Advertisement

ಇನ್ಮುಂದೆ ವಾಟ್ಸಾಪ್ ಮೂಲಕವೇ ಜಿಯೋ ರೀಚಾರ್ಜ್ ಮಾಡಿಕೊಳ್ಳಬಹುದು

01:50 PM Jun 10, 2021 | Team Udayavani |

ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಗೆ ಕಾರಣವಾದ ಜಿಯೋ ಇದೀಗ ತನ್ನ ಗ್ರಾಹಕರಿಗೆ ಮತ್ತೊಂದು ಹೊಸ ಸೌಲಭ್ಯ ಒದಗಿಸಿದೆ, ಅದುವೆ ವಾಟ್ಸಾಪ್ ಮೂಲಕ ರಿಚಾರ್ಜ್ ಮಾಡಿಕೊಳ್ಳುವುದು.

Advertisement

ಜಿಯೋ ಗ್ರಾಹಕರು ವಾಟ್ಸ್​ಪ್​ ಮೂಲಕ ರೀಚಾರ್ಜ್ ಮಾಡುವ ವಿನೂತನ ಅವಕಾಶ ದೊರೆತಿದೆ. ಅದರ ಜತೆಗೆ ಹಣ ಪಾವತಿ, ಅಹವಾಲುಗಳಿಗೆ ಉತ್ತರ, ದೂರು ನೀಡುವುದು ಹೀಗೆ ಕೆಲವು ಚಟುವಟಿಕೆಗಳನ್ನು ವಾಟ್ಸ್​ಆಯಪ್ ಮೂಲಕವೇ ಮಾಡಬಹುದಾಗಿದೆ.

ಇನ್ನು ಹೊಸ ಜಿಯೋ ಸಿಮ್​ ಖರೀದಿಸಲು, ಅಥವಾ ಪೋರ್ಟ್​ ಮಾಡಲು, ಜಿಯೋ ಸಿಮ್​ ಒಳಗೊಂಡಿರುವ ಸವಲತ್ತುಗಳನ್ನು ತಿಳಿಯಲು , ಜಿಯೋ ಫೈಬರ್​, ಜಿಯೋ ಮಾರ್ಟ್​ ಹೀಗೆ ನಾನಾ ಕೆಲಸವನ್ನು ಇದರ ಮೂಲಕವೇ ಮಾಡಬಹುದಾಗಿದೆ.

ಈ ಸೇವೆ ಪಡೆಯುವುದು ಹೇಗೆ ?

ಜಿಯೋ ಸಿಮ್​ ಬಳಕೆದಾರರು ವಾಟ್ಸ್​​ಆಯಪ್​ ಮೂಲಕ ಈ ಸೇವೆ ಪಡೆಯಲು ಮೊದಲು ವಾಟ್ಸ್​ಆಯಪ್​ ಮೂಲಕ 70007 70007 ಸಂಖ್ಯೆಯನ್ನು ಸೇವ್​ ಮಾಡಿ ಹಾಯ್​ ಎಂದು ಮೆಸೇಜ್​ ಮಾಡಬೇಕು. ಇಷ್ಟಾದ ಬಳಿಕ ವ್ಯಾಲೆಟ್​​, ಯುಪಿಐ, ಕ್ರೆಡಿಟ್​ ಮತ್ತು ಡೆಬಿಟ್​ ಕಾರ್ಡ್​​ ಮೂಲಕ ಪಾವತಿ ಆಯ್ಕೆಯನ್ನು ಪಡೆದುಕೊಳ್ಳಬಹುದಾಗಿದೆ. ಆ ಬಳಿಕ ರೀಚಾರ್ಜ್​​ ಸೇರಿದಂತೆ ಎಲ್ಲಾ ಸೇವೆಯನ್ನು ಪಡೆಯಬಹುದಾಗಿದೆ.

Advertisement

ಸದ್ಯ ಗ್ರಾಹಕರಿಗಾಗಿ ವಾಟ್ಸ್​​ಆಯಪ್​ ಮೂಲಕ 1)ಜಿಯೋ ರೀಚಾರ್ಜ್​, 2)ಹೊಸ ಸಿಮ್​ ಪಡೆಯುವುದು, 3)ಪೋರ್ಟ್​ ಮಡುವುದು, 4)ಜಿಯೋ ಫೈಬರ್, 5)ಜಿಯೋ ಸಿಮ್​ ನೆರವು, 6)ಅಂತರಾಷ್ಟ್ರೀಯ ರೋಮಿಂಗ್​, 7)ಜಿಯೋ ಮಾರ್ಟ್​ ಸೇವೆ ಪಡೆಯಬಹುದಾಗಿದೆ.

ಸದ್ಯ ಜಿಯೋ ಗ್ರಾಹಕರಿಗೆ ಈ ಸೇವೆ ಇಂಗ್ಲೀಷ್​​ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಈ ಸೇವೆ ಸಿಗುತ್ತಿದೆ. ಮುಂದಿನ ದಿನದಲ್ಲಿ ದೇಶಿ ಭಾಷೆಯಲ್ಲೂ ಬಳಸಬಹುದಾದ ಆಯ್ಕೆ ನೀಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next