Advertisement
ಸೋಮವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯನ್ಯಾಯಮೂರ್ತಿ ಎಚ್.ಜಿ ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್ ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಕ್ರೀಡಾಂಗಣ ಬಳಕೆ ಬಗ್ಗೆ ಅಥ್ಲೀಟ್‌ಗಳು ಹಾಗೂ ಸರ್ಕಾರ ಮಾತುಕತೆಯ ಮೂಲಕ ಬಗೆ ಹರಿಸಿಕೊಳ್ಳಲು ಪ್ರಯತ್ನಿಸಿ ಎಂದು ಸಲಹೆ ನೀಡಿತು. ಅಲ್ಲದೆ ಮುಂದಿನ ವಿಚಾರಣೆಯನ್ನು ನ್ಯಾಯಪೀಠ ಜನವರಿ 5ಕ್ಕೆ ಮುಂದೂಡಿತು.
Related Articles
Advertisement
1 ಕೋಟಿ ಜನಕ್ಕೆ 1 ಕ್ರೀಡಾಂಗಣ ಸಾಕೇ?: ಹೈ ಪ್ರಶ್ನೆ: ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ವಾದಿಸಿ, ಅಥ್ಲೀಟ್‌ಗಳ ಬಳಕೆಗೆ ಪ್ರತ್ಯೇಕ ಟ್ರ್ಯಾಕ್ ನಿರ್ಮಿಸಲಾಗಿದ್ದು ಅವಕಾಶ ಮಾಡಿಕೊಡಲಾಗುತ್ತಿದೆ. ನಗರದಲ್ಲಿ ಒಂದೇ ದೊಡ್ಡ ಕ್ರಿಡಾಂಗಣವಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಗರದಲ್ಲಿ 1 ಕೋಟಿಗೂ ಅಧಿಕ ಜನಸಂಖ್ಯೆಯಿದೆ. ಒಂದು ಕ್ರೀಡಾಂಗಣ ಸಾಕಾಗಲಿದೆಯೇ ಎಂದು ರಾಜ್ಯಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದ ನ್ಯಾಯಪೀಠ, ಜನರ ಬಳಕೆಗೆ ಅನುಕೂಲವಾಗುವಂತೆ ಕನಿಷ್ಟ 10 ಕ್ರೀಡಾಂಗಳನ್ನು ನಿರ್ಮಾಣ ಮಾಡುವ ಬಗ್ಗೆ ಗಮನಹರಿಸಿ. ಇದರಿಂದ ಜನರ ಆರೋಗ್ಯ ವೃದ್ಧಿಸಿ ಆಸ್ಪತ್ರೆ ವೆಚ್ಚವೂ ಕಡಿಮೆಯಾಗಲಿದೆ ಎಂದು ಮೌಖೀಕ ಸಲಹೆ ನೀಡಿತು.