Advertisement
ಭಾರತದ ನೆಚ್ಚಿನ ಸೆಲೆಬ್ರಿಟಿಗಳೊಡನೆ ನೇರ ವೀಡಿಯೋ ಕಾಲ್ ಸೇರಿದಂತೆ ಹಲವು ವಿಶಿಷ್ಟ ಸೇವೆಗಳನ್ನು ಈ ವೇದಿಕೆಯ ಮೂಲಕ ಒದಗಿಸಲಾಗುವುದು. ಈ ವೇದಿಕೆಯೊಡನೆ ಕೈಜೋಡಿಸಿರುವವರ ಪೈಕಿ ಮೊದಲಿಗರಾದ ಬಾಲಿವುಡ್‌ನ ಹೆಸರಾಂತ ನಟ ಅಮಿತಾಭ್ ಬಚ್ಚನ್ ಈ ಮೂಲಕ ತಮ್ಮ ಮುಂಬರುವ ಚಿತ್ರ ‘102 ನಾಟ್ ಔಟ್’ದ ಪ್ರಚಾರವನ್ನು ಅತ್ಯಂತ ವಿನೂತನ ರೀತಿಯಲ್ಲಿ ಕೈಗೊಳ್ಳಲಿದ್ದಾರೆ.
Related Articles
Advertisement
ಜಿಯೋಇಂಟರಾಕ್ಟ್‌ನ ಪ್ರಥಮ ಕೊಡುಗೆಯಾದ ‘ಲೈವ್ ವೀಡಿಯೋ ಕಾಲ್’ ಸೇವೆ ಬಳಸಿ ಜಿಯೋ ಗ್ರಾಹಕರು ಹಾಗೂ ಇತರ ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಮೆಚ್ಚಿನ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್‌ರಿಗೆ ನೇರ ವೀಡಿಯೋ ಕಾಲ್ ಮಾಡಬಹುದು. ಈ ಸೌಲಭ್ಯ ಮೇ 4ರಿಂದ ಆರಂಭವಾಗಿದೆ.
ಈ ಮೂಲಕ ಅಮಿತಾಭ್ ಹೊಸ ಚಿತ್ರ ‘102 ನಾಟ್ ಔಟ್’ ಬಗ್ಗೆ ಪ್ರಶ್ನೆಗಳನ್ನು ಕೇಳುವುದಷ್ಟೇ ಅಲ್ಲದೆ ಬುಕ್ ಮೈ ಶೋ ಸಹಯೋಗದಲ್ಲಿ ಸಿನಿಮಾ ಟಿಕೇಟುಗಳನ್ನೂ ಕಾಯ್ದಿರಿಸಬಹುದಾಗಿದೆ.
ಬಳಸುವುದು ಹೇಗೆ:
ಜಿಯೋ ಇಂಟರಾಕ್ಟ್ ಅನುಭವ ಪಡೆದುಕೊಳ್ಳಲು,
1. ಮೈಜಿಯೋ ಆಪ್ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಿ
2. ಆಪ್ ತೆರೆದು ಜಿಯೋಇಂಟರಾಕ್ಟ್ ಐಕನ್ ಮೇಲೆ ಕ್ಲಿಕ್ ಮಾಡಿ
3. ವೀಡಿಯೋ ಕಾಲ್ ಪ್ರಾರಂಭಿಸಿ ಅಮಿತಾಭ್ ಬಚ್ಚನ್‌ರೊಡನೆ ಮಾತನಾಡಿ
4. ‘ಶೇರ್’ ಆಯ್ಕೆ ಬಳಸಿ ವೀಡಿಯೋ ಕಾಲ್ ಅನುಭವವನ್ನು ಮನೆಯವರು ಹಾಗೂ ಮಿತ್ರರೊಡನೆ ಹಂಚಿಕೊಳ್ಳುವುದೂ ಸಾಧ್ಯವಿದೆ.
ವಿಶಿಷ್ಟ ಹಾಗೂ ವಿನೂತನವಾದ ಈ ಸೇವೆ ಶಕ್ತಿಶಾಲಿಯಾದ ಕೃತಕ ಬುದ್ಧಿಮತ್ತೆ (ಎಐ) ವೇದಿಕೆಯ ಮೂಲಕ ಬಳಕೆದಾರರ ಪ್ರಶ್ನೆಗಳನ್ನು ಕೇಳಿಸಿಕೊಂಡು ಅವರಿಗೆ ಸಮರ್ಪಕ ಉತ್ತರಗಳನ್ನು ನೀಡುತ್ತದೆ.
ಅಷ್ಟೇ ಅಲ್ಲದೆ, ಇದರಲ್ಲಿರುವ ಸ್ವಯಂ ಕಲಿಕೆಯ (ಆಟೋ ಲರ್ನಿಂಗ್) ವ್ಯವಸ್ಥೆ ತಾನು ನೀಡುವ ಉತ್ತರಗಳ ನಿಖರತೆಯನ್ನು ಉತ್ತಮಪಡಿಸಿಕೊಳ್ಳಲು ನೆರವಾಗಲಿದೆ. ಜಿಯೋನ ಸದೃಢ ಮೊಬೈಲ್ ವೀಡಿಯೋ ಜಾಲ ಹಾಗೂ 186 ಮಿಲಿಯನ್‌ಗೂ ಹೆಚ್ಚಿನ ಗ್ರಾಹಕ ಬಳಗವನ್ನು ಕೃತಕ ಬುದ್ಧಿಮತ್ತೆ (ಎಐ) ಹಾಗೂ ಸ್ವಯಂಕಲಿಕೆಯಂತಹ (ಮಶೀನ್ ಲರ್ನಿಂಗ್) ಹೊಸ ತಂತ್ರಜ್ಞಾನಗಳೊಡನೆ ಪರಿಣಾಮಕಾರಿಯಾಗಿ ಬಳಸುವ ಮೂಲಕ ಜಿಯೋ ಇಂಟರಾಕ್ಟ್ ಉದ್ದಿಮೆಗಳಿಗಾಗಿ ಬ್ರಾಂಡ್ ಎಂಗೇಜ್‌ಮೆಂಟ್‌ನ ವಿಶಿಷ್ಟ ಮಾರ್ಗವೊಂದನ್ನು ಒದಗಿಸಿದೆ.
VCBaaS (ವೀಡಿಯೋ ಕಾಲ್ ಬಾಟ್ ಆಸ್ ಅ ಸರ್ವಿಸ್) ಎಂದು ಗುರುತಿಸಲಾಗಿರುವ ಜಿಯೋಇಂಟರಾಕ್ಟ್ ವೇದಿಕೆಯು ಕೃತಕ ಬುದ್ಧಿಮತ್ತೆ ಹಾಗೂ ವೀಡಿಯೋ ಕಾಲ್ ತಂತ್ರಜ್ಞಾನಗಳನ್ನು ಎಲ್ಲರಿಗೂ ಸರಳವಾಗಿ ತಲುಪಿಸುವ ಮೂಲಕ ಪರಿಣಾಮಕಾರಿ ಬ್ರಾಂಡ್ ಎಂಗೇಜ್‌ಮೆಂಟ್ ಚಟುವಟಿಕೆಗಳನ್ನು ಸಾಧ್ಯವಾಗಿಸಲಿದೆ. ಉದ್ದಿಮೆಗಳು ಹಾಗೂ ಗ್ರಾಹಕರ ನಡುವಿನ ಸಂವಹನದಲ್ಲಿ (B2C) ಈ ತಂತ್ರಜ್ಞಾನ ದೊಡ್ಡಪ್ರಮಾಣದಲ್ಲಿ ಪ್ರಯೋಜನಕ್ಕೆ ಬರುವ ನಿರೀಕ್ಷೆಯಿದೆ. ಈ ವೇದಿಕೆಯನ್ನು ಬಳಸಿ ವರ್ಚುಯಲ್ ಶೋರೂಮ್, ಉತ್ಪನ್ನಗಳ ಪ್ರಾತ್ಯಕ್ಷಿಕೆ, ಇ ಕಾಮರ್ಸ್ ಆರ್ಡರಿಂಗ್ ಕಾರ್ಟ್‌ನಂತಹ ಅನ್ವಯಗಳನ್ನು ರೂಪಿಸುವ ಹೊಸ ಅವಕಾಶವೂ ತಂತ್ರಜ್ಞರಿಗೆ ದೊರಕಲಿದೆ.