ಎಚ್.ಡಿ.ಕೋಟೆ: ಗ್ರಾಮೀಣ ಭಾಗದ ನಿರುದ್ಯೋಗಿಗಳು ಕೇವಲ ಸರ್ಕಾರಿ ಕೆಲಸವೇ ಬೇಕೆಂದು ಹಠ ಹಿಡಿಯದೆ ಸ್ಥಳೀಯ ಉದ್ಯೋಗ ಮೇಳಗಳಲ್ಲಿ ಪಾಲ್ಗೊಂಡು ಪ್ರತಿಷ್ಠಿತ ಕಂಪನಿಗಳಲ್ಲಿಯೇ ಕೆಲಸಕ್ಕೆ ಸೇರಿ ಸ್ವಾಭಿಮಾನಿಗಳಾಗಿ ಬದುಕಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ಪಟ್ಟಣದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಉದ್ಯೋಗ ಮೇಳಗಳು ತಾಲೂಕು ಮಟ್ಟದಲ್ಲಿ ಆಯೋಜಿಸಿ ಗ್ರಾಮೀಣ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಕೊಡುವುದು ನನ್ನ ಕನಸಿನ ಯೋಜನೆ.
ಸ್ವಾಭಿಮಾನಿಗಳಾಗಿ ಬದುಕಲು ಹಾಗೂ ನಿಮ್ಮನ್ನೇ ಅವಲಂಬಿಸಿರುವ ಕುಟುಂಬ ಪೋಷಣೆಗೆ ಇಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಉದ್ಯೋಗ ಮೇಳ ಗ್ರಾಮೀಣ ನಿರುದ್ಯೋಗಿಗಳಿಗೆ ವರದಾನವೆಂದೇ ಭಾವಿಸಬೇಕೆಂದರು.
ಪ್ರತಿಷ್ಠಿತ ಕಂಪನಿಗಳು: ಮೇಳದಲ್ಲಿ ಇನ್ಫೋಸಿಸ್, ವೈಟ್ ಹಾರ್ಸ್, ಹೀರೋ, ಸಿಎಫ್‌ಟಿಆರ್‌ಐ, ಗುರುಕುಲ ತರಬೇತಿ ಸಂಸ್ಥೆ, ಎಲ್‌ಐಸಿ, ಮತ್ತು ಗ್ಲೋಬಾಲ್ ಮ್ಯಾನೇಜ್‌ಮೆಂಟ್, ಮುತ್ತೂಟ್ ಫಿನ್ ಕಾರ್ಪ, ಫ್ರೆಶ್ ವರ್ಲ್ಡ್, ಕೆನರಾ ಬ್ಯಾಂಕ್, ಎಸ್‌ಬಿಐ ಲೈಫ್ ಮತ್ತಿತರ 30ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಪಾಲ್ಗೊಂಡಿದ್ದವು, ತಾಲೂಕಿನ 3 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು.