Advertisement

2.65 ಲಕ್ಷದಲ್ಲಿ 1.50 ಲಕ್ಷ ಕುಟುಂಬಕ್ಕಷ್ಟೇ ಉದ್ಯೋಗ ಚೀಟಿ: ಒಂಬುಡ್ಸಮನ್ ಅಸಮಾಧಾ‌ನ

02:35 PM Sep 15, 2021 | Team Udayavani |

ಶಿರಸಿ: ಜಿಲ್ಲೆಯಲ್ಲಿ‌ 2.65 ಲಕ್ಷ‌ ಕುಟುಂಬಗಳಿದ್ದು ಕೇವಲ 1.50 ಲಕ್ಷ‌ ಕುಟುಂಬಗಳಿಗೆ‌ ಮಾತ್ರ ಉದ್ಯೋಗ ಚೀಟಿ‌ ನೀಡಲಾಗಿದೆ. ಉಳಿದ ಎಲ್ಲಾ ಅರ್ಹ ಕುಟುಂಬಕ್ಕೂ‌ ಉದ್ಯೋಗ ಚೀಟಿ‌ ನೀಡಬೇಕಿತ್ತು ಎಂದು  ಉದ್ಯೋಗ‌ಖಾತ್ರಿ‌ ಯೋಜನೆಯ ಒಂಬುಡ್ಸಮನ್ ಆರ್.ಜಿ.ನಾಯ್ಕ ಅಸಮಧಾನಿಸಿದರು.

Advertisement

ಬುಧವಾರ ತಾಲೂಕು ಪಂಚಾಯತ್‌ ನಲ್ಲಿ ನಡೆದ ನರೇಗಾ‌ ಒಂಬುಡ್ಸಮನ್ ಸಭೆಯಲ್ಲಿ‌ ಮಾತನಾತನಾಡಿದ ಅವರು, ಜಿಲ್ಲೆಯಲ್ಲಿ ಅರ್ಧದಷ್ಟು ಕುಟುಂಬಕ್ಕೂ ಉದ್ಯೋಗ ಚೀಟಿ ಇಲ್ಲ. ಸರಕಾರಿ ನೌಕರಿ ಹೊರತುಪಡಿಸಿ ಎಲ್ಲರಿಗೂ ಉದ್ಯೋಗ ಚೀಟಿ ಕೊಡಬಹುದು ಎಂದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ತೋಟದ ಏರಿ, ಹೊಸ ತೋಟ ನಿರ್ಮಾಣ, ಜಲ‌ಸಂರಕ್ಷಣೆ, ಆಟದ‌ ಮೈದಾನ ಸೇರಿದಂತೆ 260 ಮಾದರಿಯ ಕಾಮಗಾರಿ‌ ನಡೆಸಲು ಅವಕಾಶ ಇದೆ. ಅನುಷ್ಠಾನ ಅಧಿಕಾರಿಗಳು ಇದರ ಬಗ್ಗೆ‌ ಮೊದಲು ತಿಳಿದುಕೊಳ್ಳಬೇಕು ಎಂದು ಹೇಳಿದರು.

ನಿಯಮ ಬಿಟ್ಟು‌ ಕೆಲಸ‌ ಮಾಡಲು ಅವಕಾಶ‌ ಇಲ್ಲ. ಯಾವ ಬಾಜುರಾಯ ಹೇಳಿದರೂ  ನಿಯಮ ಬಿಟ್ಟು ಕೆಲಸ‌‌ ಮಾಡಬಾರದು. ಕಳಪೆ‌ ಕಾಮಗಾರಿ, ಜೆಸಿಬಿ ಬಳಸಿದರೆ ದೂರು ನೀಡಿದರೆ‌ ಕ್ರಮ ಕೈಗೊಳ್ಳಲು ಸಿದ್ದ ಎಂದ  ಅವರು‌ ಬನವಾಸಿಯಲ್ಲಿ ಕೆರೆ ಹೂಳೆತ್ತಲು ಜೆಸಿಬಿ ಬಳಸಿದ ಕುರಿತು ದೂರಿದೆ‌ ಎಂದರು.

ಯಲ್ಲಾಪುರ‌ ಕಿರವತ್ತಿಯಲ್ಲಿ 4 ಕೋ.ರೂ. ಕೆಲಸ ಮಾಡಿದ್ದಾರೆ. ಶಿರಸಿಯಲ್ಲಿ‌ 32 ಪಂಚಾಯತಿಯಿಂದ 7 ಕೋ.ರೂ. ಕಾಮಗಾರಿ‌ ಮಾತ್ರ ಆಗಿದೆ. 75 ಕೋ.ರೂ. ಕ್ರಿಯಾ ಯೋಜನೆ ಇದೆ. ಒಂದು ಆಕಳು, ಅದರ ಒಂದು ಕರು ಇದ್ದರೂ ಕೊಟ್ಟಿಗೆ ನಿರ್ಮಾಣ ಮಾಡಲು ಸಾಧ್ಯ ಎಂದರು.

Advertisement

ಇದನ್ನೂ ಓದಿ:ಬಂಟರ ಸಂಘ ಮುಂಬಯಿ ವಾರ್ಷಿಕ ಮಹಾಸಭೆಯಲ್ಲಿ ವಾರ್ಷಿಕ ಪುರಸ್ಕಾರ ಪ್ರದಾನ

ಗ್ರಾಮೀಣ ಭಾಗದಲ್ಲಿ  ‌ಅಕೌಶಲ‌ ಕಾರ್ಮಿಕರಿಗೆ ಕೆಲಸ‌ ಕೊಡಲು, ಮಹಿಳಾ ಸಬಲೀಕರಣಕ್ಕೆ, ಸಾಮಾಜಿಕ ನ್ಯಾಯ ಕೊಡಲು ಉದ್ಯೋಗ ಖಾತ್ರಿ ಯೋಜನೆ‌ ಇದಾಗಿದೆ. ಸ್ವಾವಲಂಬಿ‌ ಬದುಕಲು, ವಲಸೆ ತಪ್ಪಿಸಲು ಇದು‌ ನೆರವಾಗಲಿದೆ. ಹಳ್ಳಿಯೇ ದೇಶದ ತಳಪಾಯ ಎಂದ ಅವರು,ಒಂಬುಡ್ಸಮನ್ ಗೆ ರಾಜ್ಯ ಸರಕಾರ ನಿಯಂತ್ರಿಸುವಂತಿಲ್ಲ. ಇದಕ್ಕೆ ಕಾನೂನು ಬದ್ದ ಅನುಮತಿ‌ ಇಲ್ಲ ಎಂದೂ ಹೇಳಿದರು.

ಉದ್ಯೋಗ ಚೀಟಿ‌ ಪಡೆಯಲು 18 ವರ್ಷ ಹಾಗೂ ಗ್ರಾಮೀಣ‌ ಭಾಗದಲ್ಲಿ ‌ಇರಬೇಕು. ಸರಕಾರಿ ನೌಕರರಿಗೆ ಕೊಡುವಂತಿಲ್ಲ. ಏಕೆಂದರೆ‌ ಸರಕಾರಿ ನೌಕರ 24 ಗಂಟೆ‌ ನೌಕರ ಇರಬೇಕು. ಉದ್ಯೋಗ ಖಾತ್ರಿಗೆ ಗ್ರಾಪಂ‌ ಅನುಷ್ಠಾನ ಅಧಿಕಾರಿಗಳು ಕೆಲಸ‌ ಮಾಡಬೇಕು. ನಮ್ಮವರಲ್ಲಿ ಈ ಬಗ್ಗೆ ಆಸಕ್ತಿ ಇಲ್ಲ.‌ ಗುತ್ತಿಗೆದಾರರ ಕ್ರಿಯಾಯೋಜನೆ ಕೈ ಬಿಡಿ, ಜನರ ಯೋಜನೆ ಸೇರಿಸಿ ಎಂದೂ ಹೇಳಿದರು. ಈ ವೇಳೆ ಇಓ ಏಫ್‌.ಜಿ.ಚಿಣ್ಣನವರ, ಗ್ರಾ.ಪಂ. ಪಿಡಿಓಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next