ಬೆಂಗಳೂರು: ಯುವಕರಿಗೆ ಉದ್ಯೋಗವಕಾಶಗಳ ಮಾಹಿತಿ ನೀಡುವ ವೆಬ್ ಪೋರ್ಟಲ್ ಮತ್ತು ಮೊಬೈಲ್ ಆಪ್‌ನ್ನು ಮೇ 15 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಲಿದ್ದಾರೆ ಎಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುರಳಿಧರ ಹಾಲಪ್ಪ ಹೇಳಿದ್ದಾರೆ.
ನಿಗಮದ ವತಿಯಿಂದ ಅಭಿವೃದ್ಧಿ ಪಡಿಸಿರುವ ವೆಬ್ ಪೋರ್ಟಲ್ ಹಾಗೂ ಮೊಬೈಲ್ ಆಪ್‌ನ ಲಾಂಛನ ಬಿಡುಗಡೆಗೊಳಿಸಿದ ಅವರು, “ರಾಜ್ಯದಲ್ಲಿ ಯುವ ಸಮುದಾಯಕ್ಕೆ ಅರ್ಹತೆ ಇದ್ದರೂ ಸರಿಯಾದ ತರಬೇತಿ ಇಲ್ಲದೇ ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ.
ಹೀಗಾಗಿ ಉದ್ಯೋಗ ಪಡೆಯಲು ಅಗತ್ಯವಿರುವ ನೈಪುಣ್ಯತೆ ಪಡೆಯಲು ಬೇಕಿರುವ ತರಬೇತಿಗೆ ನೋಂದಣಿ ಮಾಡಿಕೊಳ್ಳಲು ನಿಗಮದಿಂದ ವೆಬ್ ಪೋರ್ಟಲ್ ಹಾಗೂ ಮೊಬೈಲ್ ಆಪ್ ಅಭಿವೃದ್ಧಿ ಪಡಿಸಲಾಗಿದೆ. ಈ ವೆಬ್ ಪೊರ್ಟಲ್‌ಅನ್ನು ಮೇ 15 ರಂದು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.
ಈ ವರ್ಷ ಬೇಡಿಕೆಗೆ ಅನುಗುಣವಾಗಿ ಸುಮಾರು 5 ಲಕ್ಷ ನಿರುದ್ಯೋಗಿ ಯುವಕರಿಗೆ ಉದ್ಯೋಗ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ. ಯೋಜನೆಯ ತರಬೇತಿಯಲ್ಲಿ ಶೇಕಡಾ 20 ರಷ್ಟು ಪರಿಶಿಷ್ಠ ಜಾತಿ, ಶೇಕಡಾ 7 ಪರಿಶಿಷ್ಠ ಪಂಗಡ, ಶೇ 15 ರಷ್ಟು ಅಲ್ಪ ಸಂಖ್ಯಾತರಿಗೆ, ವಿಕಲಚೇತನರಿಗೆ ಶೇ 3 ಹಾಗೂ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ನೀಡಲಾಗುವುದು,’ ಎಂದು ಹೇಳಿದರು.
ಈ ಯೋಜನೆ ಅಡಿಯಲ್ಲಿ ಪ್ರತ್ಯೇಕ ಉದ್ಯೋಗಕ್ಕೆ ತರಬೇತಿ ಪಡೆಯಲು ಇಚ್ಚಿಸುವ ಅಭ್ಯರ್ಥಿಯು (www.kaushalkar.com) ನೇರವಾಗಿ ನೋಂದಣಿ ಮಾಡಿಕೊಳ್ಳಬಹುದು. ಈ ಪೋರ್ಟಲ್‌ನಲ್ಲಿಯೇ ಉದ್ಯೋಗ ನೀಡುವ ಸಂಸ್ಥೆಗಳ ಬಗ್ಗೆಯೂ ಮಾಹಿತಿ ದೊರೆಯುವುದರಿಂದ ಉದ್ಯೋಗಾಕಾಂಕ್ಷಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ವಿಶೇಷ ಕೌಶಲ್ಯ ತರಬೇತಿ ಶಿಬಿರದಲ್ಲಿ ಪಾಲೊಳ್ಳಲು ಬಯಸುವ ಅಭ್ಯರ್ಥಿಗಳು ಮೇ 15 ರಿಂದ 22 ರ ವರೆಗೆ ತಾಲೂಕು ಕಚೇರಿಗಳಲ್ಲಿ ನಡೆಧಿಯುವ ಕೌಶಲ್ಯ ಶಿಬಿರದಲ್ಲಿ ಹೆಸರು ನೋಂದಾಯಿಧಿಸಬಹುದು ಎಂದು ಅವರು ತಿಳಿಸಿದ್ದಾರೆ.