ರಾಂಚಿ: ಫೋನಿನಲ್ಲಿ ಮಾತನಾಡುವ ವೇಳೆ ಮಗು ಅಳುತ್ತಿದ್ದ ಕಾರಣಕ್ಕೆ ತಾಯಿಯೊಬ್ಬಳು ಕತ್ತು ಹಿಸುಕಿ ಮಗುವನ್ನೇ ಕೊಂದಿರುವ ಘಟನೆ ಜಾರ್ಖಂಡ್‌ನ ಗಿರಿಡಿ ಜಿಲ್ಲೆಯಲ್ಲಿ ನಡೆದಿದೆ.
ಅಫ್ಸಾನಾ ಖಾತೂನ್ ಎಂಬ ಮಹಿಳೆ ಆರು ವರ್ಷಗಳ ಹಿಂದೆ ನಿಜಾಮುದ್ದೀನ್ ಅವರನ್ನು ಮದುವೆಯಾಗಿದ್ದರು. ದಂಪತಿಗೆ ನಾಲ್ಕು ಮತ್ತು ಎರಡು ವರ್ಷದ ಇಬ್ಬರು ಗಂಡು ಮಕ್ಕಳಿದ್ದರು.
ಗುರುವಾರ (ಡಿ.28 ರಂದು) ತನ್ನ ಪತಿಯೊಂದಿಗೆ ಜಗಳವಾಡಿ ತನ್ನ ಎರಡು ವರ್ಷದ ಮಗನೊಂದಿಗೆ ಕೋಣೆಯ ಕೊಠಡಿಯನ್ನು ಲಾಕ್ ಮಾಡಿ ಯಾರೊಂದಿಗೂ ಫೋನಿನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಮಗು ಬಿಟ್ಟುಬಿಡದೆ ಅಳುತ್ತಿತ್ತು. ಮಗುವನ್ನು ಸಮಾಧಾನ ಮಾಡುವ ಬದಲು ಮಗುವಿನ ಕತ್ತು ಹಿಸುಕಿ ತಾಯಿಯೇ ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಅಫ್ಸಾನಾ ಅವರ ಮಾವ ರೋಜನ್ ಅನ್ಸಾರಿ ತಿಳಿಸಿದ್ದಾರೆ.
ತುಂಬಾ ಸಮಯದವರೆಗೆ ಬಾಗಿಲು ತೆರೆಯದೆ ಇದ್ದಾಗ, ಪತಿ ಮಲಗಲು ಕೋಣೆಗೆ ಬಂದಿದ್ದಾರೆ.ಈ ವೇಳೆ ಮಗುವನ್ನು ಮುಟ್ಟಿ ನೋಡಿದ್ದಾರೆ. ಆದರೆ ಮಗು ಪ್ರಜ್ಞೆ ತಪ್ಪಿದಾಗೆ ಇದ್ದು, ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆಯೇ ಮಗು ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.
ಪೊಲೀಸರು ತಾಯಿ ಅಪ್ಸಾನನ್ನು ಬಂಧಿಸಿದ್ದು, ಈ ವೇಳೆ ತಾನು ಮಗುವನ್ನು ಕೊಲ್ಲುವ ಉದ್ದೇಶವಿರಲಿಲ್ಲ . ಕೋಪದಿಂದ ಆತನನ್ನು ತಳ್ಳಿದೆ. ಈ ವೇಳೆ ಮಗು ಬೆಡ್ ನಿಂದ ಕೆಳಗೆ ಬಿದ್ದಿದೆ ಎಂದು ಹೇಳಿದ್ದಾರೆ.