Advertisement

ರಾಜ್ಯದಲ್ಲಿ ಮೇವಾನಿ: ಮೋದಿ ಪ್ರಚಾರಕ್ಕೆ ಬಂದರೆ ಗದ್ದಲವೆಬ್ಬಿಸಿ!

02:47 PM Apr 06, 2018 | |

ಬೆಂಗಳೂರು : ರಾಜ್ಯದ ಚುನಾವಣಾ ರಣಕಣದಲ್ಲಿ ಗುಜರಾತ್‌ ಮೇಡಗಾಂವನ ಪಕ್ಷೇತರ ಶಾಸಕ, ದಲಿತ ಹೋರಾಟಗಾರ  ಜಿಗ್ನೇಶ್‌ ಮೇವಾನಿ ಧುಮುಕಿದ್ದು  ರಾಜ್ಯದ ವಿವಿಧೆಡೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಕಿಡಿ ಕಾರುತ್ತಿದ್ದಾರೆ. 

Advertisement

ಶುಕ್ರವಾರ ಚಿತ್ರದುರ್ಗದಲ್ಲಿ ನಡೆದ ಪ್ರಗತಿಪರರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮೇವಾನಿ ‘ಪ್ರಧಾನಿ ಮೋದಿ ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಬಂದರೆ ಗದ್ದಲವೆಬ್ಬಿಸಿ . ಸಭೆಗಳಲ್ಲಿ ಕುರ್ಚಿಗಳನ್ನು ತೂರಾಡಿ’ ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. 

ಶಿರಸಿಯಲ್ಲಿ ಶುಕ್ರವಾರ ನಡೆದ ಸಂವಿಧಾನ ಉಳಿವಿಗಾಗಿ ಕರ್ನಾಟಕ ಆಂದೋಲನದಲ್ಲಿ ಪಾಲ್ಗೊಂಡ ಮೇವಾನಿ ‘ಸಾಮಾಜಿಕ ನ್ಯಾಯದ ಸಮಾನಸಮಾಜವನ್ನು ನಾವು ಬಯಸುತ್ತೇವೆ. ಆದರೆ ಇದನ್ನು ಆರ್‌.ಎಸ್‌.ಎಸ್‌.ಮೊದಲಿನಿಂದಲೂ ವಿರೋಸಿದೆ. ಕೋಮುವಾದಿ ರಾಜಕಾರಣದಲ್ಲಿಮೆರೆಯುತ್ತಿದೆ. ಇದನ್ನು ಇದೇ ಕರ್ನಾಟಕದ ಚುನಾವಣೆಯ ಮೂಲಕ ತಡೆಯಿರಿ’ಎಂದು ಕರೆ ನೀಡಿದ್ದಾರೆ. 

‘ಮೋದಿ ಅವರನ್ನು ಕೇಳಬೇಕಿದೆ ಎಲ್ಲಿಗೆ ಹೋಯಿತು ಎರಡು ಕೋಟಿ ಉದ್ಯೋಗ ಸೃಷ್ಟಿ? ಕೊನೇ ಪಕ್ಷ ಎಬಿವಿಪಿ, ಆರ್‌ಎಸ್‌ಎಸ್‌ ಹುಡುಗರಿಗಾದರೂ ಉದ್ಯೋಗ ಕೊಡಬಹುದಿತ್ತು. ನಮ್ಮ ಬ್ಯಾಂಕ್‌ ಖಾತೆಗೆ 15 ಲಕ್ಷ ಹಾಕ್ತೇವೆ ಅಂದರು. ಯಾವುದೂ ಆಗಿಲ್ಲ ಎಂದ ಅವರು, ಕರ್ನಾಟಕದ ಚುನಾವಣೆ ಯಾಕೆ ಮಹತ್ವದ್ದು ಅಂದರೆ, ನಾಲ್ಕು ವರ್ಷ ಕೇಂದ್ರದ ಆಡಳಿತ ನೋಡಿದ್ದೇವೆ. ಆದರೆ ಅವರು ದನದ ಹೆಸರಲ್ಲಿ ರಾಜಕಾರಣ ಮಾಡಿದರು. ಲವ್‌ ಜಿಹಾದ ವಿವಾದದಲ್ಲಿ ಕಾಲ ಕಳೆದರು. ದಲಿತರ ಹತ್ಯೆಗಳಾದವು. ಈ ಕಾರಣದಿಂದ ಬಿಜೆಪಿ ಸೋಲಿಸಬೇಕಿದೆ. ಪ್ರತಿ ಸೆಕೆಂಡು ನಮಗೆ ಮುಖ್ಯ. ಗ್ರಾಮಗಳಿಗೆ ತೆರಳಿ, ನಗರದ ಬೀದಿಗಳಲ್ಲಿ ಹೋಗಿ, ರೈತರ ಆತ್ಮಹತ್ಯೆಗೆ ಕೇಂದ್ರ ಯಾಕೆ ಸ್ಪಂದಿಸಿಲ್ಲ ಎಂದು ಕೇಳಿ ಪ್ರಚಾರ ಮಾಡಬೇಕಿದೆ ‘ಎಂದರು.

ಶಿವಮೊಗ್ಗದಲ್ಲಿ ಮಾತನಾಡಿದ ಮೇವಾನಿ ‘ಹಿಂದೂ ಹಿತದ ಬಗ್ಗೆ ಮಾತನಾಡುವವರಿಂದ ಮಾತ್ರ ದೇಶದ ರಕ್ಷಣೆಎಂದು ಬಿಂಬಿಸಲಾಗುತ್ತಿದೆ. ಆದರೆ ಅವರೇ ಈ ದೇಶದ ದೊಡ್ಡ ಶತ್ರುಗಳಾಗಿದ್ದಾರೆ’ ಟೀಕಿಸಿದರು.

Advertisement

ಹರಳಯ್ಯ ಯುವ ಪ್ರಶಸ್ತಿ 

ಈ ತನ್ಮಧ್ಯೆ ಮೇವಾನಿ ಅವರಿಗೆ ಚಿತ್ರದುರ್ಗದ ಮಹಾ ಶಿವಶರಣ ಹರಳಯ್ಯ ಗುರುಪೀಠದ ಬಸವ ಹರಳಯ್ಯ ಸ್ವಾಮೀಜಿ ಅವರು ‘ಶಿವಶರಣ ಹರಳಯ್ಯ ಯುವ ಪ್ರಶಸ್ತಿ’ ನೀಡಿ ಗೌರವಿಸಿದ್ದಾರೆ. 

ಬಿಜೆಪಿ ಪ್ರತಿಭಟನೆ 

 ಮೇವಾನಿ ಕಾರ್ಯಕ್ರಮ ವಿರೋಧಿಸಿ ಬಿಜೆಪಿಯ ನೂರಾರು  ಕಾರ್ಯಕರ್ತರು  ಶಿವಮೊಗ್ಗದಲ್ಲಿ ಪ್ರತಿಭಟಿನೆ ನಡೆಸಿದ್ದಾರೆ. ಇಂದಿನ ಬಳಿಕ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಯುವ ಎಲ್ಲಾ ಸಾಧ್ಯತೆಗಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next