Advertisement

ಜ್ಞಾನಯೋಗಾಶ್ರಮದಲ್ಲಿ ಸಂಭ್ರಮದ ಗುರುಪೂರ್ಣಿಮೆ

03:25 PM Jul 10, 2017 | |

ವಿಜಯಪುರ: ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಶ್ರೀಗಳ ಸಾರಥ್ಯದಲ್ಲಿ ವೇದಾಂತ ಕೇಸರಿ ಮಲ್ಲಿಕಾರ್ಜುನ 
ಶಿವಯೋಗಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸುವ ಭಕ್ತರು ಶ್ರದ್ಧಾ-ಭಕ್ತಿಯಿಂದ ಗುರುಪೂರ್ಣಿಮೆ ಆಚರಿಸಿದರು.
ರವಿವಾರ ಗುರುಪೂರ್ಣಿಮೆ ಅಂಗವಾಗಿ ಶ್ರೀಗಳ ಕತೃì ಗದ್ದುಗೆಗೆ, ಜಪಯಜ್ಞ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಲಾಯಿತು.

Advertisement

ಮಲ್ಲಿಕಾರ್ಜುನ ಶಿವಯೋಗಿಗಳ ಪ್ರವಚನದ ಧ್ವನಿ ಸುರುಳಿ ಪ್ರಸಾರ ಮಾಡಲಾಯಿತು. ವಿಜಯಪುರ, ಬೆಳಗಾವಿ, ಬಾಗಲಕೋಟೆ,
ಬೀದರ ಸೇರಿದಂತೆ ನೆರೆ ರಾಜ್ಯದ ಸೊಲ್ಲಾಪುರ, ಸಾಂಗಲಿ ಸೇರಿದಂತೆ ರಾಜ್ಯ-ಹೊರರಾಜ್ಯಗಳಿಂದ ಬೆಳಗ್ಗೆಯಿಂದಲೇ 
ತಂಡೋಪತಂಡವಾಗಿ ಜ್ಞಾನಯೋಗಾಶ್ರಮಕ್ಕೆ ಆಗಮಿಸಿದ ವಿವಿಧ ಮಠಾ ಧೀಶರು, ಭಕ್ತರು ಸಿದ್ದೇಶ್ವರ ಶ್ರೀಗಳ ಆಶೀರ್ವಾದ ಪಡೆದರು. ಬಸವಲಿಂಗ ಸ್ವಾಮೀಜಿ ಸೇರಿದಂತೆ ಹಲವಾರು ಸ್ವಾಮೀಜಿಗಳ ಪಾವನ ಸಾನ್ನಿಧ್ಯದಲ್ಲಿ ಹಲವು ಮಠಾ ಧೀಶರು ವೇದಾಂತ ಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಾಮೂಹಿಕ ಭಜನೆ ನಡೆಯಿತು.

ಗುರುಪೂರ್ಣಿಮೆ ಅಂಗವಾಗಿ ಬೆಳಗ್ಗೆ 9ರಿಂದ ರಾತ್ರಿ 8ರವರೆಗೂ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಯಿತು. ಆಶ್ರಮಕ್ಕೆ ಭೇಟಿ ನೀಡಿದ್ದ ಭಕ್ತರೆಲ್ಲರೂ ದಾಸೋಹ ಪ್ರಸಾದವಾಗಿ ಸಜ್ಜಕ, ಅನ್ನಸಾಂಬಾರು ಸವಿದರು. ವಿದ್ಯಾರ್ಥಿಗಳು, ಯುವಕ ಸಂಘ-ಸಂಸ್ಥೆಗಳ ಸ್ವಯಂಸೇವಕರು ಆಶ್ರಮದಲ್ಲಿ ಸ್ವಯಂ ಪ್ರೇರಿತವಾಗಿ ಭಕ್ತರ ಸೇವೆ ಮಾಡಿದರು. ನೀರನ್ನು ವ್ಯರ್ಥ ಮಾಡಬೇಡಿ, ನೀರು ಅಮೂಲ್ಯ ವಸ್ತು, ಆಹಾರ ವ್ಯರ್ಥ ಮಾಡಮಾಡಿ, ಅನ್ನ ದೇವರಿಗಿಂತ ದೊಡ್ಡದು ಎಂಬ ಸಂದೇಶ ಫಲಕಗಳನ್ನು ಗಿಡಮರಗಳ ಮೇಲೆ ಅಳವಡಿಸಿದ್ದು ಜನತೆಯನ್ನು ಆಕರ್ಷಿಸಿತು.

ಜ್ಞಾನಯೋಗಾಶ್ರಮಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ ಸೌಲಭ್ಯ ಕಲ್ಪಿಸಿತ್ತು. ಪ್ರಮುಖವಾಗಿ
ಮಹಾತ್ಮ ಗಾಂಧಿಧೀಜಿ ವೃತ್ತದಿಂದ ಆಶ್ರಮದವರೆಗೆ ನೂರಾರಿ ವಿಶೇಷ ಬಸ್‌ ಸೇವೆ ನೀಡಿದವು. ಆಶ್ರಮದ ಸುತ್ತಮುತ್ತ ವಾಹನ ದಟ್ಟಣೆ ಕಡಿಮೆ ಮಾಡಲು ಅಣತಿ ದೂರದಲ್ಲೇ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next