ವಿಜಯಪುರ: ನಡೆದಾಡುವ ದೇವರು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಬಯಲಲ್ಲಿ ಬಯಲಾಗಿ ಇದೀಗ ವರ್ಷ ಕಳೆದಿದೆ. ಗಿನ್ನಿಸ್ ದಾಖಲೆ ಎಂಬಂತೆ 25ಲಕ್ಷಕ್ಕೂ ಮಿಕ್ಕ ಭಕ್ತರು ಒಟ್ಟಾಗಿ ಸೇರಿ ವಿದಾಯ ಹೇಳಿ ಶತಮಾನದ ಸಂತನಿಲ್ಲದೇ ಮತ್ತೂಂದು ಸಂಕ್ರಾಂತಿ ಬಂದಿದೆ. ತಮ್ಮಗಳ ಭವಭ್ರಾಂತಿ ಬಿಡಿಸಿದ್ದಕ್ಕೆ ಭಕ್ತರು ಮಾತ್ರ ಶತಮಾನದ ಸಂತನನ್ನು ಹೃದಯಾಂತರಾಳದಲ್ಲಿ ಸದಾ ಜೀವಂತವಾಗಿರಿಸಿಕೊಂಡು ಸ್ಮರಿಸುತ್ತಲೇ ಇದ್ದಾರೆ.
Advertisement
ಕರ್ನಾಟಕ ಮಾತ್ರವಲ್ಲ ಭಾರತದ ಗಡಿಯಾಚೆ ಹಲವು ದೇಶಗಳಲ್ಲಿ ಸುತ್ತಿ ಪ್ರವಚನ ನೀಡಿದ್ದ ಸಿದ್ಧೇಶ್ವರ ಶ್ರೀಗಳು, ವಿಶ್ವದಾದ್ಯಂತ ಭಕ್ತರ ದಂಡು ಹೊಂದಿದ್ದಾರೆ. ಜಗತ್ತಿಗೆ ತಮ್ಮ ಜೀವಿತವನ್ನೇ ಸಿದ್ಧೇಶ್ವರರು ಸಂದೇಶವಾಗಿ ಬಿಟ್ಟು ಹೋಗಿದ್ದಾರೆ. ಬಯಲಲ್ಲಿ ಬಯಲಾಗುವ ತಮ್ಮ ಅಂತಿಮ ಇಂಗಿತವನ್ನು ಲಿಖೀತ ಉಯಿಲಿನಲ್ಲಿ ದಾಖಲಿಸುವ ಮೂಲಕ ನಿರ್ಮೋಹಿ ಸಂತನೆಂದರೆ ಹೇಗಿರಬೇಕು ಎಂಬುದಕ್ಕೆ ಸಾರ್ವಕಾಲಿಕ ಸಾಕ್ಷಿಯಾಗಿದ್ದಾರೆ. ತಾವು ಬರೆದಿದ್ದ ಅಂತಿಮ ವಿದಾಯದ ಉಯಿಲಿನಲ್ಲಿ ಸಣ್ಣ ಕುರುಹು, ಸ್ಥಾವರವೂ ಇಲ್ಲದಂತೆ ಬಯಲಲ್ಲಿ ಬಯಲಾಗುವ ಇಂಗಿತ ವ್ಯಕ್ತಪಡಿಸಿದ್ದರು.ಸಂದೇಶವೂ ಹಲವು ಸರ್ವಸಂಗಿಗಳು ಮಾತ್ರವಲ್ಲ ಸಂತರಿಗೂ ಶಾಸ್ವತ ಆದರ್ಶ ಎಂಬಂತಿತ್ತು.
ಕಾರ್ಯಕ್ರಮಗಳನ್ನು ಸಂಘಟಿಸಲಾಗಿತ್ತು. ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಕನ್ಹೆàರಿ ಕಾಡಸಿದ್ದೇಶ್ವರ ಶ್ರೀಗಳು, ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರು ಬಸವಲಿಂಗ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸೇರಿದಂತೆ ಇತರರು ನವೆಂಬರ್ ತಿಂಗಳಲ್ಲಿ ಕೈಗೊಂಡ ನಿರ್ಧಾರದಂತೆ ಇದೀಗ “ಗುರು ನಮನ’ ಯಶಸ್ವಿಗೊಳಿಸಿದ್ದಾರೆ.
Related Articles
ಗುರುನಮನ ಕಾರ್ಯಕ್ರಮಕ್ಕೂ ಮುನ್ನ 15 ದಿನಗಳ ಕಾಲ ಶ್ರೀಗಳ ಸಂದೇಶ ಪರಸರಿಸಲು ಹಲವು ಕಾರ್ಯಕ್ರಮ ಆಯೋಜಿಸಿ ಯಶಸ್ವಿಗೊಳಿಸಲಾಗಿದೆ.
Advertisement
ಅಲ್ಲದೇ ಜ್ಞಾನಯೋಗಾಶ್ರಮದಲ್ಲಿ ಶ್ರೀಗಳ ಆಶಯಗಳ ಗ್ರಾಮೀಣ ಬದುಕು, ರೈತರು, ಯುವಜನರು, ಶಿಕ್ಷಣ ಹೀಗೆ ವೈವಿಧ್ಯಮಯಗೋಷ್ಠಿಗಳನ್ನು ನಡೆಸುವ ಮೂಲಕ “ಶತಮಾನದ ಸಂತ’ನನ್ನು ವಿಶೇಷವಾಗಿ ಸ್ಮರಿಸುವ ಕೆಲಸವನ್ನೂ ಮಾಡಲಾಗಿದೆ. ಕಳೆದೊಂದು ವಾರದಿಂದ ನಿತ್ಯವೂ ಜ್ಞಾನಯೋಗಾಶ್ರಮದಲ್ಲಿ ನಡೆದ ಕಾರ್ಯಕ್ರಮಗಳಿಗೆ ಪಕ್ಷಾತೀತವಾಗಿ ಗಣ್ಯರನ್ನು,
ಸಾಧಕ-ಸಾಧಕಿಯರನ್ನು ಆಹ್ವಾನಿಸಿ, ವಿಶೇಷ ಗೋಷ್ಠಿಗಳನ್ನು ಯಶಸ್ವಿಗೊಳಿಸಿದ್ದಾರೆ. ಆಯೋಜಿಸಿದ್ದ ಕಾರ್ಯಕ್ರಮಗಳು ಕೂಡ ಶ್ರೀಗಳ ಆಶಯದಂತೆ ಸರಳತೆ, ಶಿಸ್ತು, ಸಮಯಪ್ರಜ್ಞೆ, ಸ್ವಚ್ಛತೆ ಹೀಗೆ ನಡೆದಾಡುವ ದೇವರ ಆದರ್ಶ ಸಂದೇಶಗಳ ವಿಷಯಗಳಿಗೆ ಅದ್ಯತೆ ನೀಡಿಲಾಗಿತ್ತು. ಸದರಿ ಕಾರ್ಯಕ್ರಮಕ್ಕೆ ಮಾದಾರ ಚನ್ನಯ್ಯ ಗುರುಪೀಠದ ಶ್ರೀಗಳು, ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಶ್ರೀಗಳು, ಕೂಡಲಸಂಗಮದ ಬಸವಧರ್ಮಪೀಠ ಜಗದ್ಗುರು ಗಂಗಾ ಮಾತಾಜಿ, ಗದಗ ಶಿವಾನಂದ ಮಠದ ಸದಾಶಿವಾನಂದ ಶ್ರೀಗಳು, ಹಂಚಿನಾಳ ಭಕ್ತಿಯೋಗಾಶ್ರಮದ ಪೂಜ್ಯ ಶ್ರೀ ಮಹೇಶಾನಂದ ಶ್ರೀಗಳು, ಸಿಂದಗಿ ಪ್ರಭುಸಾರಂಗ ಶ್ರಿಗಳು ಸೇರಿದಂತೆ ನಾಡಿನ ವಿವಿಧ ಸಂತರನ್ನು ಕರೆಸಿ ಆಧ್ಯಾತ್ಮಿಕ ಜ್ಞಾನ ಪ್ರಸಾರ ಮಾಡಲಾಗಿದೆ. ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಸಚಿವರಾದ ಶಿವಾನಂದ ಪಾಟೀಲ, ಆರ್.ಬಿ.ತಿಮ್ಮಾಪುರ, ಲಕ್ಷ್ಮೀ ಹೆಬ್ಬಾಳಕರ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಎಸ್.ಕೆ.ಬೆಳ್ಳುಬ್ಬಿ, ಶಾಸಕರಾದ ಸಿದ್ದು ಸವದಿ, ಬಿಜೆಪಿ ರಾಜ್ಯಾಧ್ಯಕ್ಷ ವಿ.ವೈ.ವಿಜಯೇಂದ್ರ, ವಾಗ್ಮಿಗಳಾದ ವೀಣಾ ಬನ್ನಂಜೆ, ಚಕ್ರವರ್ತಿ ಸೂಲಿಬೆಲೆ ಇವರಂಥ ಗಣ್ಯರು, ಸಾಧಕರನ್ನು ಕರೆಯಿಸಿ ನಿತ್ಯವೂ ಒಂದೊಂದು ಗೋಷ್ಠಿ ಮೂಲಕ ಉತ್ತಮ ಸಮಾಜಕ್ಕೆ ಮೌಲಿಕ ಸಂದೇಶಗಳನ್ನು ಬಿತ್ತಲಾಗಿದೆ. ಗುರುನಮನದ ಅಂತಿಮ ದಿನವಾದ ಡಿ.2ರಂದು ಮಂಗಳವಾರ ಜ್ಞಾನಯೋಗಾಶ್ರಮದಲ್ಲಿ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುವ ಮೂಲಕ ನಾಡಿನ ಜನತೆಗೆ ನಡೆದಾಡುವ ದೇವರನ್ನು ಸ್ಮರಿಸುವುದಕ್ಕೆ ವೇದಿಕೆ ಸಿದ್ಧಗೊಂಡಿದೆ. *ಜಿ.ಎಸ್.ಕಮತರ