Advertisement

ಭಾರತೀಯ ಅಂಚೆ ಇಲಾಖೆಯಲ್ಲಿ ಬೃಹತ್‌ ನೇಮಕಾತಿ

01:20 AM Nov 24, 2020 | sudhir |

ಮಣಿಪಾಲ: ಭಾರತೀಯ ಅಂಚೆ ಇಲಾಖೆಯಲ್ಲಿ ತೆರವಾಗಿರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರ ಸಿಬಂದಿ ನೇಮಕಾತಿಯ ಆಯೋಗ (ಸ್ಟಾಫ್ ಸೆಲೆಕ್ಷನ್‌ ಕಮಿಷನ್‌) ಈ ನೇಮಕಾತಿಯನ್ನು ನಡೆಸಲಿದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ವಿಧಾನ ಮತ್ತು ಹುದ್ದೆಯ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

Advertisement

ಯಾವೆಲ್ಲ ಹುದ್ದೆಗಳು: ನೇಮಕಾತಿಯಲ್ಲಿ 3 ಮಾದರಿಯ ಹುದ್ದೆಗಳಿವೆ. ಕರ್ನಾಟಕ ಸೇರಿದಂತೆ ದೇಶಾದ್ಯಂತ ಲೋವರ್‌ ಡಿವಿಷನ್‌ ಕ್ಲರ್ಕ್‌, ಪೋಸ್ಟಲ್‌ ಅಸಿಸ್ಟೆಂಟ್‌, ಡಾಟಾ ಎಂಟ್ರಿ ಆಪರೇಟರ್ಸ್‌ ಎಂಬ ಈ ಮೂರು ಹು¨ªೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ದೇಶಾದ್ಯಂತ ಸರಿ ಸುಮಾರು 6 ಸಾವಿರ ಹುದ್ದೆಗಳಿಗೆ ಈ ನೇಮಕಾತಿ ನಡೆಯಲಿದೆ.

ಅರ್ಹತೆ ಏನು?: ದ್ವಿತೀಯ ಪಿಯುಸಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಪದವಿ ತರಗತಿಯಲ್ಲಿ ತೇರ್ಗಡೆಯಾಗಿರಲೇಬೇಕು ಎಂಬ ನಿಯಮ ಇಲ್ಲ. ಅರ್ಜಿ ಸಲ್ಲಿಸುವವರು ಕನಿಷ್ಠ ಎಂದರೆ 18 ವರ್ಷ ವಯೋಮಿತಿ ಹೊಂದಿದ್ದು, ಗರಿಷ್ಠ 27 ವರ್ಷ ವಯೋಮಿತಿಯೊಳಗೆ ಇರಬೇಕು.

ವಿನಾಯಿತಿ: ಎಸ್‌.ಸಿ., ಎಸ್‌.ಟಿ. ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒ.ಬಿ.ಸಿ. ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲರಿಗೆ 10 ವರ್ಷ ಹಾಗೂ ಮಾಜಿ ಸೈನಿಕರಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ. (ಅಂಗವಿಕಲ ಅಭ್ಯರ್ಥಿಯು ವಿನಾಯಿತಿಗೆ ಒಳಪಡುವ ಸಮುದಾಯದವರಾಗಿದ್ದರೆ ಎರಡೂ ವಿನಾಯಿತಿಗಳು ಲಭಿಸಲಿವೆ. ಉದಾ: ಎಸ್‌ಸಿ./ಎಸ್‌ಟಿ. ಸಮುದಾಯದ ಅಂಗವಿಕಲ ಅಭ್ಯರ್ಥಿಗೆ 5+10=15 ವರ್ಷಗಳ ವಿನಾಯಿತಿ ದೊರೆಯುತ್ತದೆ.) ಆಯ್ಕೆ ಪ್ರಕ್ರಿಯೆಯು ಆನ್‌ಲೈನ್‌ ಮೂಲಕ ನಡೆಯಲಿದ್ದು, ಸ್ಪರ್ಧಾತ್ಮಕ ಪರೀಕ್ಷೆಯನ್ನೂ ಆನ್‌ಲೈನ್‌ ಮೂಲಕವೇ ನಡೆಸಲಾಗುತ್ತದೆ. ಆದರೆ ಡೇಟಾ ಎಂಟ್ರಿ ಆಪರೇಟರ್ಸ್‌ ಹುದ್ದೆಗಳಿಗೆ ಟೈಪಿಂಗ್‌ ಟೆಸ್ಟ್‌ ಸಡೆಸಲಾಗುತ್ತದೆ.

ಅರ್ಜಿ ಸಲ್ಲಿಕೆ ಮತ್ತು ಕಡೆಯ ದಿನ
ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ ಸೈಟ್‌ https://ssc.nic.in/ ವಿಳಾಸಕ್ಕೆ ಹೋಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ಡಿಸೆಂಬರ್‌ 15 ಕಡೆಯ ದಿನ. ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ ಡಿಸೆಂಬರ್‌ 17, ಬ್ಯಾಂಕ್‌ ಚಲನ್‌ ಮೂಲಕ ಪಾವತಿಸುವವರು ಡಿಸೆಂಬರ್‌ 21ರ ಮೊದಲು ಪಾವತಿಸತಕ್ಕದ್ದು. ಆದರೆ ಪಾವತಿಸುವ ಚಲನ್‌ ಡಿಸೆಂಬರ್‌ 19ರ ಮೊದಲು ಜನರೇಟ್‌ ಆಗಿರಬೇಕು. ಮೊದಲ ಹಂತದ ಪರೀಕ್ಷೆ 2021ರ ಎಪ್ರಿಲ್‌ 12ರಿಂದ 27ರ ವರೆಗೆ ನಡೆಯಲಿದೆ.

Advertisement

ಅರ್ಜಿ ಶುಲ್ಕ
ಮಹಿಳೆಯರು, ಎಸ್‌ಸಿ, ಎಸ್‌ಟಿ, ಅಂಗವಿಕಲ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರಿಸಲಾಗಿಲ್ಲ. ಉಳಿದ ಅಭ್ಯರ್ಥಿಗಳು 100 ರೂ.ಗಳನ್ನು ಪಾವತಿಸಬೇಕು. ಅಭ್ಯರ್ಥಿಗಳು ತಮ್ಮ ಸಮೀಪದ ಪರೀಕ್ಷಾ ಕೇಂದ್ರಗಳನ್ನು ಆಯ್ದುಕೊಳ್ಳಬಹುದಾಗಿದೆ. ಸಾಮಾನ್ಯವಾಗಿ ಹತ್ತಿರದ ಪರೀಕ್ಷಾ ಕೇಂದ್ರಗಳನ್ನು ಅದು ನಿಮಗೆ ಶಿಫಾರಸು ಮಾಡುತ್ತದೆ. ಅದು ಬೇಡವಾಗಿದ್ದಲ್ಲಿ ಇತರ ಕೇಂದ್ರಗಳನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು.

ರಾಜ್ಯದಲ್ಲಿನ ಕೇಂದ್ರಗಳು
ಬೆಳಗಾವಿ, ಹುಬ್ಬಳ್ಳಿ, ಬೆಂಗಳೂರು, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ.ಕೇರಳ: ಎರ್ನಾಕುಳಂ, ಕಣ್ಣೂರು, ಕೊಲ್ಲಂ, ಕೊಟ್ಟಾಯಂ, ಕೋಯಿಕೋಡ್‌, ತ್ರಿಶೂರ್‌, ತಿರುವನಂತಪುರದಲ್ಲಿ ಪರೀಕ್ಷಾ ಕೇಂದ್ರಗಳಿರಲಿವೆ.

Advertisement

Udayavani is now on Telegram. Click here to join our channel and stay updated with the latest news.

Next