Advertisement

ಕಾಶ್ಮೀರ: 2 ತಿಂಗಳೊಳಗೆ 26 ಸೈನಿಕರು ಹುತಾತ್ಮ; 22 ಉಗ್ರರು ಫಿನಿಷ್

10:52 AM Feb 19, 2017 | Team Udayavani |

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ  ಉಗ್ರರ ಉಪಟಳದ ತೀವ್ರತೆಗೆ ಸಾಕ್ಷಿಯಾಗಿ  2017 ರ ಮೊದಲ 2 ತಿಂಗಳೊಳಗೆ 26 ಮಂದಿ ವೀರ ಯೋಧರು ಉಗ್ರರ ವಿರುದ್ಧ ಕಾರ್ಯಾಚರಣೆ ವೇಳೆ ಹುತಾತ್ಮರಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧರ ಸಂಖ್ಯೆಗಿಂತ ಕಡಿಮೆ ಅಂದರೆ 22 ಸೈನಿಕರನ್ನು ಹತ್ಯೆಗೈಯಲಾಗಿದೆ. 

Advertisement

2 ತಿಂಗಳ ಒಳಗೆ 22 ಉಗ್ರರನ್ನು ಸದೆಬಡಿದಿರುವುದು 2010 ರ ಬಳಿಕ ಹೆಚ್ಚಿನ ಸಾಧನೆ ಎನಿಸಿದೆ. ಹುತಾತ್ಮರಾದವರಲ್ಲಿ  ಮೇಜರ್‌ ಸೇರಿ 25 ಮಂದಿ ಸೈನಿಕರು ಸೇರಿದ್ದಾರೆ. ಗುಂಡಿನ ಕಾಳಗದ ವೇಳೆ ಇಬ್ಬರು ನಾಗರಿಕರೂ ಬಲಿಯಾಗಿದ್ದಾರೆ. 

ಉಗ್ರರ ನಿರ್ನಾಮಕ್ಕೆ ಪಣ ತೊಟ್ಟಿರುವ ವೀರಯೋಧರು ದಿನಕ್ಕೊಂದರಂತೆ 50 ಕಾರ್ಯಾಚರಣೆ ನಡೆಸಿದ್ದು 16 ಕಾರ್ಯಾಚರಣೆಗಳು ಉಗ್ರರ ಹತ್ಯೆಯಲ್ಲಿ ಅಂತ್ಯಗೊಂಡಿದ್ದು ಮೂವರು ಉಗ್ರರನ್ನು ಸೆರೆ ಹಿಡಿಯಲಾಗಿದೆ. ಉಗ್ರರಿಗೆ ಆಶ್ರಯ ನೀಡಿದ್ದ , ಕುಕೃತ್ಯಗಳಿಗೆ ನೆರವಾಗುತ್ತಿದ್ದ 40 ಮಂದಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next