Advertisement
ಕಳೆದ ವರ್ಷ 2ಜಿ ಮುಕ್ತ ಭಾರತ ನಿರ್ಮಾಣದ ನಿಟ್ಟಿನಲ್ಲಿ ಕಡಿಮೆ ದರದಲ್ಲಿ ಮೊಬೈಲ್ ನೀಡುವುದಾಗಿ ದೈತ್ಯ ಟೆಲಿಕಾಂ ಸಂಸ‍್ಥೆ ರಿಲಯನ್ಸ್ ಹೇಳಿಕೊಂಡಿತ್ತು. ಪ್ರಪಂಚವು 5ಜಿಗೆ ತೆರೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಭಾರತದಲ್ಲಿ 30 ಕೋಟಿ ಜನರು ಇಂದಿಗೂ 2ಜಿ ಬಳಸುತ್ತಿದ್ದಾರೆ. ಪ್ರಸ್ತುತ 5ಜಿ ಯುಗದಲ್ಲೂ ಕೆಲವೊಂದಿಷ್ಟು ವರ್ಗ ಹೈಸ್ಪೀಟ್ ಇಂಟರ್ ನೆಟ್ ಸೌಲಭ್ಯದಿಂದ ವಂಚಿತವಾಗಿದೆ. ಇವರನ್ನು ಗುರಿಯಾಗಿಸಿಕೊಂಡು ಅತೀ ಕಡಿಮೆ ದರದಲ್ಲಿ 4ಜಿ ಮೊಬೈಲ್ ಪರಿಚಯಿಸುತ್ತಿದ್ದೇವೆ ಎಂದು ರಿಲಯನ್ಸ್ ಜಿಯೋ ಸಂಸ್ಥೆಯ ನಿರ್ದೇಶಕ ಆಕಾಶ್ ಅಂಬಾನಿ ಹೇಳಿದ್ದಾರೆ.
Related Articles
Advertisement
ಇನ್ನು ಈಗಾಗಲೇ ಜಿಯೋ ಬಳಸುತ್ತಿರುವ ಗ್ರಾಹಕರಿಗೂ ಹೊಸ ಆಫರ್ ಘೋಷಿಸಲಾಗಿದೆ. ಕೇವಲ 749 ರೂ. ರಿಚಾರ್ಜ್ ಮಾಡಿಸಿ ಅನಿಯಮಿತ ವಾಯ್ಸ್ ಕರೆ, ಪ್ರತಿ ತಿಂಗಳಿಗೆ 2 ಜಿಬಿ ಹೈಸ್ಪೀಡ್ ಡಾಟಾ ಹಾಗೂ ಒಂದು ವರ್ಷದ ವರೆಗೆ ಯಾವುದೇ ರೀತಿ ರಿಚಾರ್ಜ್ ಮಾಡಿಸಬೇಕಿಲ್ಲ.
ಈ ಹೊಸ ಆಫರ್ ಗಳು ಬರುವ ಮಾರ್ಚ್ 1 ರಿಂದ ದೇಶ್ಯಾದ್ಯಂತ ರಿಲಯನ್ಸ್ ಹಾಗೂ ಜಿಯೋ ರಿಟೈಲರ್ ಗಳಲ್ಲಿ ದೊರೆಯಲಿದೆ.