“ಈ ಕಂಪೆನಿಗೆ ನಿಮ್ಮ ಪ್ರೊಫೈಲ್ ಆಯ್ಕೆಯಾಗಿದೆ. ಕೆಳಗಿನ ಲಿಂಕ್ ಕ್ಲಿಕ್ ಮಾಡಿ ದೃಢೀಕರಣ ಮಾಡಿಕೊಳ್ಳಿ’, “ಮುಂಗಡ ಹಣ ಪಾವತಿಸಿಕೊಂಡು ಕೆಲಸ ಖಾತ್ರಿ ಮಾಡಿಕೊಳ್ಳಿ’- ಹೀಗೆ ಕೆಲವು ಸಂದೇಶಗಳು ಬರುವುದನ್ನು ನೀವು ಗಮನಿಸಿರಬ ಹುದು. ಇಂತಹ ನಕಲಿ ಸಂದೇಶಗಳಿಗೆ ಮರುಳಾದರೆ ಸಮಸ್ಯೆಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ ಎಂದು ಕೇಂದ್ರ ಸರಕಾರ ಎಚ್ಚರಿಸಿದೆ. ಈ ರೀತಿಯ ಸಮಸ್ಯೆಯಿಂದ ದೂರ ಇರುವುದಕ್ಕೂ ಮಾರ್ಗದರ್ಶನವನ್ನು ಅದು ನೀಡಿದೆ.
ವಿದೇಶಿ ಕೆಲಸದ ಆಮಿಷ:
ಕೆಲಸ ಹುಡುಕುವುದಕ್ಕೆಂದೇ ಹತ್ತು ಹಲವು ಆ್ಯಪ್‌ಗ್ಳಿವೆ. ಆದರೆ ಕೆಲವು ನಕಲಿ ಕಂಪೆನಿಗಳು ನಿಮಗೆ ಕರೆ ಮಾಡಿ, ನಿಮಗೆ ವಿದೇಶ ದಲ್ಲಿ ಕೆಲಸ ಲಭ್ಯವಿದೆ ಎಂದು ಆಮಿಷ ಒಡ್ಡುತ್ತಾರೆ. ಮನೆ ಯಲ್ಲೇ ಕುಳಿತು ಪ್ರತಿಷ್ಠಿತ ಕಂಪೆನಿಗೆ ಪಾರ್ಟ್ ಟೈಂ ಕೆಲಸ ಮಾಡಿ ಎನ್ನುತ್ತಾರೆ. ಅದಕ್ಕೆಂದು ಒಂದಿಷ್ಟು ಮುಂಗಡ ಹಣ ಕೊಟ್ಟು ಬುಕಿಂಗ್ ಮಾಡಿಕೊಳ್ಳಿ ಎಂದು ಹೇಳುತ್ತಾರೆ. ಆ ರೀತಿಯ ಸಂದೇಶವನ್ನು ದೃಢೀಕರಣ ಮಾಡದೆಯೇ ನಂಬದಿರಿ.
ದೂರು ದಾಖಲಿಸಿ :
ಒಂದು ವೇಳೆ ನಿಮಗೆ ಈ ರೀತಿಯ ಸಂದೇಶದಿಂದಾಗಿ ಮೋಸ ಅಥವಾ ವಂಚನೆ ಆಗಿದ್ದಲ್ಲಿ ನೀವು cybercrime.gov.in ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಬಹುದು.
ಸಿಲುಕಿದ್ದಾರೆ ಭಾರತೀಯರು :
ಇತ್ತೀಚೆಗೆ ಇದೇ ರೀತಿಯ ಆಮಿಷಕ್ಕೆ ಒಳಗಾಗಿದ್ದ ಹಲವು ಭಾರತೀಯರನ್ನು ಮ್ಯಾನ್ಮಾರ್ ರಾಷ್ಟ್ರಕ್ಕೆ ಅಕ್ರಮವಾಗಿ ಕರೆದೊಯ್ಯಲಾಗಿದೆ. ಅದರಲ್ಲಿ 45 ಮಂದಿಯನ್ನು ಭಾರತ ಸರಕಾರ ರಕ್ಷಿಸಿದೆ. ಇನ್ನೂ ಹಲವರು ಮ್ಯಾನ್ಮಾರ್‌ಅಧಿಕಾರಿಗಳ ವಶದಲ್ಲಿದ್ದಾರೆ.
3 ಅಗತ್ಯ ಕ್ರಮ :
ನಿಮಗೂ ಇಂತಹ ಆಮಿಷದ ಸಂದೇಶ ಅಥವಾ ಮೇಲ್ ಬಂದಿದ್ದರೆ, ಅದರಲ್ಲಿರುವ ಲಿಂಕ್‌ಗಳನ್ನು ದೃಢೀಕರಣ ಮಾಡದ ಹೊರತು ತೆರೆಯದಿರಿ.
ಖಾಸಗಿ ಮಾಹಿತಿಗಳನ್ನು ಕೊಡಬೇಡಿ, ಹಣ ಸಂದಾಯ ಮಾಡುವಂತಹ ಅಥವಾ ಬ್ಯಾಂಕ್ ಮಾಹಿತಿ ನೀಡಬೇಡಿ.
ನಿಮಗೆ ಯಾವ ನಂಬರ್‌ನಿಂದ ಕರೆ ಅಥವಾ ಸಂದೇಶ ಬಂದಿದೆಯೋ ಅದನ್ನು ರಿಪೋರ್ಟ್ ಮಾಡಿ, ಬ್ಲಾಕ್ ಮಾಡಿ.