Advertisement

ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಜಿನ್ನಾ ಭಾವಚಿತ್ರ: ವಿವಾದ

05:47 PM May 01, 2018 | Team Udayavani |

ಆಲೀಗಢ, ಉತ್ತರ ಪ್ರದೇಶ : ಆಲೀಗಢ ಮುಸ್ವಿ ವಿಶ್ವವಿದ್ಯಾಲಯದ ಆವರಣದೊಳಗೆ ಆರ್‌ಎಸ್‌ಎಸ್‌ ಶಾಖೆಯನ್ನು ನಡೆಸುವ ಬಗ್ಗೆ ಅನುಮತಿ ಕೋರಲಾದ ಕೆಲವೇ ದಿನಗಳ ಬಳಿಕ ವಿಶ್ವವಿದ್ಯಾಲಯದ ಕಟ್ಟಡದೊಳಗೆ ಮುಹಮ್ಮದ್‌ ಅಲಿ ಜಿನ್ನಾ ಅವರ ಭಾವಚಿತ್ರವನ್ನು ಇನ್ನೂ ಏಕೆ ಇಡಲಾಗಿದೆ ಎಂಬ ಬಗ್ಗೆ ಉತ್ತರಿಸುವಂತೆ ಬಿಜೆಪಿ ಸಂಸದರೊಬ್ಬರು ವಿವಿ ಆಡಳಿತೆಯನ್ನು ಕೇಳಿರುವುದು ವಿವಾದಕ್ಕೆ ಕಾರಣವಾಗಿದೆ. 

Advertisement

ವೈಸ್‌ ಚಾನ್ಸಲರ್‌ ತಾರಿಕ್‌ ಮನ್ಸೂರ್‌ ಅವರಿಗೆ ಬರೆದಿರುವ ಪತ್ರದಲ್ಲಿ  ಆಲೀಗಢ ಸಂಸದ ಸತೀಶ್‌ ಗೌತಮ್‌ ಅವರು ಎಎಂಯು ವಿದ್ಯಾರ್ಥಿ ಸಂಘದ ಕಾರ್ಯಾಲಯದ ಗೋಡೆಯ ಮೇಲೆ ಪಾಕ್‌ ಸ್ಥಾಪಕ ಜಿನ್ನಾ ಅವರ ಭಾವಚಿತ್ರವನ್ನು ತೂಗು ಹಾಕಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next