ಬನ್ಸ್ ಗಾಂವ್(ಉತ್ತರ ಪ್ರದೇಶ) : ಕಾಂಗ್ರೆಸ್, ಸಮಾಜವಾದಿ ಪಕ್ಷಗಳಿಗೆ ಗಡಿಯಾಚೆಗಿನ ಜಿಹಾದಿಗಳು ಬೆಂಬಲಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಆರೋಪಿಸಿದ್ದಾರೆ.
‘ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, ಗಡಿಯಾಚೆಯ ಜಿಹಾದಿಗಳು ಎಸ್‌ಪಿ, ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದ್ದಾರೆ.ಅಲ್ಲಿ ಮೈತ್ರಿಕೂಟದ ಗೆಲುವಿಗಾಗಿ ಪ್ರಾರ್ಥನೆ ನಡೆಸುವ ಮೂಲಕ ವೋಟ್ ಜಿಹಾದ್ ನಡೆಸಲಾಗುತ್ತಿದೆ’ ಎಂದರು.
ನಾನು ಧರ್ಮ ಆಧಾರಿತ ಮೀಸಲಾತಿಯನ್ನು ವಿರೋಧಿಸುತ್ತಿರುವ ಕಾರಣ ಇಂಡಿಯಾ ಮೈತ್ರಿಕೂಟದ ಜಮಾತ್ ನನ್ನನ್ನು ನಿಂದಿಸುತ್ತಿದೆ ಎಂದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ ‘ ಯೋಗಿ ಅವರು ಮಾಫಿಯಾಗಳಿಗೆ ಪಾಠ ಕಲಿಸುವಲ್ಲಿ ನುರಿತವರು ಎಂದರು.
ಕಾಂಗ್ರೆಸ್ ಪಕ್ಷ ದೇಶ ಬ್ರಹ್ಮೋಸ್ ಕ್ಷಿಪಣಿ ಖರೀದಿಸಲು ಅಡ್ಡಗಾಲು ಹಾಕುವ ಮೂಲಕ ರಕ್ಷಣ ವಲಯದ ಪ್ರಗತಿಗೆ ಮಾರಕವಾಗಿತ್ತು ಎಂದು ಪ್ರಧಾನಿ ಮೋದಿ ಆರೋಪಿಸಿದರು.
2024 ಜೂನ್ 04 ಭಾರತದ ಭವಿಷ್ಯವನ್ನು ನಿರ್ಧರಿಸುವ ದಿನವಾಗಲಿದೆ. 140 ಕೋಟಿ ಭಾರತೀಯರ ಕನಸಾಗಿರುವ ಅಮೃತ ಕಾಲದತ್ತ ಹೋಗುವ ಸಮಯ ಎಂದರು.