Advertisement

ಜನರ ವಿಶ್ವಾಸ ಗಳಿಸಿ ಕಾರ್ಯನಿರ್ವಹಿಸಿ: ಸಿಇಒ

06:15 PM Oct 03, 2021 | Team Udayavani |

ತುಮಕೂರು: ಗ್ರಾಮೀಣ ಮಟ್ಟದಲ್ಲಿ ಜನರ ವಿಶ್ವಾಸ ಗಳಿಸಿ ಕಾರ್ಯನಿರ್ವಹಿಸಿದಾಗ ಮಾತ್ರ ಸರ್ಕಾರದ ನಗದು ರಹಿತ ವ್ಯವಹಾರ ಯೋಜನೆ ಯಶಸ್ವಿಯಾಗುತ್ತದೆ ಎಂದು ಜಿಪಂ ಸಿಇಒ ಡಾ. ಕೆ. ವಿದ್ಯಾಕುಮಾರಿ ಬಿ.ಸಿ.ಸಖೀಯರಿಗೆ ಹೇಳಿದರು.

Advertisement

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಜಿಪಂ ಸಭಾಂಗಣದಲ್ಲಿ ಎನ್‌ಆರ್‌ಎಲ್‌ಎಂ ಯೋಜನೆಯಡಿ “ಒಂದು ಗ್ರಾಪಂ-ಒಂದು ಬಿ.ಸಿ. ಸಖೀ’ ಎಂಬ ಪರಿಕಲ್ಪನೆಯಿಂದ ಆಯಾ ಗ್ರಾಪಂ  ಮಟ್ಟದ ಸಂಜೀವಿನಿ ಸಂಘಗಳ ಸದಸ್ಯ ಮಹಿಳೆಯೊಬ್ಬರನ್ನು ಆಯ್ಕೆ ಮಾಡಿ, ತರಬೇತಿ ಹೊಂದಿದ ಬಿ.ಸಿ. ಸಖೀಯರಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ, ಸಮಾಜದ ಕಟ್ಟ ಕಡೆಯ ಮಹಿಳೆಯ ಮನೆ ಬಾಗಿಲಿಗೆ ಸರ್ಕಾರದ ವಿವಿಧ ಸೌಲಭ್ಯ ಹಾಗೂ ಬ್ಯಾಂಕಿನ ಹಲವಾರು ಸೌಲಭ್ಯ ಆನ್‌ಲೈನ್‌ ಮೂಲಕ ತಲುಪಿಸುವ ನಿಟ್ಟಿನಲ್ಲಿ ಬಿ.ಸಿ. ಸಖೀಯರನ್ನು ಆಯ್ಕೆ ಮಾಡಲಾಗಿದ್ದು, ತರಬೇತಿ ಪಡೆದ ಬಿ.ಸಿ. ಸಖೀಯರು ಪ್ರಾಮಾಣಿಕವಾಗಿ ಸೇವೆ ಒದಗಿಸಿದಲ್ಲಿ ತಾವೂ ಸಹ ಆರ್ಥಿಕವಾಗಿ ಸಬಲರಾಗಬಹುದು ಎಂದರು.

ಇದನ್ನೂ ಓದಿ:-ಶಾರುಖ್ ಖಾನ್ ಪುತ್ರನ ಮಾದಕ ನಂಟು

ಒಂದು ಗ್ರಾಮ ಪಂಚಾಯತಿ-ಒಂದು ಬಿ.ಸಿ. ಸಖೀ’ ಕಾರ್ಯಕ್ರಮ ಯಶಸ್ವಿಯಾದರೆ ಗ್ರಾಮೀಣ ಪ್ರದೇಶದವರು ನಗರ ಪ್ರದೇಶ ದವರಂತೆಯೇ ವ್ಯವಹರಿಸಬಹುದು. ಕೆಲವು ಗ್ರಾಮೀಣ ಮಹಿಳೆಯರಿಗೆ ಬ್ಯಾಂಕಿನ ವ್ಯವಹಾರದ ಜ್ಞಾನ ಇರುವುದಿಲ್ಲ. ಇಂತಹ ಮಹಿಳೆಯರು, ಬ್ಯಾಂಕಿಗೆ ಭೇಟಿ ನೀಡಲಾಗದ ಅಶಕ್ತ ವಯೋವೃದ್ಧರಿಗೆ ಈ ಸೇವೆಯನ್ನು ಒದಗಿಸಲು ಬಿ.ಸಿ. ಸಖೀಯರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಜಿಪಂ ಯೋಜನಾ ನಿರ್ದೇಶಕ ನರಸಿಂಹಮೂರ್ತಿ ಮಾತನಾಡಿ, ಆರ್‌. ಸೆಟಿ ಸಂಸ್ಥೆ ಮೂಲಕ ಬಿ.ಸಿ. ಸಖೀಯರಿಗೆ 5 ದಿನಗಳ ತರಬೇತಿ ನೀಡಲಾಗಿದ್ದು, ಬಿ.ಸಿ. ಸಖೀಯರು ಸ್ವ ಸಹಾಯ ಗುಂಪುಗಳಿಗೆ ಸರ್ಕಾರದಿಂದ ದೊರೆಯುವ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಸಹಕರಿಸಬೇಕು. ಕನಸು ಕಾಣುವುದು ಸುಲಭ. ಆದರೆ, ಕನಸು ನನಸಾಗಲು ಪರಿಶ್ರಮ ಇರಬೇಕು.

Advertisement

ಯಾರಿಗೂ ಸುಲಭವಾಗಿ ಯಶಸ್ಸು ಸಿಗುವುದಿಲ್ಲ. ಪರಿಶ್ರಮ ಪಟ್ಟರೆ ಮಾತ್ರ ಅದಕ್ಕೆ ತಕ್ಕ ಪ್ರತಿಫ‌ಲ ದೊರೆಯಲಿದೆ ಎಂದರು. ಲೀಡ್‌ ಬ್ಯಾಂಕ್‌ ಮ್ಯಾನೇಜರ್‌, ಆರ್‌.ಸೆಟಿ ಸಂಸ್ಥೆ ನಿರ್ದೇಶಕ, ಅಶೋಕ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next