Advertisement

ಬಿಹಾರ; ಎನ್ ಡಿಎ ತೊರೆದು ಆರ್ ಜೆಡಿ ಕೈಹಿಡಿದ ಜಿತನ್ ರಾಮ್ ಮಾಂಝಿ

01:58 PM Feb 28, 2018 | Sharanya Alva |

ಬಿಹಾರ:ಬಿಹಾರ ಮಾಜಿ ಮುಖ್ಯಮಂತ್ರಿ, ಹಿಂದುಸ್ತಾನಿ ಅವಾಮ್ ಮೋರ್ಚಾ(ಜಾತ್ಯತೀತ) ಮುಖಂಡ ಜಿತನ್ ರಾಮ್ ಮಾಂಝಿ ಅವರು ಎನ್ ಡಿಎಯನ್ನು ತೊರೆದು, ರಾಷ್ಟ್ರೀಯ ಜನತಾದಳ(ಆರ್ ಜೆಡಿ)ಕ್ಕೆ ಸೇರ್ಪಡೆಯಾಗುತ್ತಿರುವುದಾಗಿ ಬುಧವಾರ ತಿಳಿಸಿದ್ದಾರೆ.

Advertisement

ಬಿಹಾರ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಇಂದು ಬೆಳಗ್ಗೆ ಮಾಂಝಿ ಅವರ ನಿವಾಸಕ್ಕೆ ತೆರಳಿ ದೀರ್ಘಕಾಲ ಚರ್ಚೆ ನಡೆಸಿದ್ದರು, ಮಾತುಕತೆ ಬಳಿಕ ಮಾಂಝಿ ಎನ್ ಡಿಎನಿಂದ ಹೊರಬಂದಿರುವುದಾಗಿ ಘೋಘಿಸಿದರು.

ಮಾಂಝಿ ಅವರು ಜೆಹಾನಾಬಾದ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಬಿಜೆಪಿ ಆಡಳಿತರೂಢ ಮೈತ್ರಿ ಪಕ್ಷವಾದ ಜೆಡಿಯು ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಜೆಡಿಯುನ ಅಭಿರಾಮ್ ಶರ್ಮಾ ಅಭ್ಯರ್ತಿಯಾಗಿ ಕಣಕ್ಕಿಳಿದಿದ್ದರು. ಈ ಬೆಳವಣಿಗೆಯಿಂದ ಮನನೊಂದ ಮಾಂಝಿ ಎನ್ ಡಿ ಎಯಿಂದ ಹೊರಬರುವ ನಿರ್ಧಾರ ಕೈಗೊಂಡಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next