Advertisement

ಪ್ರಧಾನಿ ನರೇಂದ್ರ ಮೋದಿ ‘ನಮಕ್‌ ಹರಾಮ್‌ ‘ಎಂದ ಜಿಗ್ನೇಶ್‌ ಮೇವಾನಿ

03:35 PM Oct 26, 2018 | udayavani editorial |

ಹೊಸದಿಲ್ಲಿ : ಗುಜರಾತ್‌ ನಲ್ಲಿ ಈಚೆಗೆ ಹೊರ ರಾಜ್ಯಗಳ ವಲಸೆ ಕಾರ್ಮಿಕರ ಮೇಲೆ ದೌರ್ಜನ್ಯ ನಡೆದಾಗ ಜಾಣ ಮೌನ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು  “ನಮಕ್‌ ಹರಾಮ್‌” ಎಂದು ಕರೆಯುವ ಮೂಲಕ ದಲಿತ ನಾಯಕ ಮತ್ತು ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ಅವರು ಪ್ರಧಾನಿ ಮೋದಿಯನ್ನು ಅವಮಾನಿಸಿದ್ದಾರೆ. 

Advertisement

ಪಟ್ನಾದಲ್ಲಿ ರಾಲಿಯೊಂದರಲ್ಲಿ ಮಾತನಾಡುತ್ತಿದ್ದ ಮೇವಾನಿ ಅವರು ಗುಜರಾತ್‌ ಮತ್ತು ಬಿಹಾರದಿಂದ ಗುಜರಾತಿಗೆ ವಲಸೆ ಬಂದ ಕಾರ್ಮಿಕರ ಮೇಲೆ ನಡೆದ ದೌರ್ಜನ್ಯವನ್ನು  ಖಂಡಿಸುವ ಭರದಲ್ಲಿ ಪ್ರಧಾನಿ ಮೋದಿಯನ್ನು “ನಮಕ್‌ ಹರಾಮ್‌” (ಅಪ್ರಾಮಾಣಿಕ) ಎಂದು ಅವಮಾನಿಸಿದರು. 

ಗುಜರಾತ್‌ನ ಅಹ್ಮದಾಬಾದ್‌, ಸೂರತ್‌, ರಾಜ್‌ಕೋಟ್‌ ಮತ್ತು ಬರೋಡದಲ್ಲಿ ರಸ್ತೆ, ಸೇತುವೆ, ಫ್ಲೈ ಓವರ್‌ಗಳನ್ನು ನಿರ್ಮಿಸುವ ಕೆಲಸಕ್ಕಾಗಿ ಮಧ್ಯ ಪ್ರದೇಶ, ಜಾರ್ಖಂಡ್‌, ಯುಪಿ ಮತ್ತು ಬಿಹಾರದಿಂದ ಅಪಾರ ಸಂಖ್ಯೆಯ ಕಾರ್ಮಿಕರು ವಲಸೆ ಬರುತ್ತಾರೆ. ಈಚೆಗೆ ಸುಮಾರ 12ರಿಂದ 15 ದಿನಗಳ ಕಾಲ ಈ ವಲಸೆ ಕಾರ್ಮಿಕರ ಮೇಲೆ ದೌರ್ಜನ್ಯ ನಡೆದಿದೆ. ಆದರೆ  ಈ ಬಗ್ಗೆ  ಈ “ನಮಕ್‌ ಹರಾಮ್‌”  ಚಕಾರವನ್ನೂ ಎತ್ತಿಲ್ಲ ಎಂದು ಮೇವಾನಿ ಹೇಳಿದರು. 

ಪಟ್ನಾದ ಗಾಂಧಿ ಮೈದಾನದಲ್ಲಿ ನಡೆದಿದ್ದ  “ಬಿಜೆಪಿ ಹರಾವೋ ದೇಶ್‌ ಬಚಾವೋ’ ಕಾರ್ಯಕ್ರಮದಲ್ಲಿ ಒಟ್ಟು 9 ನಿಮಿಷಗಳ ಕಾಲ ಮಾಡಿದ ಭಾಷಣದಲ್ಲಿ ಮೇವಾನಿ, “ಶೇಮ್‌ ಆನ್‌ ಯೂ ನರೇಂದ್ರ ಮೋದಿ, ಶೇಮ್‌ ಆನ್‌ ಯೂ” ಎಂದು ಕನಿಷ್ಠ ಆರು ಬಾರಿ ಕೂಗಿದರು. 

Advertisement

Udayavani is now on Telegram. Click here to join our channel and stay updated with the latest news.

Next