ನವದೆಹಲಿ: ಯುಜಿಸಿಯ ನೂತನ ಅಧ್ಯಕ್ಷರನ್ನಾಗಿ ಜವಾಹರ್‌ಲಾಲ್ ನೆಹರೂ ವಿವಿಯ ನಿವೃತ್ತ ಕುಲಪತಿ ಎಂ.ಜಗದೀಶ್ ಕುಮಾರ್ ಅವರನ್ನು ನೇಮಿಸಲಾಗಿದೆ.
ಈ ಬಗ್ಗೆ ಕೇಂದ್ರ ಶಿಕ್ಷಣ ಸಚಿವಾಲಯ ಶುಕ್ರವಾರ ಆದೇಶ ಹೊರಡಿಸಿದೆ. ಅವರ ಅಧಿಕಾರದ ಅವಧಿ ಐದು ವರ್ಷಗಳು. ಒಂದು ವೇಳೆ ಅವರು ನಿಗದ ಅವಧಿಗಿಂತ ಮೊದಲೇ 65 ವರ್ಷ ಪೂರ್ತಿಗೊಂಡರೆ ನಿವೃತ್ತಿಯಾಗಬೇಕಾಗುತ್ತದೆ.
2021 ಡಿ.7ರಂದು ಪ್ರೊ.ಡಿ.ಪಿ.ಸಿಂಗ್ ಅವರು ನಿವೃತ್ತಿಯಾದ ಬಳಿಕ ಈ ಹುದ್ದೆ ತೆರವಾಗಿತ್ತು. ಅವರು ಜವಹಾರ್‌ಲಾಲ್ ನೆಹರೂ ವಿವಿ ಕುಲಪತಿಯಾಗಿದ್ದ ವೇಳೆ ಹಲವು ವಿವಾದಗಳು ಉಂಟಾಗಿದ್ದವು. ಸಂಸತ್ ಮೇಲೆ ದಾಳಿ ನಡೆಸಿದ್ದ ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ವಿಧಿಸಿದ್ದನ್ನು ಖಂಡಿಸಿ, ಕೆಲವರು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇದನ್ನೂ ಓದಿ:ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 140 ಅಂಕ ಇಳಿಕೆ; ಫೆ.04ರಂದು ನಷ್ಟ ಕಂಡ ಷೇರು ಯಾವುದು
ತೆಲಂಗಾಣ ಜಿಲ್ಲೆಯ ನಲ್ಗೊಂಡ ಜಿಲ್ಲೆಯವರಾದ ಜಗದೀಶ್, ಎಂ.ಎಸ್. ಪದವೀಧರರು, ಐಐಟಿ ಮದ್ರಾಸ್‌ನಿಂದ ಪಿಎಚ್.ಡಿ ಪದವೀಧರರು.