Advertisement

ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ

03:06 PM May 29, 2022 | Team Udayavani |

ಬಾಗೇಪಲ್ಲಿ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳಕಡೆ ಕಾರ್ಯಕ್ರಮ 11 ಗಂಟೆಗೆ ಪ್ರಾರಂಭವಾಗಬೇಕಾಗಿದ್ದು, ಮದ್ಯಾಹ್ನ ತಡವಾಗಿ ಪ್ರಾರಂಭವಾಯಿತು. ತಹಶೀಲ್ದಾರ್‌ ವೈ. ರವಿ ರಾತ್ರಿವರೆಗೂ ಅಹವಾಲು ಸ್ವೀಕರಿಸಿ ಜನರ ಸಮಸ್ಯೆಗಳನ್ನು ಆಲಿಸಿದರು.

Advertisement

ತಾಲೂಕಿನ ಗೂಳೂರು ಹೋಬಳಿಯ ಕೊತ್ತಕೋಟೆ ಗ್ರಾಮದಲ್ಲಿ ತಾಲೂಕು ಆಡಳಿತದಿಂದ ಅಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವನ್ನು ಶಾಸಕ ಎಸ್‌.ಎನ್‌. ಸುಬ್ಟಾರೆಡ್ಡಿ ಉದ್ಘಾಟಿಸಿ ಮಾತನಾಡಿದರು.

ಸ್ಥಳದಲ್ಲೇ ಸಾರ್ವಜನಿಕರ ಸಮಸ್ಯೆಯನ್ನು ಇತ್ಯರ್ಥಗೊಳಿಸುವ ಉದ್ದೇಶಕ್ಕಾಗಿ ಸರ್ಕಾರ ಈ ಕಾರ್ಯಕ್ರಮ ಅಯೋಜಿಸಿದೆ. ಹಳ್ಳಿಯ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡವೇ ನಿಮ್ಮ ಗ್ರಾಮ ಬಂದಿದ್ದಾರೆ, ಎಲ್ಲಾ ರೀತಿಯಸಮಸ್ಯೆಗಳ ಅರ್ಜಿಗಳನ್ನು ಸಭೆಯಲ್ಲಿ ಸಲ್ಲಿಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಶಾಸಕರು ಮನವಿ ಮಾಡಿದರು.

ಕೊತ್ತಕೋಟೆ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮಧ್ಯ ಮಾರಾಟದ ನಿಯಂತ್ರಣ, ಧರಖಾಸ್ತು ಜಮೀನು ಸಮಸ್ಯೆ, ಗ್ರಾಮೀಣ ಭಾಗದ ಹಳ್ಳಿಗಳ ರಸ್ತೆ ಅಭಿವೃದ್ಧಿ, ಕುಡಿವ ನೀರಿನ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆ ಸೇರಿದಂತೆ ಅಧಿಕಾರಿಗಳಿಗೆ 67 ಅರ್ಜಿಗಳು ಸಲ್ಲಿಕೆಯಾದವು.

ಸಂದ್ಯಾ ಸುರಕ್ಷಾ ಸೇರಿದಂತೆ ವಿವಿಧ ಪಿಂಚಣಿ ಯೋಜನೆಯ 375 ಜನ ಪಲಾನುಭವಿಗಳಿಗೆ ಆದೇಶ ಪತ್ರ, 8 ಪಾವತಿ ಖಾತೆ, 5 ಪಡಿತರ ಚೀಟಿಗಳನ್ನು ವಿತರಣೆ ಮಾಡಲಾಯಿತು.

Advertisement

ತಾಪಂ ಇಒ ಮಂಜುನಾಥಸ್ವಾಮಿ, ತಾಲೂಕು ವೈದ್ಯಾಧಿಕಾರಿ ಡಾ.ಸಿ.ಎನ್‌.ಸತ್ಯ ನಾರಾಯಣರೆಡ್ಡಿ, ಎಇಇ ರಾಮಲಿಂಗಾರೆಡ್ಡಿ, ಗ್ರೇಡ್‌ 2 ತಹಶೀಲ್ದಾರ್‌ ಸುಬ್ರಮಣಿ, ಕಂದಾಯ ವೃತ್ತ ನಿರೀಕ್ಷಕರಾದ ರಮೇಶ್‌, ವೇಣು ಇತರರಿದ್ದರು.

ಮದ್ಯವ್ಯಸನಿಗಳ ಕಾಟ :  ಸಾರ್ವಜನಿಕರು ಧ್ವನಿವರ್ಧಕದ ಮೂಲಕ ಸಮಸ್ಯೆಗಳನ್ನು ಹೇಳಿ ತಹಶೀಲ್ದಾರ್‌ ಮತ್ತು ಶಾಸಕರ ಗಮನ ಸೆಳೆಯುತ್ತಿದ್ದ ವೇಳೆ ಕೆಲವು ಕಡುಕರು ಅಮಲಿನಲ್ಲಿ ತಮಗೆ ಇಷ್ಟ ಬಂದಂತೆ ಸಮಸ್ಯೆಗಳ ಬಗ್ಗೆ ತೂರಾಡುತ್ತಲೇ ಹೇಳಿಕೊಂಡ ಪ್ರಸಂಗ ನಡೆಯಿತು. ತಹಶೀಲ್ದಾರ್‌ ಆದೇಶದಂತೆ ತಕ್ಷಣವೇ ಪೊಲೀಸರು ಕುಡುಕರನ್ನು ಸಭೆಯಿಂದ ಹೊರ ಕಳುಹಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next