Advertisement

ಕೇಂದ್ರ ಸರಕಾರ ಜಾರಿಗೆ ತಂದ ಕೃಷಿ ಕಾಯ್ದೆಗೆ ಅಮೆರಿಕ ಬೆಂಬಲ

12:29 AM Feb 05, 2021 | Team Udayavani |

ವಾಷಿಂಗ್ಟನ್: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ವಿವಿಧೆಡೆ ರೈತರು ನಡೆಸುತ್ತಿರುವ ಪ್ರತಿಭಟನೆಯ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಬೈಡೆನ್‌ ನೇತೃತ್ವದ ಸರಕಾರ, ರೈತರು ಮತ್ತು ಭಾರತ ಸರಕಾರ ಶಾಂತಿಯುತವಾಗಿ ಮಾತುಕತೆ ನಡೆಸುವ ಮೂಲಕ ಸಮಸ್ಯೆಯನ್ನು ಸಮರ್ಪಕವಾಗಿ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ.

Advertisement

ಜತೆಗೆ ಭಾರತ ಸರಕಾರವು ಮಾರುಕಟ್ಟೆ ದಕ್ಷತೆಯ ಸುಧಾರಣೆಗೆ ಮತ್ತು ಖಾಸಗಿ ವಲಯದಿಂದ ಹೆಚ್ಚು ಹೂಡಿಕೆಯನ್ನು ಆಕರ್ಷಿಸಲು ಕೈಗೊಂಡಿರುವ ಕ್ರಮಗಳು ಸ್ವಾಗತಾರ್ಹ ಎಂದೂ ಅದು ಹೇಳಿದೆ.

ಈ ಮೂಲಕ ಅಮೆರಿಕವು ಕೇಂದ್ರ ಸರಕಾರ ಜಾರಿ ಮಾಡಿರುವ ಮೂರು ಕೃಷಿ ಕಾಯ್ದೆಗಳನ್ನು ಬೆಂಬಲಿಸಿ ಮಾತನಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next