Advertisement

15ಕ್ಕೆ ಬೃಹತ್‌ ಉದ್ಯೋಗ ಮೇಳ ಆಯೋಜಿಸಿದ ಬಿಎಸ್‌ಪಿ

02:54 PM Mar 10, 2021 | Team Udayavani |

ದೇವನಹಳ್ಳಿ: ಪದವೀ ಪಡೆದು ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವವರಿಗೆ ಕಾನ್ಷಿರಾಂ ಜೀ ಅವರ 87ನೇ ಹುಟ್ಟುಹಬ್ಬದ ಪ್ರಯುಕ್ತ ಬಿಎಸ್‌ಪಿಯಿಂದ 100 ಕಂಪನಿಗಳಿಂದ ಐತಿಹಾಸಿಕ ಬೃಹತ್‌ ಉದ್ಯೋಗ ಮೇಳವನ್ನು ಮಾ.15ರಂದು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಎಸ್‌ಪಿ ರಾಜ್ಯಸಂಯೋಜಕ ಮಾರಸಂದ್ರ ಮುನಿಯಪ್ಪ ತಿಳಿಸಿದರು.

Advertisement

ನಗರದ ಬೈಚಾಪುರ ರಸ್ತೆಯಲ್ಲಿರುವ ಬಿಎಸ್‌ಪಿ ಕಚೇರಿಯ ಆವರಣದಲ್ಲಿ ಮಾ.15ರಂದು ನಡೆಯಲಿರುವ ಬೃಹತ್‌ ಉದ್ಯೋಗ ಮೇಳದ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ಮನುವಾದಿಗಳು ತಮ್ಮ ಸಂಪತ್ತು ಮತ್ತು ಅಧಿಕಾರದ ರಕ್ಷಣೆಗಾಗಿ ವಿವಿಧ ರಾಜಕೀಯ ಪಕ್ಷಗಳನ್ನು ಕಟ್ಟಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ಜಿಲ್ಲೆಗೆ ಶೂನ್ಯ ಬಜೆಟ್‌ ಘೋಷಿಸಿದ್ದು, ರೈತ ವಿರೋಧಿ, ಜನವಿರೋಧಿ, ಗೋಹತ್ಯೆ ನಿಷೇಧ ಕಾಯ್ದೆಗಳನ್ನು ತಂದು ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ. ನಿರುದ್ಯೋಗಿಗಳು ತಮ್ಮವಿದ್ಯಾಭ್ಯಾಸದ ದಾಖಲಾತಿಯೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಆಯ್ಕೆಯಾದವರಿಗೆ ವೇದಿಕೆಯಲ್ಲಿಯೇ ಆಯ್ಕೆ ಪತ್ರವನ್ನು ಕಂಪನಿಗಳಿಂದ ಕೊಡಿಸಲಾಗುವುದು ಎಂದರು.

ಬಿಜೆಪಿ ಸರ್ಕಾರದ ವಿರುದ್ಧ ಕಿಡಿ: ಪ್ರತಿ ಜನರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ, ರೈತವಿರೋಧಿ, ಬೆಲೆ ಏರಿಕೆ, ಗೋಹತ್ಯೆ ನಿಷೇಧ ಹೀಗೆ ಹಲವು ಕಾಯ್ದೆಗಳಿಂದ ಬೇಸತ್ತು ಹೋಗಿದ್ದಾರೆ. ಬಿಜೆಪಿ ಸರ್ಕಾರ ಬಡವರ ಪರ ಎಂದು ಹೇಳಿಕೊಂಡುಬಡವರಿಗೆ ಮರಣ ಶಾಸನ ಬರೆಯುತ್ತಿದ್ದಾರೆ. ಹಲವು ನಿರುದ್ಯೋಗಿಗಳಿಗೆ ಉದ್ಯೋಗ ಭರವಸೆ ನೀಡಿ,ಉದ್ಯೋಗ ಕೊಡಿಸುವ ಪಂಗನಾಮ ಹಾಕಿದ್ದಾರೆ. ಬಣ್ಣ ಬಣ್ಣದ ಮಾತುಗಳಿಂದ ಅಧಿಕಾರಕ್ಕೆ ಬಂದುಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಸ್ಥಳದಲ್ಲಿಯೇ ಆಯ್ಕೆ ಪತ್ರ: ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ನಂದಿಗುಂದ ಪಿ.ವೆಂಕಟೇಶ್‌ ಮಾತನಾಡಿ, ಎಸ್‌ ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಬಿಇ, ಪದವಿ, ಪಿಜಿ, ಸ್ನತಕೋತ್ತರ ವಿದ್ಯಾಭ್ಯಾಸ ಮಾಡಿರುವ ನೂರಾರು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಉದ್ಯೋಗ ಮೇಳದಲ್ಲಿ ಹಲವು ಕಂಪನಿಗಳ ಸಹಭಾಗಿತ್ವದಲ್ಲಿ ಹಮ್ಮಿಕೊಂಡು ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯಲು ಸ್ಥಳದಲ್ಲಿಯೇ ಆಯ್ಕೆ ಪತ್ರಗಳನ್ನು ನೀಡುವ ಕೆಲಸವಾಗುತ್ತದೆ ಎಂದು ಹೇಳಿದರು.

ಬಿಎಸ್‌ಪಿ ಪದಾಧಿಕಾರಿ ಮುನಿಕೃಷ್ಣಪ್ಪ, ತಿಮ್ಮರಾಜು,ನಾಗರಾಜು, ಮಹದೇವಪ್ಪ, ತ್ಯಾರ ಮುನಿರಾಜು, ನಾರಾಯಣಸ್ವಾಮಿ, ಸಂತೋಷ್‌, ಹಲವಾರು ಇದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next