Advertisement

Jharkhand; ವಿಧಾನಸಭೆಯ ಹೊರಗೆ ಮರಳು ಮಾರಾಟ ಮಾಡಿದ ಬಿಜೆಪಿ ಶಾಸಕರು

08:22 PM Aug 02, 2024 | Team Udayavani |

ರಾಂಚಿ: ಜಾರ್ಖಂಡ್ ನಲ್ಲಿ ಹೇಮಂತ್ ಸೊರೇನ್ ನೇತೃತ್ವದ ಸರ್ಕಾರ ಮರಳಿನ ಬೆಲೆ ಗಗನಕ್ಕೇರಲು ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿ ಜಾರ್ಖಂಡ್ ಬಿಜೆಪಿ ಶುಕ್ರವಾರ (ಆಗಸ್ಟ್2) ವಿಧಾನಸಭೆಯ ಹೊರಗೆ ಮರಳು ಮಾರಾಟದ ಅಂಗಡಿಯನ್ನು ಸ್ಥಾಪಿಸಿ ವಿಶಿಷ್ಟ ಪ್ರತಿಭಟನೆ ನಡೆಸಿತು.

Advertisement

ಪ್ರತಿ ಕೆ.ಜಿ.ಗೆ 100ರಿಂದ 1000 ರೂ.ವರೆಗಿನ ದರಪಟ್ಟಿ ಪ್ರದರ್ಶಿಸಿ, ಶುಕ್ರವಾರ ಮಧ್ಯಾಹ್ನ 2 ಗಂಟೆವರೆಗೆ ಸ್ಪೀಕರ್ ಅಮಾನತು ಮಾಡಿದ್ದ ಬಿಜೆಪಿ ಶಾಸಕರು ಮರಳು ಅಳೆದು ಪಕ್ಷದ ಶಾಸಕರಿಗೆ ಮಾರಾಟ ಮಾಡುತ್ತಿರುವುದು ಕಂಡು ಬಂತು.

“ಜಾರ್ಖಂಡ್‌ನಲ್ಲಿ ಮರಳು ತುಂಬಾ ದುಬಾರಿಯಾಗಲು ಬೇರೆ ರಾಜ್ಯಗಳಿಗೆ ಸಾಗಿಸಲಾಗುತ್ತಿರುವುದು ಕಾರಣ ” ಎಂದು ಬಿಜೆಪಿ ಶಾಸಕ ಶಶಿ ಭೂಷಣ್ ಮೆಹ್ತಾ ಆರೋಪಿಸಿದರು.

ಬಿಜೆಪಿ ಮುಖ್ಯ ಸಚೇತಕ ಬಿರಂಚಿ ನಾರಾಯಣ್ ಅವರು ಜಾರ್ಖಂಡ್‌ನಲ್ಲಿ ಸಾಮಾನ್ಯ ಜನರ ಸ್ಥಿತಿಯನ್ನು ಪ್ರದರ್ಶಿಸುತ್ತಿದ್ದೇವೆ. ಈಗ ಮರಳನ್ನು ಕೆಜಿಗಟ್ಟಲೆ ಮಾರಾಟ ಮಾಡಲಾಗುತ್ತಿದ್ದು, ಟ್ರಕ್‌ಗಳು ಅಥವಾ ಟ್ರ್ಯಾಕ್ಟರ್‌ಗಳಲ್ಲಿ ಅಲ್ಲ’ ಎಂದು ವ್ಯಂಗ್ಯವಾಡಿದರು.

Advertisement

ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ ‘ಇದು ಬಿಜೆಪಿಯ ನಾಟಕ. ರಾಜ್ಯ ಸರ್ಕಾರ, ನಮ್ಮ ಮುಖ್ಯಮಂತ್ರಿಗಳು ಬಡವರಿಗೆ ಮರಳು ಮುಕ್ತ ಮಾಡಿದೆ’ ಎಂದುರು.

ಮುಖ್ಯಮಂತ್ರಿ ಹೇಮಂತ್ ಸೊರೇನ್ ಬಿಜೆಪಿಯ ಪ್ರದರ್ಶನವನ್ನು ಲೇವಡಿ ಮಾಡಿ “ವ್ಯಾಪಾರಿಗಳು ಮಾತ್ರ ಇಂತಹ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ರೈತರು ಬಳಲುತ್ತಿರುವಾಗ ಬಿಜೆಪಿ ದೇಶದ ಆಸ್ತಿಯನ್ನು ಮಾರಾಟ ಮಾಡುತ್ತಿದೆ” ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next