Advertisement

ಶಾಲೆಗೆ ಬಣ್ಣ ಬಳಿಯುವ ವಿಚಾರದಲ್ಲಿ ಜೆಎಂಎಂ-ಬಿಜೆಪಿ ವರ್ಣ ಕದನ

12:53 AM May 22, 2022 | Team Udayavani |

ರಾಂಚಿ: ಝಾರ್ಖಂಡ್‌ನ‌ ಸುಮಾರು 35 ಸಾವಿರ ಸರಕಾರಿ ಶಾಲೆಗಳಿಗೆ ಬಳಿ­ಯ­ಲಾಗಿ­­ರುವ ಬಣ್ಣವನ್ನು ಬದಲಾ­­ಯಿಸಲು ರಾಜ್ಯ ಸರಕಾರ ತೀರ್ಮಾ­ನಿಸಿದೆ. ಈ ನಿರ್ಧಾರ, ಆಡಳಿತಾರೂಢ ಝಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ಹಾಗೂ ಬಿಜೆಪಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

Advertisement

ಪ್ರಸ್ತುತ ಎಲ್ಲ ಸರಕಾರಿ ಶಾಲೆಗಳಿಗೆ ನಸುಗೆಂಪು ಬಣ್ಣವನ್ನು ಬಳಿಯ­ಲಾಗಿದ್ದು ಶೌಚಾಲಯಗಳಿಗೆ ನೀಲಿ ಬಣ್ಣ ಬಳಿಯಲಾಗಿದೆ. ಇತ್ತೀಚೆಗೆ ಝಾರ್ಖಂಡ್‌ ಶಿಕ್ಷಣ ಯೋಜನಾ ಮಂಡಳಿ (ಜಿಇಪಿಸಿ), ಎಲ್ಲ ಶಾಲೆ­ಗಳಿಗೂ ಕಡು ಹಸುರು ಮತ್ತು ಬಿಳಿ ಬಣ್ಣಗಳನ್ನು ಬಳಿಸಬೇಕೆಂದು ರಾಜ್ಯದ ಎಲ್ಲ ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ (ಡಿಇಒಗಳು) ಆದೇಶ ನೀಡಿದೆ.

ಇದನ್ನು ಟೀಕಿಸಿರುವ ಬಿಜೆಪಿ, ಕಡು ಹಸುರು ಹಾಗೂ ಬಿಳಿ ಬಣ್ಣಗಳು ಆಡಳಿತಾರೂಢ‌ ಜೆಎಂಎಂ ಧ್ವಜದ ಬಣ್ಣಗಳಾಗಿದೆ. ಎಲ್ಲ ಶಾಲೆಗಳಿಗೂ ರಾಜಕೀಯ ಬಣ್ಣ ಮೆತ್ತಲು ಜೆಎಂಎಂ ನಿರ್ಧರಿಸಿದೆ ಎಂದು ಆರೋಪಿಸಿದೆ.

ಸರಕಾರದ ಸ್ಪಷ್ಟನೆ: ಬಿಜೆಪಿ ಆರೋಪವನ್ನು ನಿರಾಕರಿಸಿರುವ ಶಿಕ್ಷಣ ಸಚಿವ ಜಗರ್ನಾಥ್‌ ಮಹತೋ, ಹಸುರು ಬಣ್ಣ ಕಣ್ಣಿಗೆ ಮುದ ನೀಡುತ್ತದೆ, ಇನ್ನು ಬಿಳಿಯು ಸ್ವತ್ಛತೆಯ ಸಂಕೇತವಾಗಿದೆ. ಹಾಗಾಗಿ ಅವೆರಡೂ ಬಣ್ಣಗಳನ್ನು ಬಳಿಸುವಂತೆ ತಜ್ಞರ ಸಮಿತಿ ಶಿಫಾರಸು ಮಾಡಿದ್ದು, ಅದನ್ನೇ ಅನುಷ್ಠಾನಗೊಳಿಸಲಾಗುತ್ತಿದೆ ಎಂದಿ­ದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next