ನವ ದೆಹಲಿ : ‘ಫುಲ್ ಪೈಸಾ ವಸೂಲ್ ಸೇಲ್’ ಹೆಸರಿನಲ್ಲಿ ದಿನಸಿ ವಸ್ತುಗಳ ಭರ್ಜರಿ ಮಾರಾಟವನ್ನು ರಿಲಯನ್ಸ್ ರಿಟೇಲ್ ಕಂಪನಿ ಶನಿವಾರ(ಆಗಸ್ಟ್ 14 ) ರಿಂದ ಬುಧವಾರ (ಆಗಸ್ಟ್ 18) ರ ತನಕ ನಡೆಸುತ್ತಿದೆ.
ಈ ವ್ಯಾಪಾರ ಮೇಳದಲ್ಲಿ ಗ್ರಾಹಕರಿಗೆ ಭಾರಿ ಉಳಿತಾಯದ ಅವಕಾಶಗಳನ್ನು ಗ್ರಾಹಕರಿಗೆ ಲಭ್ಯವಿದೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಇದನ್ನೂ ಓದಿ : ನೆಹರು ಬಗ್ಗೆ ನಿಮಗೇನು ಗೊತ್ತು ರವಿ, ಯಾರನ್ನೋ ಮೆಚ್ಚಿಸಲು ಹೇಳಿಕೆ ಕೊಡಬೇಡಿ: ವಿಶ್ವನಾಥ್
ಸಂಸ್ಥೆಯ ಇ–ಮಾರ್ಕೇಟ್ ಆದ ಜಿಯೊ ಮಾರ್ಟ್ ನಲ್ಲಿ ಈ ಮೇಳ ನಡೆಯುತ್ತಿದ್ದು, ಜಿಯೋ ಮಾರ್ಟ್ ಅಲ್ಲದೆ, ಸುಪರ್ ಸ್ಮಾರ್ಟ್ ಸ್ಟೋರ್ ಗಳಲ್ಲಿ, ರಿಲಯನ್ಸ್ ಫ್ರೆಷ್ ನಲ್ಲಿ, ಸ್ಮಾರ್ಟ್ ಪಾಯಿಂಟ್ ಗಳಲ್ಲಿ ಕೂಡ ಖರೀದಿಸಬಹುದಾಗಿದೆ ಎಂದು ಕೂಡ ಸಂಸ್ಥೆ ಮಾಹಿತಿ ನೀಡಿದೆ.
ಕನಿಷ್ಠ ಶೇಕಡಾ 33ರಷ್ಟು ರಿಯಾಯಿತಿಯಲ್ಲಿ ತಂಪು ಪಾನೀಯಗಳು, ತೂತ್‌ಪೇಸ್ಟ್ ಮತ್ತು ಸೋಪ್ ಹಾಗೂ ಶೇಕಡಾ 50 ರ ರಿಯಾಯಿತಿಯಲ್ಲಿ ಬಿಸ್ಕತ್, ಚಾಕೊಲೇಟ್ ಮತ್ತು ಶಾಂಪು ಸಿಗಲಿದೆ ಎಂದು ತಿಳಿಸಿದೆ.
ಇನ್ನು, ಜಿಯೊಮಾರ್ಟ್ ನ ಮೂಲಕ ಖರೀದಿ ಮಾಡುವವರಿಗೆ, ವಸ್ತುಗಳನ್ನು ಉಚಿತವಾಗಿ ಅವರ ಮನೆಗೆ ತಲುಪಿಸಲಾಗುತ್ತದೆ. ಕನಿಷ್ಠ ಮೊತ್ತದ ವಸ್ತುಗಳನ್ನು ಖರೀದಿಸಬೇಕು ಎಂದು ಷರತ್ತು ಇಲ್ಲ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಇದನ್ನೂ ಓದಿ : ತಾಲಿಬಾನ್ ಆಕ್ರಮಣ; ಅಫ್ಘಾನ್ ಆಕ್ರಂದನ…ಭಾರತಕ್ಕೆ ತೊಂದರೆ