Advertisement

ಹೊಸ ಪ್ಲಾನ್ ಲಾಂಚ್ ಮಾಡಿದ ಜಿಯೋ: ಡಿಸ್ನಿ + ಹಾಟ್‌ಸ್ಟಾರ್ ಒಂದು ವರ್ಷ ಉಚಿತ

02:58 PM Jan 06, 2022 | Team Udayavani |

ಬೆಂಗಳೂರು: ಮೊಬೈಲ್‍ ನೆಟ್‍ ವರ್ಕ್ ಕಂಪೆನಿ ಜಿಯೋ ತನ್ನ ಬಳಕೆದಾರರಿಗೆ ಹೊಸದೊಂದು ರೀಚಾರ್ಜ್ ಪ್ಲಾನ್ ಅನ್ನು ಲಾಂಚ್ ಮಾಡಿದ್ದು, ಇದರಲ್ಲಿ ಗ್ರಾಹಕರಿಗೆ ಒಂದು ವರ್ಷದ ಡಿಸ್ನಿ+ಹಾಟ್‍ ಸ್ಟಾರ್ ಚಂದಾದಾರಿಕೆ ಉಚಿತವಾಗಿ ದೊರಕಲಿದೆ.

Advertisement

ಜಿಯೋ ಲಾಂಚ್ ಮಾಡಿರುವ ಹೊಸ ರೂ. Rs 499 ತಿಂಗಳ ರೀಚಾರ್ಜ್ ಪ್ಲಾನ್ ಗ್ರಾಹಕರಿಗೆ ಉತ್ತಮ ಆಫರ್ ಅನ್ನು ನೀಡಲಿದೆ. ಒಂದು ತಿಂಗಳ ಪ್ಲಾನ್‍ನೊಂದಿಗೆ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ವಾರ್ಷಿಕ ಚಂದಾದಾರಿಕೆ ಉಚಿತವಾಗಿ ಸಿಗಲಿದೆ.

ಈ ಪ್ಲಾನ್‌ ನಲ್ಲಿ ಜಿಯೋ ಗ್ರಾಹಕರಿಗೆ ಪ್ರತಿ ನಿತ್ಯ ಅತೀ ವೇಗದ 2 ಜಿಬಿ ಡೇಟಾ ದೊರೆಯಲಿದ್ದು, ಅನಿಮಿಯತವಾಗಿ ವಾಯ್ಸ್ ಕರೆಗಳನ್ನು ಮಾಡಬಹುದಾಗಿದೆ. ಇದಲ್ಲದೆ ಪ್ರತಿ ನಿತ್ಯ 100 ಉಚಿತ ಮೇಸೆಜ್ ಗಳನ್ನು ಕಳುಹಿಸಬಹುದಾಗಿದೆ.  ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ವಾರ್ಷಿಕ ಚಂದದಾರಿಕೆ (ಜೊತೆಯಲ್ಲಿ ಎಲ್ಲಾ ಜಿಯೋ ಆಪ್‌ ಗಳನ್ನು ಉಚಿತವಾಗಿ ಬಳಸಬಹುದು. ಇದಲ್ಲದೆ ಹೊಸದಾಗಿ ಜಿಯೋ ಸಿಮ್ ಖರೀದಿಸುವವರು ಈ ಪ್ಲಾನ್ ಅನ್ನು ರೀಚಾರ್ಜ್ ಮಾಡಿಸಿಕೊಂಡಲ್ಲಿ ಜಿಯೋ ಪ್ರೈಮ್ ಗಾಗಿ ನೀಡಬೇಕಾಗಿದ್ದ 99 ರೂಗಳನ್ನು ಪಾವತಿಸುವ ಅಗತ್ಯವಿಲ್ಲ. ಈ ರೀಚಾರ್ಜ್ ನೊಂದಿಗೆ ಹೊಸ ಬಳಕೆದಾರರಿಗೆ ಜಿಯೋ ಪ್ರೈಮ್ ಸದಸ್ಯತ್ವ ಉಚಿತವಾಗಿ ದೊರೆಯಲಿದೆ. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಇದನ್ನೂ ಓದಿ:ಭಾರೀ ಮೊತ್ತಕ್ಕೆ ಅಮೇಜಾನ್ ಪ್ರೈಮ್ ಗೆ ಮಾರಾಟವಾದ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’

ಡಿಸ್ನಿ+ ಹಾಟ್ ಸ್ಟಾರ್ ಉತ್ತಮ ಓಟಿಟಿ ಆಗಿದ್ದು  ಕನ್ನಡ, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳ ಉತ್ತಮ ಚಲನಚಿತ್ರಗಳು ಲಭ್ಯವಿದೆ. ಅದರಲ್ಲೂ ಕನ್ನಡದ ಹಲವು ಹಳೆಯ ಚಲನಚಿತ್ರಗಳು, ಮಲಯಾಳಂ ನ ಅತ್ಯುತ್ತಮ ಚಿತ್ರಗಳ ಸಂಗ್ರಹ ಈ ಓಟಿಟಿ ಯಲ್ಲಿ ಲಭ್ಯವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next