Advertisement

ಕೆಲಸ ಕಸಿಯುತ್ತಿರುವ AI !: ಒಂದೇ ತಿಂಗಳಲ್ಲಿ 4,000 ಉದ್ಯೋಗಿಗಳು ವಜಾ

08:16 AM Jun 05, 2023 | Team Udayavani |

ಹೊಸದಿಲ್ಲಿ: ಮಾನವನ ಮೇಲಿನ ಹೊರೆ ತಗ್ಗಿಸುವ ಸಲುವಾಗಿ ಅಭಿವೃದ್ಧಿ ಪಡಿಸುತ್ತಿರುವ ತಂತ್ರಜ್ಞಾನಗಳು ಇಂದು ಅದೇ ಮಾನವನ ದುಡಿ ಮೆಯನ್ನೇ ಕಸಿಯುತ್ತಿವೆ. ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನಗಳಿಂದಾಗಿ ಮೇ ತಿಂಗಳಿನಲ್ಲಿ 4,000 ಮಂದಿ ಉದ್ಯೋಗ ಕಳೆದುಕೊಳ್ಳುವಂತಾಗಿದೆ.

Advertisement

ಓಪನ್‌ ಎಐ ಸಂಸ್ಥೆಯು 2022ರ ನವೆಂಬರ್‌ನಲ್ಲಿ ಎಐ ಆಧರಿತ ಚಾಟ್‌ಜಿಪಿಟಿಯನ್ನು ಪರಿಚ ಯಿಸಿತು. ಅದಾದ ಬಳಿಕ ಖ್ಯಾತ ಸಂಸ್ಥೆಗಳಾದ ಗೂಗಲ್‌ ಮತ್ತು ಮೈಕ್ರೋಸಾಫ್ಟ್ ಈ ವರ್ಷ ಫೆಬ್ರವರಿಯಲ್ಲಿ ಬಾರ್ಡ್‌ ಹಾಗೂ ಬಿಂಗ್‌ ಎನ್ನುವ ಎಐ ಆಧರಿತ ತಂತ್ರಜ್ಞಾನಗಳನ್ನು ಪರಿಚಯಿಸಿದವು. ಇಂದಿಗೆ ಹಲವಾರು ಸಂಸ್ಥೆಗಳು ಇವುಗಳನ್ನು ಅವಲಂಬಿಸಿದ್ದು, ಸಂಸ್ಥೆಗಳ ಅಗತ್ಯಕ್ಕೆ ತಕ್ಕಂತೆ ಈ ತಂತ್ರಜ್ಞಾನ ಬಳಕೆಯಾಗುತ್ತಿದೆ. ಇದರ ಪರಿಣಾಮವೇ ಉದ್ಯೋಗ ಕಡಿತ.

ಬಿಸಿನೆಸ್‌ ಇನ್‌ಸೈಡರ್‌ ವರದಿಗಳ ಪ್ರಕಾರ, ಮೇಯಲ್ಲಿ ಒಟ್ಟು 80 ಸಾವಿರ ಮಂದಿಯನ್ನು ವಿಭಿನ್ನ ಕಾರಣಗಳಿಂದಾಗಿ ಹಲವಾರು ಸಂಸ್ಥೆಗಳು ವಜಾಗೊಳಿಸಿವೆ. ಈ ಪೈಕಿ ಸಂಸ್ಥೆಯ ಪುನರ್‌ರಚನೆಯ ಭಾಗವಾದ ಉದ್ಯೋಗ ಕಡಿತ, ವೆಚ್ಚ ಕಡಿತದ ಕಾರಣ, ಆರ್ಥಿಕ ನಷ್ಟ, ಸಂಸ್ಥೆಗಳ ವಿಲೀನ ಈ ರೀತಿಯ ಹಲವಾರು ಕಾರಣಗಳಿವೆ. ಅದರಲ್ಲಿ 3,900 ಉದ್ಯೋಗಿಗಳನ್ನು ಉದ್ಯೋಗದಿಂದ ವಜಾಗೊಳಿಸಲು ಕಾರಣವೇ ಎಐ ( ಕೃತಕ ಬುದ್ಧಿಮತ್ತೆ ತಂತ್ರಜ್ಞಾನ) ಎನ್ನಲಾಗಿದೆ. ಈ ವರ್ಷ ಅಂದರೆ 2023ರ ಜನವರಿಯಿಂದ ಮೇವರೆಗೆ ಒಟ್ಟು 4 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದು, ಅವೆಲ್ಲವೂ ಬಹುತೇಕ ಐಟಿ ಸಂಸ್ಥೆಗಳ ಉದ್ಯೋಗ ಕಡಿತವೇ ಆಗಿದೆ ಎಂದೂ ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಮನುಷ್ಯರು ಮಾಡಬೇಕಿರುವ ಕೆಲಸಗಳನ್ನು ಈ ತಂತ್ರಜ್ಞಾನಗಳು ನಿರಾಯಾಸವಾಗಿ ಮಾಡಿ ಮುಗಿಸುತ್ತಿದ್ದು, ಮಾನವ ಸಂಪನ್ಮೂಲ ಬಳಕೆ ಯನ್ನು ಕಡಿಮೆಗೊಳಿಸುತ್ತಿವೆ. ಇದರಿಂದ ಕಾರ್ಯ ಸಾಧನೆ ಸುಲಭವಾಗಿರುವ ಹಿನ್ನೆಲೆ ಸಂಸ್ಥೆಗಳು ತಂತ್ರಜ್ಞಾನಗಳ ಮೊರೆ ಹೋಗುತ್ತಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next