯಶ್ರೇಷ್ಠ: ಜೋ ರೂಟ್.
Related Articles
– ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಿದ ವಿಶ್ವದ 14ನೇ, ಇಂಗ್ಲೆಂಡಿನ 2ನೇ ಕ್ರಿಕೆಟಿಗನೆನಿಸಿದರು. ಅಲಸ್ಟೇರ್ ಕುಕ್ ಮೊದಲಿಗ (12,472).
– ಜೋ ರೂಟ್ 10 ಸಾವಿರ ರನ್ ಗಳಿಸಿದ ಕಿರಿಯ ಆಟಗಾರನೆಂಬ ಕುಕ್ ದಾಖಲೆಯನ್ನು ಸರಿದೂಗಿಸಿದರು (ಇಬ್ಬರದೂ 31 ವರ್ಷ, 157 ದಿನ).
– ರೂಟ್ ನ್ಯೂಜಿಲ್ಯಾಂಡ್ ವಿರುದ್ಧ ಸಾವಿರ ರನ್ ಪೂರ್ತಿಗೊಳಿಸಿದರು. ಇದರೊಂದಿಗೆ ಒಟ್ಟು 7 ತಂಡಗಳ ವಿರುದ್ಧ ಸಾವಿರ ರನ್ ಪೇರಿಸಿದಂತಾಯಿತು.
– ಬೆನ್ ಸ್ಟೋಕ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 200 ಸಿಕ್ಸರ್ ಬಾರಿಸಿದ ಇಂಗ್ಲೆಂಡಿನ 3ನೇ ಕ್ರಿಕೆಟಿಗನೆನಿಸಿದರು. ಉಳಿದಿಬ್ಬರೆಂದರೆ ಇಯಾನ್ ಮಾರ್ಗನ್ (328) ಮತ್ತು ಜಾಸ್ ಬಟ್ಲರ್ (248).
– ಡ್ಯಾರಿಲ್ ಮಿಚೆಲ್ ಜೀವನಶ್ರೇಷ್ಠ ಬ್ಯಾಟಿಂಗ್ ಪ್ರದರ್ಶಿಸಿದರು (108). ಕಳೆದ ವರ್ಷ ಪಾಕಿಸ್ಥಾನ ವಿರುದ್ಧ ಅಜೇಯ 102 ರನ್ ಹೊಡೆದದ್ದು ಅವರ ಈವರೆಗಿನ ಅತ್ಯಧಿಕ ಗಳಿಕೆಯಾಗಿತ್ತು.
– ರೂಟ್ ತವರಲ್ಲಿ ಅತ್ಯಧಿಕ 15 ಶತಕ ಬಾರಿಸಿದ ಇಂಗ್ಲೆಂಡಿನ 5ನೇ ಬ್ಯಾಟರ್ ಎನಿಸಿದರು.
– ರೂಟ್ ಸಕ್ರಿಯ ಕ್ರಿಕೆಟಿಗರಲ್ಲಿ ಅತ್ಯಧಿಕ ಟೆಸ್ಟ್ ಬಾರಿಸಿದ 2ನೇ ಆಟಗಾರ (26). ವಿರಾಟ್ ಕೊಹ್ಲಿ ಮತ್ತು ಸ್ಟೀವನ್ ಸ್ಮಿತ್ ಅಗ್ರಸ್ಥಾನದಲ್ಲಿದ್ದಾರೆ (27 ಶತಕ).
-ಕೇನ್ ವಿಲಿಯಮ್ಸನ್ ಇಂಗ್ಲೆಂಡ್ ವಿರುದ್ಧ ಇಂಗ್ಲೆಂಡ್ ನೆಲದಲ್ಲಿ 23.16ರ ಸರಾಸರಿಯಲ್ಲಿ 278 ರನ್ ಹೊಡೆದರು. ಇದರಲ್ಲಿ ಒಂದು ಶತಕ, ಒಂದು ಅರ್ಧ ಶತಕ ಸೇರಿದೆ.
-ಸ್ಟೋಕ್ಸ್ ಟೆಸ್ಟ್ ಕ್ರಿಕೆಟಿನ ಗರಿಷ್ಠ ಸಿಕ್ಸರ್ ಸಾಧಕರ ಯಾದಿಯಲ್ಲಿ 5ನೇ ಸ್ಥಾನಿಯಾದರು (93 ಸಿಕ್ಸರ್). ಈ ಸಂದರ್ಭದಲ್ಲಿ ಅವರು ವೀರೇಂದ್ರ ಸೆಹವಾಗ್ ದಾಖಲೆಯನ್ನು ಮುರಿದರು (91 ಸಿಕ್ಸರ್).
– ಜೋ ರೂಟ್ 2021ರಿಂದೀಚೆ ಆಡಿದ 21 ಪಂದ್ಯಗಳಲ್ಲಿ 56.20ರ ಸರಾಸರಿಯಲ್ಲಿ 2,192 ರನ್ ಬಾರಿಸಿದ್ದಾರೆ. ಇದರಲ್ಲಿ 9 ಶತಕ, 4 ಅರ್ಧ ಶತಕ ಸೇರಿದೆ.
– ಜೇಮ್ಸ್ ಆ್ಯಂಡರ್ಸನ್ ಅತ್ಯಧಿಕ 61 ಸಲ 4 ಪ್ಲಸ್ ವಿಕೆಟ್ ಉರುಳಿಸಿ ರಿಚರ್ಡ್ ಹ್ಯಾಡ್ಲಿ ಅವರ ದಾಖಲೆಯನ್ನು ಸರಿದೂಗಿಸಿದ ವೇಗದ ಬೌಲರ್ ಎನಿಸಿದರು.
Advertisement