Advertisement
ಕೃತಜ್ಞತೆಯನ್ನು ಸಂಭ್ರಮಿಸುವ ಹಾಗೂ ಈ ಜ್ಞಾನವನ್ನು ಸಂರಕ್ಷಿಸಿದ ಗುರು ಪರಂಪರೆಯನ್ನು ಗೌರವಿಸುವ ದಿನವೇ ಗುರು ಪೂರ್ಣಿಮೆ.
Related Articles
ಹೇಗೆ ಹುಣ್ಣಿಮೆಯ ಚಂದ್ರನು ಉದಯಿಸಿ ಮತ್ತು ಅಸ್ತಮಿಸುವಂತೇ, ಸಾಧಕನಲ್ಲಿ ಕೃತಜ್ಞತೆಯಿಂದ ಕಂಬನಿಯು ಮೂಡುತ್ತದೆ ಹಾಗೂ ಆತ ತನ್ನಲ್ಲಿಯೇ ಆತ್ಮಸ್ತನಾಗಿ ವಿಶ್ರಾಂತಿಯನ್ನು ಪಡೆಯು ತ್ತಾನೆ. ಗುರು ಪೂರ್ಣಿಮೆ ದಿನದಂದು, “ಈ ಜ್ಞಾನವನ್ನು ಪಡೆಯುವ ಮುನ್ನ ನಾನು ಎಲ್ಲಿದ್ದೆ? ಈಗ ಎಲ್ಲಿದ್ದೇನೆ?” ಎಂದು ಆಲೋಚಿಸಬೇಕು.
Advertisement
“ಈ ಜ್ಞಾನ ನನಗೆ ಇಲ್ಲವಾದಲ್ಲಿ ನಾನು ಹೇಗಿರುತ್ತಿದ್ದೆ” ಎಂದು ತಿಳಿದಾಗ ನಿಮ್ಮಲ್ಲಿ ಕೃತಜ್ಞತೆಯು ಉಕ್ಕಿ ಬರುತ್ತದೆ. ಈ ಹುಣ್ಣಿಮೆಯನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತಾರೆ. ವ್ಯಾಸರು ಅಪಾರವಾದ ಜ್ಞಾನ ರಾಶಿಯನ್ನು 4 ವೇದಗಳಾಗಿ ವಿಂಗಡಿಸಿದ್ದಾರೆ. ಜೀವನದ ಪ್ರತಿಯೊಂದು ಹಂತದಲ್ಲಿ ಒದಗುವ ಆಯುರ್ವೇದ ಆದಿಯಾಗಿ, ವಾಸ್ತುಶಿಲ್ಪ, ರಸವಿದ್ಯೆ, ಔಷಧಶಾಸ್ತ್ರದಂತಹ ಜ್ಞಾನಕ್ಕೆ ಇವರ ಕೊಡುಗೆ ಅಪಾರವಾದದ್ದು.
ಗುರುವು ನಮಗೆ ಧ್ರುವ ನಕ್ಷತ್ರದಂತೆ ಮಾರ್ಗ ದರ್ಶಕ. ವಿಭಿನ್ನ ಪರಿಸ್ಥಿತಿಗಳಲ್ಲಿ ಒಬ್ಬ ಗುರು/ಜ್ಞಾನಿ ಹೇಗೆ ವರ್ತಿಸುತ್ತಿದ್ದರು, ನಾವು ಹಾಗೆಯೇ ವರ್ತಿಸಿ ಅವರನ್ನು ಅನುಸರಿಸುವುದಾಗಿದೆ. ಜ್ಞಾನವಿಲ್ಲದ ಜೀವನ ಜೀವನವೇ ಅಲ್ಲ, ಅದು ಸುಮ್ಮನೇ ಬದುಕಿದಂತೆ. ಜ್ಞಾನ ಮೂಡಿದಾಗ ಜೀವನವು ಪ್ರಾರಂಭವಾಗುತ್ತದೆ. ಈ ಗುರುಪೂರ್ಣಿಮೆ ಯಂದು ನಿಮಗೆ ದೊರೆತ ಎಲ್ಲ ಜ್ಞಾನ ಹಾಗೂ ಅನುಗ್ರಹವನ್ನು ಸ್ಮರಿಸಿ ಮತ್ತು ಕೃತಜ್ಞರಾಗಿ. ಪ್ರತಿ ಯೊಬ್ಬರೂ ಹಾಡುತ್ತಾ, ನಲಿಯುತ್ತಾ ಅಂತರಂಗದ ಆನಂದದಲ್ಲಿ ಮಿಂದೇಳಿ.
ಶ್ರೀ ಶ್ರೀ ರವಿಶಂಕರ ಗುರೂಜಿ