ಅಮೆರಿಕಾ : ಜಾನ್ ಸನ್ ಆ್ಯಂಡ್ ಜಾನ್ ಸನ್ (ಜೆ & ಜೆ) ಲಸಿಕೆಯ ಒಂದು ಡೋಸ್ ಸೋಂಕಿನ ಡೆಲ್ಟಾ ರೂಪಾಂತರದ ವಿರುದ್ಧ ಉಳಿದ ಲಸಿಕೆಗಳಿಗಿಂತ ಕಡಿಮೆ ಮಟ್ಟದ ಪ್ರತಿಕಾಯಗಳನ್ನು ಹೊಂದಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
ಅಮೆರಿಕಾದಲ್ಲಿ ಹೆಚ್ಚು ದಾಖಲಾಗುತ್ತಿರುವ ಕೋವಿಡ್ ಪ್ರಕರಣಗಳ ವಿರುದ್ಧ ಜಾನ್ ಸನ್ ಆ್ಯಂಡ್ ಜಾನ್ ಸನ್ ಲಸಿಕೆ ಎಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ ಎಂಬ ಪ್ರಶ್ನೆಯನ್ನು ಎಬ್ಬಿಸಿದೆ.
ಇದನ್ನೂ ಓದಿ : ಎರಡನೇ ವರ್ಷದ ಸಂಭ್ರಮದ ಬಿಎಸ್ ವೈ ಭೋಜನ ಕೂಟ ಮುಂದೂಡಿಕೆ!
ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ನಡೆಸಿದ ಸಂಶೋಧನಾ ಅಧ್ಯನದಲ್ಲಿ, ಜೆ & ಜೆ ನ ಲಸಿಕೆ ಕೋವಿಡ್ ಸೋಂಕಿ ನುಳಿದ ರೂಪಾಂತರಿಗಳ ವಿರುದ್ಧ ಹೊಂದಿರುವ ಪರಿಣಾಮಕಾರಿತ್ವಕ್ಕೆ ಹೋಲಿಸಿದರೇ, ಡೆಲ್ಟಾ ರೂಪಾಂತರಿಯ ವಿರುದ್ಧ ಸುಮಾರು ಐದು ಪಟ್ಟು ಕಡಿಮೆ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಎಂದು ಕಂಡುಬಂದಿದೆ.
ಶೇಕಡಾ 83 ರಷ್ಟು ಪ್ರಕರಣಗಳಿಳು ಅಮೆರಿಕಾದಲ್ಲಿ ಡೆಲ್ಟಾ ರೂಪಾಂತರಿ ಸೋಂಕಿನಿಂದಲೇ ದಾಖಲಾಗಿವೆ ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಮತ್ತು ಪ್ರಿವೆನ್ಷನ್ ನಿರ್ದೇಶಕ ರೋಚೆಲ್ ವಾಲೆನ್ಸ್ಕಿ ಸೆನೆಟ್ ವಿಚಾರಣೆಯಲ್ಲಿ ಹೇಳಿದ್ದಾರೆ.
ಇನ್ನು, ಜಿ ಆ್ಯಂಡ್ ಜೆ ಲಸಿಕೆಯ ಸಂಶೋಧಕರು ಈ ಹಿಂದೆ, ಕೋವಿಡ್ ಸೋಂಕಿನ ಡೆಲ್ಟಾ ರೂಪಾಂತರಿ ಸೋಂಕಿನ ವಿರುದ್ಧ ಪರಿಣಾಮಕಾರಿತ್ವವನ್ನು ಹೊಂದಿದೆ. ಎರಡನೇ ಡೋಸ್ ಅಗತ್ಯವೂ ಕೂಡ ಇಲ್ಲ ಎಂದಿದ್ದರು.
ಇದನ್ನೂ ಓದಿ : ಬಿಎಸ್ ವೈರನ್ನು ಬದಲಾವಣೆ ಮಾಡಿದರೆ ಬಿಜೆಪಿಗೆ ಉಳಿಗಾಲವಿಲ್ಲ: ಕೊಟ್ಟೂರು ಶ್ರೀ