Advertisement
ಇವರೊಂದಿಗೆ ಚುಂಗ್ ಹಿಯೋನ್, ಡೊಮಿನಿಕ್ ಥೀಮ್, ಥಾಮಸ್ ಬೆರ್ಡಿಶ್, ಫ್ಯಾಬಿಯೊ ಫೊಗಿನಿ ಕೂಡ 3ನೇ ಸುತ್ತನ್ನು ದಾಟಿದ್ದಾರೆ. ಇವರಲ್ಲಿ ಚುಂಗ್ ಹಿಯೋನ್ ಆಸ್ಟ್ರೇಲಿಯನ್ ಓಪನ್ ಪ್ರೀ-ಕ್ವಾರ್ಟರ್ ಫೈನಲ್ ತಲಪಿದ ದಕ್ಷಿಣ ಕೊರಿಯಾದ ಮೊದಲ ಟೆನಿಸಿಗನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Related Articles
Advertisement
ಆಸ್ಟ್ರಿಯಾದ ಡೊಮಿನಿಕ್ ಥೀಮ್ 6-4, 6-2, 7-5ರಿಂದ ಫ್ರಾನ್ಸ್‌ನ ಆಡ್ರಿಯನ್ ಮನ್ನಾರಿನೊ ಅವರನ್ನು ಸೋಲಿಸಿ ಅಮೆರಿಕದ ಟೆನ್ನಿಸ್ ಸ್ಯಾಂಡ್‌ಗೆÅನ್ ಅವರನ್ನು ಎದುರಿಸಲು ಅಣಿಯಾದರು.
ಶರಪೋವಾಗೆ ಆಘಾತ: ಮಾಜಿ ಚಾಂಪಿಯನ್‌ಗಳಿಬ್ಬರ 3ನೇ ಸುತ್ತಿನ ಹೋರಾಟದಲ್ಲಿ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ರಷ್ಯದ ಮರಿಯಾ ಶರಪೋವಾ ಅವರನ್ನು 6-1, 6-3 ಅಂತರದಿಂದ ಕೆಡವಿ ಆಸ್ಟ್ರೇಲಿಯನ್ ಓಪನ್ ವನಿತಾ ಸಿಂಗಲ್ಸ್ ವಿಭಾಗದ ಪ್ರೀ-ಕ್ವಾರ್ಟರ್ ಫೈನಲ್‌ಗೆ ಮುನ್ನಡೆದಿದ್ದಾರೆ. ಸಿಮೋನಾ ಹಾಲೆಪ್, ಮ್ಯಾಡಿಸನ್ ಕೇಯ್ಸ, ಕ್ಯಾರೋಲಿನಾ ಪ್ಲಿಸ್ಕೋವಾ, ನವೋಮಿ ಒಸಾಕಾ, ಕ್ಯಾರೋಲಿನ್ ಗಾರ್ಸಿಯಾ ಕೂಡ ತೃತೀಯ ಸುತ್ತು ದಾಟುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಪೋಲೆಂಡಿನ ಅಗ್ನಿàಸ್ಕಾ ರಾದ್ವಂಸ್ಕಾ ಹೊರಬಿದ್ದಿದ್ದಾರೆ.
ಡಬಲ್ಸ್: ಪೇಸ್-ರಾಜ ಜೋಡಿಗೆ ಜಯ: ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್‌ನಲ್ಲಿ ಭಾರತದ ಲಿಯಾಂಡರ್ ಪೇಸ್-ಪುರವ್ ರಾಜ ಪ್ರೀ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಭಾರತದ ಮೂರೂ ಜೋಡಿಗಳು 16ರ ಸುತ್ತು ತಲಪಿದಂತಾಯಿತು. ಇದಕ್ಕೂ ಮುನ್ನ ರೋಹನ್ ಬೋಪಣ್ಣ, ದಿವಿಜ್ ಶರಣ್ ಜೋಡಿಯೂ ಈ ಹಂತಕ್ಕೇರಿತ್ತು.
ಶನಿವಾರದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಪೇಸ್-ರಾಜ ಸೇರಿಕೊಂಡು 5ನೇ ಶ್ರೇಯಾಂಕದ ಜಾಮಿ ಮರ್ರೆ (ಬ್ರಿಟನ್)-ಬ್ರುನೊ ಸೊರೆಸ್ (ಬ್ರೆಜಿಲ್) ವಿರುದ್ಧ 2 ಗಂಟೆ, 54 ನಿಮಿಷಗಳ ಭಾರೀ ಹೋರಾಟ ನಡೆಸಿ 7-6 (3), 5-7, 7-6 (6) ಅಂತರದಿಂದ ಗೆದ್ದು ಬಂದರು.
ಇವರಿನ್ನು ಕೊಲಂಬಿಯಾದ 11ನೇ ಶ್ರೇಯಾಂಕದ ಸಬಾಸ್ಟಿಯನ್ ಕಬಾಲ್-ರಾಬರ್ಟ್ ಫರಾಹ್ ವಿರುದ್ಧ ಆಡಲಿದ್ದಾರೆ. 44ರ ಹರೆಯದ ಪೇಸ್ 2012ರಲ್ಲಿ ಕೊನೆಯ ಸಲ ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಚಾಂಪಿಯನ್ ಆಗಿದ್ದರು. ಅಂದು ಭಾರತೀಯನ ಜತೆಗಾರನಾಗಿದ್ದವರು ರಾಡೆಕ್ ಸ್ಟೆಪನೆಕ್. ಇವರಿಬ್ಬರು ಕೂಡಿಕೊಂಡು ಅಂದಿನ ನಂ.1 ಆಟಗಾರರಾದ ಬ್ರಿಯಾನ್ ಸೋದರರನ್ನು ಕೆಡವಿದ್ದರು.