Advertisement

Job fraud: ಕುವೈತ್ ನಲ್ಲಿ ಹಿಂಸೆ, ರಾಯಭಾರ ಕಚೇರಿ ನೆರವಿನಿಂದ ತವರಿಗೆ ಮರಳಿದ ಯುವಕರು

11:32 AM Sep 06, 2023 | Team Udayavani |

ವಿಜಯಪುರ: ಜಿಲ್ಲೆಯ ಅಡವಿಸಂಗಾಪುರ ಗ್ರಾಮದ ಇಬ್ವರು ಯುವಕರು ಉದ್ಯೋಗ ಅರಸಿ ಏಜೆಂಟ್ ಮೂಲಕ ಕುವೈತ್ ದೇಶಕ್ಕೆ ಹೋಗಿ, ಹಿಂಸೆ ಅನುಭವಿ ಮರಳಿರುವ ಘಟನೆ ವರದಿಯಾಗಿದೆ.

Advertisement

ಬಬಲೇಶ್ವರ ತಾಲೂಕಿನ ಅಡವಿ ಸಂಗಾಪುರ ಗ್ರಾಮದ ಎಸ್ಎಸ್ಎಲ್ ಸಿ ಓದಿರುವ ಸಚಿನ್ ಜಂಗಮಶಟ್ಟಿ, ಪದವೀಧರ ವಿಶಾಲ ಸೇಲರ್ ಎಂಬ ಯುವಕರೇ ಉದ್ಯೋಗದ ಆಸೆಗಾಗಿ ಕುವೈತ್ ದೇಶದಲ್ಲಿ ಹಿಂಸೆ ಅನುಭವಿಸಿ, ತವರಿಗೆ ಮರಳಿದವರು.

ಬಾಂಬೆ ಮೂಲದ ಇಫ್ಕಾರ ಎಂಬ ಏಜೆಂಟ್ ಮೂಲಕ ತಲಾ 1ಲಕ್ಷ ರೂ. ಹಣ ನೀಡಿದ ಈ ಇಬ್ಬರೂ ಯುವಕರು, ತರಕಾರಿ ಪ್ಯಾಕಿಂಗ್ ಉದ್ಯೋಗದ ಭರವಸೆಯಿಂದ ಕುವೈತ್ ಗೆ ಹೋಗಿದ್ದರು.

ಕುವೈತ್ ಗೆ ಹೋದ ಬಳಿಕ ಸಲ್ಮಾನ್ ಬರಾಕ್ ಎಂಬ ಮಾಲೀಕನ ಬಳಿಗೆ ಕೆಲಸಕ್ಕೆ ಸೇರಿಸಿದ್ದರು. ಆದರೆ ಬರಾಕ್ ಜಿಲ್ಲೆಯ ಯುವಕರಿಗೆ ತರಕಾರಿ ಪ್ಯಾಕಿಂಗ್ ಬದಲಾಗಿ ಒಂಟಿ ಕಾಯುವ ಕೆಲಸ ನೀಡಿದ್ದ.

ಅಲ್ಲದೇ ಪಾಸ್‌ಪೋರ್ಟ್ ಕಸಿದುಕೊಂಡು 32 ಸಾವಿರ ರೂ. ಅಂದರೆ 120 ದಿನಾರ ಮಾಸಿಕ ಸಂಬಳ ಎಂದು ಹೇಳಿ, ಅರ್ಧ ಸಂಬಳವನ್ನು ನೀಡಿರಲಿಲ್ಲ. ಕುಟುಂಬ ಸದಸ್ಯರೊಂದಿಗೆ ಮಾತನಾಡಲು ಮೊಬೈಲ್ ಬಳಕೆಗೂ ಅವಕಾಶ ನೀಡುತ್ತಿರಲಿಲ್ಲ.

Advertisement

ಇದರಿಂದ ನೊಂದ ಯುವಕರು ರಾತ್ರಿ ವೇಳೆ ಕುಟುಂಬದ ಸದಸ್ಯರಿಗೆ ಕರೆ ಮಾಡಿ, ತಾವು ಅನುಭವಿಸುತ್ತಿರುವ ಸಂಕಷ್ಟವನ್ನು ಮನವರಿಕೆ ಮಾಡಿಕೊಟ್ಟಿದ್ದರು.

ಈ ಹಂತದಲ್ಲಿ ಟ್ಯಾಕ್ಸಿ ಚಾಲಕನ ನೆರವಿನಿಂದ ಭಾರತೀಯ ರಾಯಭಾರ ಕಚೇರಿಗೆ ಆಗಮಿಸಿ, ಒಂದು ವಾರ ತಾತ್ಕಾಲಿಕ ಪುನರ್ವಸತಿ ಕೇಂದ್ರದಲ್ಲಿ ಆಸರೆ ಪಡೆದುದ್ದರು.

ತಾವಿದ್ದ ಸ್ಥಳದಲ್ಲಿ ಬೇರೆ ಬೇರೆ ಮಾಲೀಕರ ಬಳಿ ಭಾರತೀಯರು 70-80 ಜನ ಇದ್ದಾರೆ. ಭಾರತೀಯ ರಾಯಭಾರ ಕಚೇರಿಯ ಸೋಮು ಹಾಗೂ ಬಾಬು ಎಂಬವರ ನೆರವು ಪಡೆದೆವು ಎಂದು ನೊಂದ ಯವಕರು ವಿವರಿಸಿದ್ದಾರೆ.

ನಮ್ಮದೇ ಗ್ರಾಮದ ಮಲಕಪ್ಪ ಸಂಗಮೇಶ ಹಾಗೂ ವಿಠ್ಠಲ ಜಕನೂರು ಎಂಬ ಇನ್ನೂ ಇಬ್ಬರು ಯುವಕರು ಅಲ್ಲಿದ್ದು, ಭಾರತಕ್ಕೆ ಮರಳು ಮುಂದಾಗಿದ್ದಾರೆ ಎಂದರು.

ಜಿ.ಪಂ. ಮಾಜಿ ಅಧ್ಯಕ್ಷ ಉಮೇಶ ಕೋಳಕೂರು, ಮಾಜಿ ಸದಸ್ಯ ಮಲ್ಲು ಕನ್ಬೂರು ಇವರ ಮೂಲಕ ಕುಟುಂಬ ಸದಸ್ಯರು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಇವರ ಮೂಲಕ ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ಮೂಲಕ ತವರಿಗೆ ಮರಳತಮ್ಮನ್ನು ವಿವರಿಸಿದ್ದಾರೆ.

ಕುವೈತ್ ದೇಶದಲ್ಲಿ ಹಿಂಸೆ ಅನುಭವಿಸುತ್ತಿದ್ದ ತಮ್ಮನ್ನು ಭಾರತಕ್ಕೆ ಮರಳಿ ಕರೆತರುವಲ್ಲಿ ಸಹಾಯ ಹಸ್ತ ಚಾಚಿದ ಪ್ರಧಾನಿ ನರೇಂದ್ರ ಮೋದಿ, ಸಂಸದ ರಮೇಶ ಜಿಗಜಿಣಗಿ, ರಾಯಭಾರ ಕಛೇರಿಯ ಅಧಿಕಾರಿಗಳು, ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next