Advertisement

ಬಂಡಿಪೋರಾದಲ್ಲಿ ಉಗ್ರರಿಬ್ಬರ ಹತ್ಯೆ ;ಪೊಲೀಸ್‌ ಹುತಾತ್ಮ 

02:26 PM Oct 29, 2017 | Team Udayavani |

ಶ್ರೀನಗರ : ಬಂಡಿಪೋರಾದ ಹಾಜಿನ್‌ ಪ್ರದೇಶದ ಮೀರ್‌ ಮೊಹಲ್ಲಾ ಎಂಬಲ್ಲಿ ಭಾನುವಾರ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ. ಕಾರ್ಯಾಚರಣೆಯಲ್ಲಿ ವಿಶೇಷ ಕಾರ್ಯಪಡೆಯ ಪೊಲೀಸ್‌ ವೊರ್ವರು ಹುತಾತ್ಮರಾಗಿದ್ದಾರೆ.

Advertisement

ಉಗ್ರರು ಅಡಗಿದ್ದ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಾಗ ಭಾರೀ ಗುಂಡಿನ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. 

ಸ್ಥಳದಲ್ಲಿ ಭಾರೀ ಸಂಖ್ಯೆಯ ಭದ್ರತಾ ಪಡೆಗಳು ಜಮಾವಣೆಗೊಂಡು ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಇನ್ನೂ ಇಬ್ಬರು ಉಗ್ರರು ಅಡಗಿರುವ ಬಗ್ಗೆ ಶಂಕಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next