Advertisement
ನಗರದ ಕಾಟನ್ ಸೇಲ್ಸ್ ಸೊಸೈಟಿ ಆವರಣದಲ್ಲಿನ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಕಾರ್ಯಕಾರಿಣಿ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳು, 9 ಬ್ಲಾಕ್‌ಗಳಿದ್ದು, ಪ್ರತಿಯೊಂದು ಬ್ಲಾಕ್‌ಗಳ ಅಧ್ಯಕ್ಷರು ಕನಿಷ್ಟ 3000 ಯುವಕರನ್ನು, ಬ್ಲಾಕ್ ಪದಾಧಿಕಾರಿಗಳು ಕನಿಷ್ಟ 1000 ಯುವಕರನ್ನು ಉದ್ಯೋಗ ಸೃಷ್ಟಿ ಸರ್ವೇಯಲ್ಲಿ ಭಾಗೀದಾರರನ್ನಾಗಿ ಮಾಡಿಕೊಂಡು, ಅವರ ವಿದ್ಯಾರ್ಹತೆ, ಮಾಡುತ್ತಿದ್ದ ಉದ್ಯೋಗ, ಉದ್ಯೋಗದ ಸ್ಥಿತಿಗತಿ ಮಾಹಿತಿ ಪಡೆಯಬೇಕು. ಮುಂದಿನ ದಿನಗಳಲ್ಲಿ ನಿರುದ್ಯೋಗಿ ಯುವಕರಿಗೆ ಆದ್ಯತೆ ನೀಡಲಾಗುವುದು ಎಂದರು.
ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಕಾಂಗ್ರೆಸ್ ಸ್ವಾತಂತ್ರ್ಯ ಸಂಗ್ರಾಮದಿಂದಲೂ ಯುವಕರನ್ನು ಮುನ್ನಡೆಸುತ್ತ ಹೋರಾಟ ನಡೆಸುತ್ತ ಬಂದಿದೆ. ಯುವಕರು ನಿರಪೇಕ್ಷ ಭಾವದಿಂದ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಬೇಕೆಂದು ಹೇಳಿದರು.
ಮಾಜಿ ಶಾಸಕ ಬಿ.ಆರ್.ಯಾವಗಲ್ ಮಾತನಾಡಿ, ಬಿಜೆಪಿಯ ದುರಾಡಳಿತ ದೇಶವನ್ನು ಅವನತಿಯತ್ತ ಸಾಗಿಸುತ್ತಿದೆ. ಧಾರ್ಮಿಕ ವಿಚಾರಗಳನ್ನು ಮುಂದಿಟ್ಟುಕೊಂಡು ದೇಶ ಇಬ್ಭಾಗ ಮಾಡುವಂತಹ ಸ್ಥಿತಿಗೆ ತಂದಿಟ್ಟಿದೆ. ಯುವಕರು ಎಚ್ಚರಗೊಂಡು ದೇಶದ ಏಕತೆ, ಸಮಗ್ರತೆ, ಅಖಂಡತೆ ಸಾರಲು ಶ್ರಮಿಸಬೇಕೆಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್. ಪಾಟೀಲ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಮಾತನಾಡಿದರು. ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಯುವ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಮಂಜುನಾಥ ಮಣಿಶೆಟ್ಟಿ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಗೋವರ್ಧನ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಪಾಟೀಲ, ಮುಖಂಡರಾದ ರಾಮಕೃಷ್ಣ ರೊಳ್ಳಿ, ಉದಯಗೌಡ ವೀರನಗೌಡ್ರ, ವಿಜಯಕುಮಾರ ಚಲವಾದಿ, ವೀರಣ್ಣ ಶೆಟ್ಟರ, ಶರಣಪ್ಪ ಬೆಟಗೇರಿ ಇತರರಿದ್ದರು.