Advertisement

ಭಾರತದ ಹಿರಿಯ ವೇಗಿ ಜೂಲನ್‌ ಗೋಸ್ವಾಮಿ ಸರ್ವಾಧಿಕ ವಿಕೆಟ್‌ ಸಾಧನೆ

06:12 PM Mar 12, 2022 | Team Udayavani |

ಹ್ಯಾಮಿಲ್ಟನ್‌: ಭಾರತದ ಹಿರಿಯ ವೇಗಿ ಜೂಲನ್‌ ಗೋಸ್ವಾಮಿ ನಿರೀಕ್ಷೆಯಂತೆ ವಿಶ್ವಕಪ್‌ನಲ್ಲಿ ಅತ್ಯಧಿಕ 40 ವಿಕೆಟ್‌ ಉರುಳಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು.

Advertisement

ವಿಂಡೀಸ್‌ ಎದುರಿನ ಪಂದ್ಯದಲ್ಲಿ ಅನೀಸಾ ಮೊಹಮ್ಮದ್‌ ಅವರನ್ನು ಔಟ್‌ ಮಾಡುವ ಮೂಲಕ ಜೂಲನ್‌ ಈ ಮೈಲುಗಲ್ಲು ನೆಟ್ಟರು.

ಈ ಸಂದರ್ಭದಲ್ಲಿ ಜೂಲನ್‌ ಗೋಸ್ವಾಮಿ ಆಸ್ಟ್ರೇಲಿಯದ ಲಿನ್‌ ಫುಲ್‌ಸ್ಟನ್‌ ಅವರ 39 ವಿಕೆಟ್‌ಗಳ 34 ವರ್ಷಗಳಷ್ಟು ಹಿಂದಿನ ದಾಖಲೆಯನ್ನು ಮುರಿದರು.

ಇದನ್ನೂ ಓದಿ:ಆರ್ ಸಿಬಿಗೆ ನೂತನ ಕ್ಯಾಪ್ಟನ್ ಆಯ್ಕೆ : ಈ ಬಾರಿಯಾದ್ರೂ ಕಪ್ ಗೆಲ್ಲುವುದೇ ?

ಇದು ಜೂಲನ್‌ ಅವರ 31ನೇ ವಿಶ್ವಕಪ್‌ ಪಂದ್ಯ. ಆದರೆ ಫುಲ್‌ಸ್ಟನ್‌ 20 ಪಂದ್ಯಗಳಲ್ಲೇ ಈ ದಾಖಲೆ ನಿರ್ಮಿಸಿದ್ದರು.

Advertisement

ಫುಲ್‌ಸ್ಟನ್‌ 11.94ರ ಸರಾಸರಿ ಹೊಂದಿದ್ದರೆ, ಜೂಲನ್‌ ಸರಾಸರಿ 20.77.

ಟಾಪ್‌-10 ಯಾದಿಯಲ್ಲಿರುವ ಭಾರತದ ಮತ್ತೋರ್ವ ಬೌಲರ್‌ ಡಯಾನಾ ಎಡುಲ್ಜಿ (31 ವಿಕೆಟ್‌, 7ನೇ ಸ್ಥಾನ).

Advertisement

Udayavani is now on Telegram. Click here to join our channel and stay updated with the latest news.

Next