Advertisement

ಶೋಪಿಯಾನ್‌‌:ಸೇನೆಯಿಂದ ಲಷ್ಕರ್‌ ಉಗ್ರ ಸೆರೆ,ಓರ್ವನ ಹತ್ಯೆ 

10:08 AM Sep 10, 2017 | |

ಶ್ರೀನಗರ: ಶೋಪಿಯಾನ್‌ನಲ್ಲಿ ಭಾನುವಾರ ಸೇನಾ ಪಡೆಗಳು ನಡೆಸಿದ ಕಾರ್ಯಾಚರಣೆ ಯಲ್ಲಿ ಲಷ್ಕರ್‌-ಎ-ತೋಯ್ಬಾ ಸಂಘಟನೆಯ ಓರ್ವ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿದಿದ್ದು, ಹಿಜ್ಬುಲ್‌ ಉಗ್ರನನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ.

Advertisement

ಬಾರ್‌ಬಹಾ ಎಂಬಲ್ಲಿ ಸೇನಾ ಪಡೆಗಳು ಉಗ್ರರ ಅಡಗುತಾಣದ ಮೇಲೆ ಶನಿವಾರ ಸಂಜೆಯೆ ಕಾರ್ಯಾಚರಣೆಗಿಳಿದ್ದಿದ್ದು ಈ ವೇಳೆ ಶಸ್ತ್ರಾಸ್ತ್ರ ಸಹಿತ ಉಗ್ರ ಅದಿಲ್‌ ದಾರ್‌ನನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಹತ್ಯೆಗೀಡಾದ ಉಗ್ರ ತಾರೀಖ್‌ ಹಾ ಭಟ್‌ ಎಂದು ಗುರುತಿಸಲಾಗಿದೆ. 

ಸ್ಥಳದಲ್ಲಿ ಇನ್ನಿಬ್ಬರು ಉಗ್ರರು ಅಡಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಕಾರ್ಯಾಚರಣೆ ಮುಂದುವರಿದಿದೆ. 

Advertisement

Udayavani is now on Telegram. Click here to join our channel and stay updated with the latest news.

Next