ಕೊರಟಗೆರೆ: ತಾಲೂಕಿನ ಸಿದ್ಧರಬೆಟ್ಟ ರಂಭಾಪುರಿ ಖಾಸಾ ಶಾಖಾ ಮಠ ಹಾಗೂ ಸಿದ್ಧರಬೆಟ್ಟ ರೋಟರಿ ಸಂಸ್ಥೆ ಸಹಯೋಗದಲ್ಲಿ ನ.30ರಂದು ನಿರುದ್ಯೋಗಿಗಳಿಗೆ ಬೃಹತ್ ಉದ್ಯೋಗ ಮೇಳ ಏರ್ಪಡಿಸಲಾಗಿದೆ ಎಂದು ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಯುನೈಟೆಡ್ ಸೌಹಾರ್ಥ ಕೋ- ಆಪರೇಟೀವ್ ಲಿಮಿಟೆಡ್ ಬ್ಯಾಂಕ್‌ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಗ್ಗೆ 9ರಿಂದ ಸಂಜೆ 5ರವರೆಗೆ ನಡೆಯಲಿರುವ ಮೇಳ ದಲ್ಲಿ ತುಮಕೂರು ಜಿಲ್ಲೆ ಸೇರಿ ಸುತ್ತಮುತ್ತಲ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ವಿದ್ಯಾವಂತ ನಿರುದ್ಯೋಗಿ ಯುವಕ-ಯುವತಿಯರುಉದ್ಯೋಗವಿಲ್ಲದವರು ಭಾಗವಹಿಸಬಹುದು. ಸುಮಾರು 70ಕ್ಕೂ ಹೆಚ್ಚು ವಿವಿಧ ಕಂಪನಿಗಳು ಪಾಲ್ಗೊಳ್ಳಲಿವೆ. 5 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಸಿಗಲಿದೆ ಎಂದು ತಿಳಿಸಿದರು.
ಪ್ರಾಥಮಿಕ 7ನೇ ತರಗತಿಯಿಂದ ಪದವಿ,ಡಿಪ್ಲೋಮಾ, ಬಿ.ಇ ಸೇರಿ ಎಲ್ಲಾ ತರಹದ ಪದವೀಧರರು ಭಾಗವಹಿಸಬಹುದಾಗಿದೆ. ಉದ್ಯೋಗ ಮೇಳದಲ್ಲಿ ಭಾಗವಹಿಸುವ ನಿರುದ್ಯೋಗಿಗಳು ರೋಟರಿ ಸಿದ್ಧರಬೆಟ್ಟ ಆನ್‌ಲೈನ್ ಮತ್ತು ನೇರವಾಗಿ ಮಠದಲ್ಲಿ ನೋಂದಣಿ ಮಾಡಿಸಬಹುದು. ತಪ್ಪಿದಲ್ಲಿ 30ರಂದು ಬೆಳಗ್ಗೆ ಸ್ಥಳದಲ್ಲೇ ನೋಂದಣಿ ಮಾಡಬಹುದು. ಮೇಳದಲ್ಲಿ ಭಾಗವಹಿಸುವ ದೂರದಿಂದ ಆಗಮಿಸುವ ನಿರುದ್ಯೋಗಿಗಳಿಗೆಮಠದಲ್ಲಿ ವಸತಿ ಹಾಗೂ ಎಲ್ಲಾ ನಿರುದ್ಯೋಗಿಗಳಿಗೆ ಉಚಿತ ಬೆಳಗ್ಗೆ ತಿಂಡಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಕೊರಟಗೆರೆ ಮತ್ತು ತುಮಕೂರಿನಿಂದ ಸಿದ್ಧರಬೆಟ್ಟಕ್ಕೆ ಸಾರಿಗೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ರೋಟರಿ ಸಿದ್ಧರಬೆಟ್ಟ ನಿಕಟಪೂರ್ವ ಅಧ್ಯಕ್ಷ ಗಂಗಾಧರಶಾಸ್ತ್ರಿ ಮಾತನಾಡಿ, ಶ್ರೀಗಳ ಆಶಯದಂತೆ ಗ್ರಾಮೀಣ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ನೀಡುವ ದೃಷ್ಟಿಯಿಂದ ಮೇಳದಲ್ಲಿ ಸುಮಾರು 70ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತಿದ್ದು, ಅರ್ಹತೆಗೆ ತಕ್ಕಂತೆ ಉದ್ಯೋಗ ಆಯ್ಕೆಮಾಡಲಾಗುವುದು. ಮೇಳದಲ್ಲಿ ಭಾಗವಹಿಸುವಾಗ ಮೂಲ ದಾಖಲಾತಿ ಜೊತೆ ಜೆರಾಕ್ಸ್ ಪ್ರತಿ ಕಡ್ಡಾಯವಾಗಿ ತರಬೇಕು. 18 ವರ್ಷ ತುಂಬಿದ ಎಲ್ಲಾ ನಿರುದ್ಯೋಗಿಗಳು ಭಾಗವಹಿಸಬಹುದಾಗಿದೆ ಎಂದು ತಿಳಿಸಿದರು. ರೋಟರಿ ಸಿದ್ಧರಬೆಟ್ಟ ಅಧ್ಯಕ್ಷ ಸಿದ್ದಬಸಪ್ಪ, ಕಾರ್ಯದರ್ಶಿ ದೊಡ್ಡೆಗೌಡ, ಖಜಾಂಚಿ ಕೆ.ಎನ್.ರಘು, ಸದಸ್ಯರಾದ ವೈ.ವಿ.ಪಂಚಾಕ್ಷರಿ, ರಾಮಯ್ಯ, ಶಿವಕುಮಾರ್, ಸಚಿನ್, ಬಸವರಾಜಪ್ಪ ಇತರರಿದ್ದರು.