ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಯಾಗಿರುವ 77 ವರ್ಷದ ಜೋ ಬೈಡೆನ್, ತಮ್ಮ 50 ವರ್ಷಗಳ ರಾಜಕೀಯ ಜೀವನದಲ್ಲಿ ಆರು ಬಾರಿ ಸೆನೇಟರ್ ಆಗಿ(36 ವರ್ಷಗಳವರೆಗೆ) ಕಾರ್ಯನಿರ್ವಹಿಸಿದವರು. ಒಬಾಮಾ ಅವಧಿಯಲ್ಲಿ 8 ವರ್ಷ ಅಮೆರಿಕದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಹೆಸರು ಮಾಡಿದವರು. ಈ ಬಾರಿ ಚುನಾವಣೆಯಲ್ಲಿ ಗೆದ್ದರೆ ಅಮೆರಿಕದ ಇದುವರೆಗಿನ ಅತಿ ಹಿರಿಯ ಅಧ್ಯಕ್ಷರೆಂದು ಕರೆಸಿಕೊಳ್ಳಲಿದ್ದಾರೆ.
Advertisement
ಕೋವಿಡ್ ಸಮಯದಲ್ಲಿ ಸಕ್ರಿಯಟ್ರಂಪ್ರ ಆರಂಭಿಕ ಅಸಡ್ಡೆಯೇ ರೋಗ ಪ್ರಸರಣ ಹೆಚ್ಚಲು ಕಾರಣ ಎಂದು ಬೈಡೆನ್ ಆರಂಭದಿಂದಲೂ ಆರೋಪಿಸುತ್ತಾ ಬಂದಿದ್ದಾರೆ. ಆದರೆ, ಇದೇ ವೇಳೆಯಲ್ಲೇ ಅವರು ತಮ್ಮ ಬೆಂಬಲಿಗರಿಗೆ ಸುರಕ್ಷತಾ ಕ್ರಮಗಳನ್ನು ಪಾಲಿಸಲು ವಿನಂತಿಸುತ್ತಾ, ಆರೋಗ್ಯ ಪರಿಣತರು ಹಾಗೂ ಆರ್ಥಿಕ ತಜ್ಞರ ಅಭಿಪ್ರಾಯಗಳನ್ನು ಸಂಗ್ರಹಿಸಿ ಸರಕಾರಕ್ಕೆ ಶಿಫಾರಸು ಮಾಡುತ್ತಾ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಬೆಂಬಲಿಗರಿಗೆ ಸೋಂಕು ಪ್ರಸರಣದ ಅಪಾಯ ಎದುರಾಗುತ್ತದೆಂಬ ಕಾರಣಕ್ಕಾಗಿ ಪಕ್ಷದ ರ್ಯಾಲಿಗಳನ್ನು, ಮನೆಮನೆ ಪ್ರಚಾರವನ್ನು ಕಡಿತಗೊಳಿಸಿದ್ದಾರೆ.
ಬೈಡೆನ್ ಆಯ್ಕೆಗೂ ಮೊದಲು, ಹಿರಿಯ ರಾಜಕಾರಣಿ ಬರ್ನಿ ಸ್ಯಾಂಡರ್ಸ್ ಅವರೇ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಬಹುದೆಂಬ ನಿರೀಕ್ಷೆ ಯಿತ್ತು. ಆದರೆ, ತೀವ್ರ ಎಡಪಂಥೀಯ ಧೋರಣೆಯಿರುವ ಸ್ಯಾಂಡರ್ಸ್‌ರನ್ನು ಅಮೆರಿಕದ ಕಾರ್ಪೊರೇಟ್ ವಲಯ ದ್ವೇಷಿಸುತ್ತದೆ. ಈ ಕಾರಣಕ್ಕಾಗಿಯೇ ಎಲ್ಲ ವರ್ಗಗಳನ್ನೂ ತಲುಪಬಲ್ಲ, ಮೃದು ಮಾತಿನ ಸಮಾಜವಾದಿ ಬೈಡೆನ್‌ರನ್ನೇ ಡೆಮಾಕ್ರಟಿಕ್ ಪಕ್ಷ ಆಯ್ಕೆ ಮಾಡಿದೆ ಎನ್ನಲಾಗುತ್ತದೆ. ಒಬಾಮಾ-ಬೈಡೆನ್ ಮೀಮ್ಸ್
ಬೈಡೆನ್ ಕಳೆದ ಮೂವತ್ತು ವರ್ಷಗಳಿಂದಲೂ ಅಧ್ಯಕ್ಷನಾಗಬೇಕೆಂಬ ಬಯಕೆ ಹೊಂದಿರುವವರು. ಒಬಾಮಾ ಮೊದಲ ಬಾರಿ ಸ್ಪರ್ಧಿಸಿದ್ದ ವೇಳೆಯಲ್ಲಿ ಡೆಮಾಕ್ರಟಿಕ್ ಪಕ್ಷದಲ್ಲಿ ಒಬಾಮಾ ಅವರಿಗೆ ಪರ್ಯಾಯವಾಗಲೂ ಪ್ರಯತ್ನಿಸಿ ವಿಫಲರಾಗಿ ದ್ದರು. ಆದರೆ, ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ ನಂತರ, ಒಬಾಮಾರ ಅತ್ಯಾಪ್ತರಾಗಿ ಬದಲಾದರು. ಇವರಿಬ್ಬರ ದೋಸ್ತಿ ಯಾವ ಮಟ್ಟಕ್ಕೆ ಸದ್ದುಮಾಡುತ್ತಿತ್ತು ಎಂದರೆ, ಗೆಳೆತನ ಎಂದರೆ ಒಬಾಮಾ- ಬೈಡೆನ್‌ರದ್ದು ಎಂದು ಮೀಮ್‌ಗಳು ಹರಿದಾಡುತ್ತಿದ್ದವು. ಈಗ ಒಬಾಮಾ ಬೈಡೆನ್ ಪರ ಜೋರಾಗಿಯೇ ಪ್ರಚಾರ ಮಾಡುತ್ತಿದ್ದಾರೆ.
Related Articles
ಬೈಡೆನ್‌ರ ವಿರುದ್ಧ ಎದುರಾಳಿಗಳು ಮಾಡುವ ಪ್ರಮುಖ ಆರೋಪಗಳಲ್ಲಿ “ಅವರು ಭಾಷಣಗಳನ್ನು ಕದಿಯುತ್ತಾರೆ, ಸ್ವಂತ ವಿಚಾರವಿಲ್ಲದ ಮನುಷ್ಯ’ ಎನ್ನುವುದೂ ಒಂದು. 1988ರ ಚುನಾವಣೆಯ ಸಮಯದಲ್ಲಿ ಅಧ್ಯಕ್ಷೀಯ ಅಭ್ಯರ್ಥಿ ಸ್ಥಾನದ ಆಕಾಂಕ್ಷಿಯಾಗಿದ್ದ ಬೈಡೆನ್ ಕಾರ್ಯಕ್ರಮವೊಂದರಲ್ಲಿ ಮಾಡಿದ ಭಾಷಣ ಅವರ ಓಟಕ್ಕೆ ಮುಳುವಾಯಿತು. ಬ್ರಿಟನ್‌ನ ಲೇಬರ್ ಪಾರ್ಟಿಯ ನಾಯಕ ನೀಲ್ ಕಿನ್ನೋಕ್ ಮಾಡಿದ್ದ ಭಾಷಣದಲ್ಲಿನ ಕೆಲವು ಭಾಗಗಳನ್ನು ಬೈಡೆನ್ ಯಥಾವತ್ತಾಗಿ ಎತ್ತಿಕೊಂಡಿದ್ದಾರೆಂದು ವಿವಾದವಾಯಿತು. ಇದಷ್ಟೇ ಅಲ್ಲದೇ, ದಶಕಗಳ ಹಿಂದೆ ರಾಬರ್ಟ್. ಎಫ್. ಕೆನಡಿ ಹಾಗೂ ಹ್ಯೂಬರ್ಟ್ ಹಂಫ್ರಿಯವರು ಮಾಡಿದ್ದ ಭಾಷಣಗಳನ್ನೂ ಬೈಡೆನ್ ನಕಲಿಸಿದ್ದಾರೆ ಎನ್ನುವ ಆರೋಪವೂ ಎದುರಾಗಿತ್ತು.
Advertisement