ಬೆಂಗಳೂರು: ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡ ಕುಟುಂಬದ ಮಹಿಳೆಯೊಬ್ಬರು ಇ ಕಾಮರ್ಸ್ ವ್ಯಾಪಾರದ ಮೂಲಕ 95 ಉದ್ಯೋಗಿಗಳಿಗೆ ಕೆಲಸ ನೀಡಿ ಸ್ವಾವಲಂಬಿ ಉದ್ಯೋಗಿಯಾಗಿದ್ದಾರೆ.
2020 ರಲ್ಲಿ ಮೊದಲ ಲಾಕ್‌ಡೌನ್ ಸಮಯದಲ್ಲಿ 27ರ ಹರೆಯದ ಗೃಹಿಣಿ ಬೆಂಗಳೂರಿನ ಮಾನ್ಸಿಹಾ ಅವರ ಪತಿಯ ಶರ್ಟ್ ರಫ್ತು ವ್ಯವಹಾರ ಸ್ಥಗಿತಗೊಂಡಿತು. ಅವರ ಉದ್ಯೋಗಿಗಳು ತಮ್ಮ ಜೀವನೋಪಾಯಕ್ಕಾಗಿ ಇವರ ಮೇಲೆ ಅವಲಂಬಿತರಾಗುವಂತಾಯಿತು. ಈ ಸಂದರ್ಭದಲ್ಲಿ ಅವರಿಗೆ ಮೀಶೋ ಎಂಬ ಇ ಕಾಮರ್ಸ್ ತಾಣದಲ್ಲಿ ತಮ್ಮ ಬಟ್ಟೆ ವ್ಯಾಪಾರ ಮಾಡಬಾರದೇಕೆ ಎನಿಸಿತು. ಪುರುಷರು ಮತ್ತು ಮಕ್ಕಳ ಶರ್ಟ್‌ಗಳು ಮತ್ತು ಟೀ ಶರ್ಟ್‌ಗಳ ಮಾರಾಟ ಆರಂಭಿಸಿದರು. ಆನ್‌ಲೈನ್ ಮಾರಾಟದಲ್ಲಿ ಅವರಿಗೆ ಯಾವ ಅನುಭವವೂ ಇರಲಿಲ್ಲ. ಯಶಸ್ವಿ ಆನ್‌ಲೈನ್ ಮಾರಾಟಗಾರರ ಯುಟ್ಯೂಬ್ ವೀಡಿಯೊಗಳನ್ನು ವೀಕ್ಷಿಸಿದರು.
ಇ-ಕಾಮರ್ಸ್ ಮೂಲಕ ಮೊದಲ ದಿನ ಮಾನ್ಸಿಹಾ ಸುಮಾರು 10 ಆರ್ಡರ್‌ಗಳನ್ನು ಪಡೆದರು. ತಿಂಗಳ ಅಂತ್ಯದ ವೇಳೆಗೆ 100 ಕ್ಕೂ ಹೆಚ್ಚು ಆರ್ಡರ್‌ಗಳು ಬಂದವು. ನಂತರ ಬರ ಬರುತ್ತಾ ಪ್ರತಿ ತಿಂಗಳು ದಾಖಲೆಯ 1000 ಕ್ಕೂ ಹೆಚ್ಚು ಆರ್ಡರ್‌ಗಳನ್ನು ಪಡೆಯುವ ಮಟ್ಟಕ್ಕೆ ಅವರ ಉದ್ಯಮ ಬೆಳೆಯಿತು. ಕೇವಲ ಹಬ್ಬದ ಸೀಸನ್‍ವೊಂದರಲ್ಲಿಯೇ, ಅವರು ಸುಮಾರು 2000 ಕ್ಕೂ ಆರ್ಡರ್‌ಗಳನ್ನು ಅವರು ಪಡೆಯುತ್ತಿದ್ದಾರೆ.
ಈಗ ಅವರು 50 ಯಂತ್ರಗಳು ಮತ್ತು ಟೈಲರ್‌ಗಳು, ಗುಣಮಟ್ಟ ತಪಾಸಣೆ ತಂಡಗಳು ಮತ್ತು ಇತರ ಸಿಬ್ಬಂದಿ ಸದಸ್ಯರು ಸೇರಿದಂತೆ 95 ಉದ್ಯೋಗಿಗಳು ಮತ್ತು ಸಿಬ್ಬಂದಿಗೆ ಕೆಲಸ ನೀಡಿದ್ದಾರೆ. 2,000 ಚದರ ಅಡಿಯಷ್ಟು ದೊಡ್ಡದಾದ ಗೋದಾಮನ್ನು ಹೊಂದುವಷ್ಟು ಅವರ ಉದ್ಯಮ ಬೆಳೆದಿದೆ!
ದಿಕ್ಕೇ ತೋಚದಂತಾಗಿದ್ದ ಸಂದರ್ಭದಲ್ಲಿ ಮೀಶೋದಲ್ಲಿ ಮಾರಾಟಗಾರಳಾಗಿ ನನ್ನ ಜೀವನ ಸುಧಾರಿಸಿತು. ಶೂನ್ಯ ಕಮಿಷನ್ ನೀಡಿಕೆ ನನ್ನ ವ್ಯಾಪಾರವನ್ನು ತ್ವರಿತವಾಗಿ ವಿಸ್ತರಿಸಲು ಸಾಧ್ಯ ಮಾಡಿತು. ಶೂನ್ಯ ಕಮಿಷನ್ ನಿಂದಾಗಿ ಉಡುಪುಗಳನ್ನು ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರಿಗೆ ನೀಡಲು ನನಗೆ ಸಾಧ್ಯವಾಯಿತು ಎಂದು ಮಾನ್ಸಿಹಾ ಹೇಳುತ್ತಾರೆ.