Advertisement
“ಅಯ್ಯೋ ಟ್ರೆçನ್ ಮಿಸ್ಸಾಯ್ತು ಏನ್ಮಾಡೋದು? ಕೆಎಸ್ಸಾರ್ಟಿಸಿ ಬಸ್ ಇದೆಯಲ್ಲಾ, ಹೋಗೋಣ…’ ಇದು ಸಾಮಾನ್ಯವಾಗಿ ಎಲ್ಲ ಪ್ರಯಾಣಿಕರು ಹೇಳುವ ಮಾತು. ದೇಶಾದ್ಯಂತ ಸಂಚರಿಸುವವರಂತೂ ಕರ್ನಾಟಕದಲ್ಲಿರುವಂಥ ಚಂದದ ಸಾರಿಗೆ ವ್ಯವಸ್ಥೆಯನ್ನು ನೋಡಿಯೇ ಇಲ್ಲ ಎನ್ನುತ್ತಾರೆ. ಅಷ್ಟು ಸುವ್ಯವಸ್ಥಿತವಾಗಿ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರಯಾಣಿಕರಿಗೆ ಬಸ್ ಸೌಕರ್ಯಗಳನ್ನು ಕಲ್ಪಿಸಿದೆ. ಹೀಗಾಗಿ ರಾಜ್ಯ ರಸ್ತೆ ಸಾರಿಗೆಗೆ ಕೇಂದ್ರ ಸರ್ಕಾರದಿಂದ ಅನೇಕ ಪ್ರಶಸ್ತಿಗಳು ದೊರಕಿವೆ.
ತಾಂತ್ರಿಕ ಸಹಾಯಕ ಹುದ್ದೆಯನ್ನು ಸಾಮಾನ್ಯ ವರ್ಗ, ಮಳೆ, ಗ್ರಾಮೀಣ, ಅಂಗವಿಕಲ ಹೀಗೆ ವಿಭಾಗಿಸಿದ್ದು, ಪರಿಶಿಷ್ಟ ಜಾತಿ/ಪಂಗಡಗಳಿಗೆ ಅನುಗುಣವಾಗಿ ವರ್ಗೀಕರಣ ಮಾಡಲಾಗಿದೆ. ಜೊತೆಗೆ ಗ್ರಾಮೀಣ ಮೀಸಲಾತಿ, ಯೋಜನಾ ನಿರಾಶ್ರಿತ, ಸೈನಿಕ, ಕನ್ನಡ ಮಾಧ್ಯಮ ಮೀಸಲಾತಿಗೂ ಅವಕಾಶ ಕಲ್ಪಿಸಲಾಗಿದೆ.
Related Articles
ತಾಂತ್ರಿಕ ಸಹಾಯಕ ಹುದ್ದೆಗೆ ಸರ್ಕಾರದಿಂದ ಅಂಗೀಕೃತ ಸಂಸ್ಥೆಯಲ್ಲಿ ಐಟಿಐ, ಎನ್‌ಎಸಿ ಮೆಕ್ಯಾನಿಕಲ್, ಡೀಸೆಲ್ ಮೆಕ್ಯಾನಿಕಲ್, ಆಟೋ ಎಲೆಕ್ಟ್ರಿಷಿಯನ್, ವೆಲ್ಡರ್, ಫಿಟ್ಟರ್, ಪೈಂಟಿಂಗ್, ಆಟೋಮೊಬೈಲ್ ವಿಷಯಗಳ ವಿದ್ಯಾರ್ಹತೆ ಹೊಂದಿರಬೇಕು.
Advertisement
ಹುದ್ದೆಗೆ ಅಭ್ಯರ್ಥಿಗಳು ಕನಿಷ್ಠ ದೇಹದಾಡ್ಯìತೆಯನ್ನು ಹೊಂದಿರಬೇಕು. ಪುರುಷರು ಎತ್ತರ 163 ಸೆಂ.ಮೀ, ತೂಕ 55 ಕೆಜಿ. ಮಹಿಳೆಯರು 153 ಸೆ.ಮೀ ಎತ್ತರ, ತೂಕ 50 ಕೆ.ಜಿ ಇರಬೇಕು.
ವಯೋಮಿತಿಯನ್ನು ಕನಿಷ್ಠ 18 ವರ್ಷಗಳಿಂದ ಗರಿಷ್ಠ 30 ವರ್ಷದವರೆಗೆ ನಿಗದಿ ಮಾಡಲಾಗಿದೆ. ಪ್ರವರ್ಗ 2ಎ,ಬಿ, 3ಎ,ಬಿ ಗಳಿಗೆ 38 ವರ್ಷ ಮತ್ತು ಪರಿಶಿಷ್ಟರಿಗೆ 40 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.
ಆಯ್ಕೆಗೊಂಡ ಅಭ್ಯರ್ಥಿಗಳಿಗೆ ತರಬೇತಿ ಹಂತದಲ್ಲಿ 9,100 ರೂ. ಭತ್ಯೆ ನೀಡಲಾಗುತ್ತದೆ. 2 ವರ್ಷ ತರಬೇತಿ ಬಳಿಕ ವೇತನವನ್ನು 11,640 ರೂ. 15,700 ರೂ. ವೇತನ ಪಾವತಿ ಮಾಡಲಾಗುತ್ತದೆ.
ಆಯ್ಕೆ ಹೇಗೆ?ಹುದ್ದೆಗೆ ಅಭ್ಯರ್ಥಿಗಳನ್ನು ಸಾಮಾನ್ಯ ಸಾಮರ್ಥ್ಯ ಪರೀಕ್ಷೆ(ಸಿಎಟಿ) ಮೂಲಕ ಆಯ್ಕೆ ಮಾಡಲಾಗುತ್ತದೆ.
ಸಂವಹನ ನೈಪುಣ್ಯತೆ, ವಿಶ್ಲೇಷಣೆ, ಗಣಿತ, ಸಾಮಾನ್ಯಜ್ಞಾನ, ಗಣಕ ಜ್ಞಾನ ಒಳಗೊಂಡಿರುತ್ತದೆ. ಪರೀಕ್ಷೆಯಲ್ಲಿ ಕನಿಷ್ಠ 30ಅಂಕಗಳು ಬರಬೇಕು ಅದಕ್ಕಿಂತ ಕಡಿಮೆ ಅಂಕಗಳು ಬಂದವರನ್ನು ಅನರ್ಹಗೊಳಿಸಲಾಗುತ್ತದೆ.
ವಿದ್ಯಾರ್ಹತೆ ಅಂಕಗಳನ್ನು ಶೇ.25, ಸಾಮಾನ್ಯ ಸಾಮರ್ಥ್ಯ ಪರೀಕ್ಷೆ ಅಂಕಗಳನ್ನು ಶೇ.75 ಆಧಾರದ ಮೇಲೆ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. ದಾಖಲಾತಿ ಪರಿಶೀಲನೆ, ದೈಹಿಕ ಪರೀಕ್ಷೆ ಕಡ್ಡಾಯ. ಬೆಂಗಳೂರು,ದಾವಣಗೆರೆ, ಶಿವಮೊಗ್ಗ, ಮೈಸೂರು, ಮಂಗಳೂರು, ಹಾಸನ, ಕಲಬುರ್ಗಿ, ಹುಬ್ಬಳ್ಳಿ, ಬಿಜಾಪುರ, ಗುಲ್ಬರ್ಗಾ, ಬಳ್ಳಾರಿಯಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಅರ್ಜಿ ಸಲ್ಲಿಕೆ
ಅರ್ಜಿಯನ್ನು ಆನ್‌ಲೈನ್ ಮೂಲಕವೇ ಸಲ್ಲಿಸತಕ್ಕದ್ದು. ಅರ್ಜಿ ಸಲ್ಲಿಕೆಗೆ ಮೊದಲು ಅಗತ್ಯ ದಾಖಲೆಗಳ ಸಾಫ್ಟ್ ಕಾಪಿಯನ್ನು ಹೊಂದಿಸಿಕೊಳ್ಳುವುದು ಒಳಿತು. ಏ.5ರಿಂದ 25ರ ವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. www.ksrtcjobs.com ಮೂಲಕ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಬೇಕು. ಬಳಿಕ ಚಲನ್ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳ ತಕ್ಕದ್ದು. ಬಳಿಕ ಯಾವುದೇ ಅಂಚೆ ಕಚೇರಿಯಲ್ಲಿ ಇ-ಪೇಮೆಂಟ್ ಮೂಲಕ ಶುಲ್ಕ ಪಾವತಿಸಬೇಕು. ಸಾಮಾನ್ಯ ಅಭ್ಯರ್ಥಿಗಳಿಗೆ 800 ರೂ. ಮತ್ತು ಪರಿಶಿಷ್ಟರಿಗೆ 500 ರೂ. ಶುಲ್ಕ ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ www.ksrtcjobs.com ಸಂಪರ್ಕಿಸಿ.