Advertisement

ಚಳಿಗೆ ಮದುವೆ ಮಂಟಪದಲ್ಲೇ ಪ್ರಜ್ಞೆ ತಪ್ಪಿದ ಮದುಮಗ… ನನಗೆ ಈ ಹುಡುಗ ಬೇಡವೆಂದ ಮದುಮಗಳು

03:21 PM Dec 17, 2024 | Team Udayavani |

ಜಾರ್ಖಂಡ್‌: ಜಾರ್ಖಂಡ್‌ನ ದಿಯೋಗರ್‌ನಲ್ಲಿ ಭಾನುವಾರ ರಾತ್ರಿ ನಡೆಯಬೇಕಿದ್ದ ವಿವಾಹ ಸಮಾರಂಭವೊಂದು ರಾತ್ರಿ ಬೆಳಗಾಗುವುದರೊಳಗೆ ಮುರಿದು ಬಿದ್ದ ಅಪರೂಪದ ಘಟನೆ ಬೆಳಕಿಗೆ ಬಂದಿದೆ.

Advertisement

ಏನಿದು ಪ್ರಕರಣ:
ಡಿಸೆಂಬರ್ 15 ರಂದು, ದಿಯೋಗರ್‌ ನ ಘೋರ್ಮಾರಾ ಪ್ರದೇಶದ ಅರ್ನವ್ ಎಂಬ ವರನೊಂದಿಗೆ ಬಿಹಾರದ ಭಾಗಲ್‌ಪುರದ ಅಂಕಿತಾ ವಿವಾಹ ನಿಶ್ಚಯವಾಗಿತ್ತು, ಅದರಂತೆ ದಿಯೋಗರ್‌ ನ ಘೋರ್ಮಾರಾ ರೆಸಾರ್ಟ್ ಒಂದರಲ್ಲಿ ಮದುವೆಗೆ ಸಿದ್ಧತೆ ಮಾಡಿಕೊಳಲಾಗಿತ್ತು ಭಾನುವಾರ ರಾತ್ರಿ ಸುಮಾರು ಎಂಟು ಗಂಟೆಯ ವೇಳೆಗೆ ಮದುವೆಯ ಪೂರ್ವ ಶಾಸ್ತ್ರಗಳು ರೆಸಾರ್ಟ್ ಒಳಭಾಗದಲ್ಲಿ ನಡೆದರೆ ಮದುವೆ ಶಾಸ್ತ್ರಗಳು ರೆಸಾರ್ಟ್ ಆವರಣದಲ್ಲಿರುವ ತೆರೆದ ಗಾರ್ಡನ್ ಏರಿಯಾದಲ್ಲಿ ನಡೆಸಲು ವ್ಯವಸ್ಥೆ ಮಾಡಲಾಗಿತ್ತು, ಒಂದೆಡೆ ಕೊರೆಯುವ ಚಳಿ ಇನ್ನೊಂದೆಡೆ ತೆರೆದ ಮದುವೆ ಮಂಟಪದಲ್ಲಿ ವಧು ವರನನ್ನು ಕೂರಿಸಿ ಪುರೋಹಿತರು ಮದುವೆ ಶಾಸ್ತ್ರ ನಡೆಸುತ್ತಿರಬೇಕಾದರೆ ವರ ಇದ್ದಕಿದ್ದಂತೆ ಚಳಿ ತಾಳಲಾರದೆ ನಡುಗಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾನೆ, ಕೂಡಲೇ ವರನ ಕಡೆಯವರು ಅರ್ನವ್ ನನ್ನು ಕೊಠಡಿಗೆ ಕರೆದುಕೊಂಡು ಹೋಗಿ ಉಪಚರಿಸಿ ಕೈ ಕಾಲು ತಿಕ್ಕಿ ಮೈ ಬೆಚ್ಚಗೆ ಮಾಡಿದ್ದಾರೆ ಬಳಿಕ ವೈದ್ಯರನ್ನು ಕರೆಸಿ ಮದ್ದು ನೀಡಿ ಹುಷಾರಾಗುವಂತೆ ಮಾಡಿದ್ದಾರೆ.

ಚಳಿಯಿಂದ ಸುಧಾರಿಸಿಕೊಂಡು ಮದುವೆ ಮಂಟಪಕ್ಕೆ ವರ ಬಂದು ಕುಳಿತುಕೊಳ್ಳುವಷ್ಟರಲ್ಲಿ ವಧು ನನಗೆ ಈ ಮದುವೆ ಬೇಡ ವರ ಯಾವುದೋ ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾನೆ ಇದನ್ನು ಮುಚ್ಚುಮರೆ ಮಾಡಿ ವರನ ಕುಟುಂಬದವರು ಮದುವೆ ಮಾಡಿಸುತ್ತಿದ್ದಾರೆ ಎಂದು ಕ್ಯಾತೆ ತೆಗೆದಿದ್ದಾಳೆ ಅಲ್ಲದೆ ಮದುವೆ ವಧುವಿನ ಊರಿನಲ್ಲಿ ನಡೆಯಬೇಕಿತ್ತು ಆದರೆ ವರನ ಕಡೆಯವರು ನಮ್ಮ ಊರಿನಲ್ಲೇ ಆಗಬೇಕು ಎಂದು ಒತ್ತಾಯಿಸಿ ಮದುವೆಗೆ ಸಿದ್ಧತೆ ನಡೆಸಿದ್ದಾರೆ ಹಾಗಾಗಿ ಈ ಮದುವೆಯಲ್ಲಿ ಏನೋ ದುರುದ್ದೇಶ ಇರಬೇಕು ಎಂದು ವಧು ಆರೋಪಿಸಿದ್ದಾಳೆ ಇದಕ್ಕೆ ವಧುವಿನ ಪೋಷಕರೂ ಹೌದು ಎಂದು ಸಮ್ಮತಿ ಸೂಚಿಸಿದ್ದಾರೆ ಬಳಿಕ ಎರಡೂ ಕುಟುಂಬದ ಸದಸ್ಯರ ನಡುವೆ ಮಾತುಕತೆ ನಡೆಯಿತು ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಬದಲಿಗೆ ಮಾತುಕತೆ ಜಗಳಕ್ಕೆ ಕಾರಣವಾಯಿತು ಅಷ್ಟೋತ್ತಿಗಾಗಲೇ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಎರಡೂ ಕುಟುಂಬಗಳ ಸದಸ್ಯರ ಬಳಿ ಮಾತುಕತೆ ನಡೆಸಿ ಒಂದು ಹಂತಕ್ಕೆ ಬರುವಷ್ಟರಲ್ಲಿ ಸೋಮವಾರ ಬೆಳಿಗ್ಗೆ ಎಂಟು ಗಂಟೆಯಾಗಿತ್ತು. ಅಂತಿಮವಾಗಿ ಎರಡೂ ಕಡೆಯವರು ಮದುವೆ ಬೇಡವೆಂಬ ನಿರ್ಧಾರಕ್ಕೆ ಬಂದರು, ಇದಾದ ಬಳಿಕ ಅರ್ನವ್ ಅವರ ಕುಟುಂಬವು ಘೋರ್ಮಾರಾದಲ್ಲಿರುವ ತಮ್ಮ ಮನೆಗೆ ಹಿಂದಿರುಗಿದರೆ, ಅಂಕಿತಾ ಅವರ ಕುಟುಂಬ ಮತ್ತು ಸಂಬಂಧಿಕರು ಭಾಗಲ್ಪುರಕ್ಕೆ ಹಿಂತಿರುಗಿದರು.

ಈ ನಡುವೆ ಮದುವೆಗೆಂದು ತಯಾರಿ ನಡೆಸಿದ ಅಡುಗೆ, ಮಂಟಪದ ಅಲಂಕಾರ, ರೆಸಾರ್ಟ್ ಬಾಡಿಗೆ ಎಲ್ಲವೂ ವ್ಯರ್ಥವಾಯಿತು.

ಇದನ್ನೂ ಓದಿ: BBK11: ಅತಿರೇಕಕ್ಕೆ ತಿರುಗಿದ ಬಿಗ್‌ ಬಾಸ್‌ ಟಾಸ್ಕ್..‌ ರಜತ್‌ – ಮಂಜು ನಡುವೆ ಹೈಡ್ರಾಮಾ

Advertisement
Advertisement

Udayavani is now on Telegram. Click here to join our channel and stay updated with the latest news.

Next