Advertisement

2021ರ ದ್ವಿತೀಯಾರ್ಧದಲ್ಲಿ 5ಜಿ ಸೇವೆ ಭಾರತದಲ್ಲೂ ಲಭ್ಯ: ಮುಕೇಶ್ ಅಂಬಾನಿ

06:33 PM Dec 08, 2020 | Nagendra Trasi |

ನವದೆಹಲಿ: ಟೆಲಿಕಾಂ ಕ್ಷೇತ್ರದಲ್ಲಿ ಭರ್ಜರಿ ಸದ್ದು ಮಾಡುತ್ತಿರುವ ರಿಲಯನ್ಸ್ ಇದೀಗ ಮತ್ತೊಂದು ಸಿಹಿ ಸುದ್ದಿ ನೀಡಿದ್ದು, 2021ರ ದ್ವಿತೀಯಾರ್ಧದಲ್ಲಿ 5ಜಿ ತಂತ್ರಜ್ಞಾನವನ್ನು ಭಾರತದಲ್ಲಿ ಬಿಡುಗಡೆ ಮಾಡುವ ಬಗ್ಗೆ ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಮಂಗಳವಾರ(ಡಿಸೆಂಬರ್ 08, 2020) ಸುಳಿವನ್ನು ಬಿಟ್ಟುಕೊಟ್ಟಿರುವುದಾಗಿ ವರದಿ ತಿಳಿಸಿದೆ.

Advertisement

ಅತ್ಯಧಿಕ ವೇಗದ 5ಜಿ ತಂತ್ರಜ್ಞಾನ ಸೇವೆ ಅತ್ಯಗತ್ಯವಾಗಿದ್ದು, ಅದು ಎಲ್ಲೆಡೆಯೂ ಲಭ್ಯವಾಗಲಿದೆ. ಇದಕ್ಕಾಗಿ ಶೀಘ್ರ ಕಾರ್ಯ ನಡೆಯುತ್ತಿರುವುದಾಗಿ ಅಂಬಾನಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಅಂಬಾನಿ ಪಾಲುಬಂಡವಾಳದ ಜಿಯೋ ಟೆಲಿಕಾಂ ಸಂಸ್ಥೆ ಉಚಿತ ವಾಯ್ಸ್ ಕರೆ ಮತ್ತು ಕಡಿಮೆ ದರದ ಡಾಟಾ ನೀಡುವ ಮೂಲಕ ಕೇವಲ ನಾಲ್ಕು ವರ್ಷಗಳಲ್ಲಿಯೇ ನಂಬರ್ ವನ್ ಸ್ಥಾನ ಪಡೆದುಕೊಂಡಿದೆ. ಅಷ್ಟೇ ಅಲ್ಲ ಭಾರತದಲ್ಲಿ ಹಾರ್ಡ್ ವೇರ್ ಉತ್ಪಾದನೆಗೂ ಮುಂದಾಗಿದ್ದು, ಭಾರತ ಇಂತಹ ವಸ್ತುಗಳ ಉತ್ಪಾದನೆಯಲ್ಲಿಯೂ ಹಿಂದುಳಿಯಬಾರದು ಎಂದು ತಿಳಿಸಿದೆ.

5ಜಿ ತಂತ್ರಜ್ಞಾನ 5ನೇ : ಜನರೇಷನ್ ನ ಮೊಬೈಲ್ ನೆಟ್ವರ್ಕ್ ಪ್ರತಿಯೊಬ್ಬರನ್ನು ವರ್ಚುವಲಿ ಸಂಪರ್ಕಿಸುವ ಸಾಧನವಾಗಲಿದೆ. ಇದರೊಂದಿಗೆ ಭಾರತ ಜಗತ್ತಿನಲ್ಲಿಯೇ ಡಿಜಿಟಲ್ ಆಗಿ ಸಂಪರ್ಕಿಸುವ ಪ್ರಮುಖ ದೇಶಗಳಲ್ಲಿ ಒಂದಾಗಲಿದೆ ಎಂದು ಅಂಬಾನಿ ತಿಳಿಸಿದ್ದಾರೆ. ಅಕ್ಟೋಬರ್ ನಲ್ಲಿ  ಜಿಯೋ, ಅಮೆರಿಕ ಮೂಲದ ಕ್ವಾಲಂಕಾಂ ಐಎನ್ ಸಿ ಜೊತೆ ಸೇರಿ 5ಜಿಗೆ ಬೇಕಾದ ತಂತ್ರಜ್ಞಾನ ಅಭಿವೃದ್ದಿಪಡಿಸುವುದಾಗಿ ತಿಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next