ರಾಜಧಾನಿಯ ಆಭರಣಪ್ರಿಯರಿಗೆ, ಇದೊಂದು ಸುಗ್ಗಿ. ಭಾರತದ ಅತಿ ದೊಡ್ಡ ಆಭರಣ ಪ್ರದರ್ಶನವಾದ ಜ್ಯುವೆಲ್ಸ್ ಆಫ್ ಇಂಡಿಯಾ ಅಕ್ಟೋಬರ್ 18ರಿಂದ ನಗರದಲ್ಲಿ
ನಡೆಯುತ್ತಲಿದೆ. ದೀಪಾವಳಿ ಹಬ್ಬಕ್ಕೆ ಚೆಂದದ ಆಭರಣಗಳನ್ನು ಕೊಳ್ಳಬೇಕು ಎಂದು ಬಯಸುವವರಿಗೆ ಒಂದೇ ಸೂರಿನಡಿ ಸಾವಿರಾರು ವಿನ್ಯಾಸದ ಚಿನ್ನ- ವಜ್ರದ
ಆಭರಣಗಳು ದೊರಕಲಿವೆ.
ಇದು ಜುವೆಲ್ಸ್ ಆಫ್ ಇಂಡಿಯಾದ 21ನೇ ಆವೃತ್ತಿಯ ಪ್ರದರ್ಶನವಾಗಿದೆ. ದೇಶದ 100 ಜ್ಯುವೆಲ್ಲರಿಗಳ ಚಿನ್ನದ ಉತ್ಪನ್ನಗಳನ್ನು ಈ ಪ್ರದರ್ಶನದಲ್ಲಿ ಕಾಣಬಹುದು. ಪ್ರದರ್ಶನದ ಬ್ರ್ಯಾಂಡ್ ಅಂಬಾಸಿಡರ್ ನಟಿ ಪ್ರಣೀತಾ ಸುಭಾಷ್, ಜೋಸೆಫ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಆಭರಣಗಳನ್ನು ಧರಿಸಿ, ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿದರು.
ಪ್ರದರ್ಶನದಲ್ಲಿ ವಿಶೇಷವಾಗಿ ಜೈಪುರದ ಕುಂದನ್ ಮತ್ತು ಮೀನಾಕ್ಷಿ ಆಭರಣಗಳು, ತಮಿಳುನಾಡಿನ ಪ್ರಾಚೀನ ವಿನ್ಯಾಸದ ಆಭರಣಗಳು, ರಾಜಾಸ್ಥಾನದ ಥೇವಾ ಮಾಧರಿಯ ಆಭರಣಗಳು, ಮುಂಬೈನ ಹೊಸ ವಿನ್ಯಾಸದ ಮತ್ತು ಬ್ರಾಂಡೆಡ್ ವಜ್ರಾಭರಣಗಳು, ಕೋಲ್ಕತ್ತಾದ ಕರಕುಶಲ ಮತ್ತು ಸೂಕ್ಷ್ಮ ವಿನ್ಯಾಸದ ಆಭರಣಗಳು, ಮೂಲ ಬರ್ಮಾ ರೂಬಿ ಹರಳುಗಳು, ಗುಜರಾತಿ ಶೈಲಿಯ ಚಿನ್ನಾಭರಣಗಳು, ದಕ್ಷಿಣ ಭಾರತದ ಸಾಂಪ್ರದಾಯಿಕ ಆಭರಣಗಳು, ಮದುಮಗಳ ಅಲಂಕಾರದ ಆಭರಣಗಳು, ಅಪರೂಪದ ಬಳೆಗಳ ಸಂಗ್ರಹ, ಫ್ಯೂಷನ್ ಆಭರಣಗಳು, ಪುರುಷರ ಆಭರಣಗಳು, ಎಲ್ಲಾ ವಿಧದ ಹರಳು ಕಲ್ಲುಗಳು ಪ್ರದರ್ಶನ ಮಳಿಗೆಗಳಲ್ಲಿ ಲಭ್ಯವಾಗಲಿವೆ. ಬೆಂಗಳೂರಿನ ಸ್ಥಳೀಯ ಆಭರಣ ಮಾರಾಟ ಸಂಸ್ಥೆಗಳಲ್ಲದೆ, ಕರ್ನೂಲ್, ಕೋಲ್ಕತ್ತಾ, ದೆಹಲಿ, ಹೈದರಾಬಾದ್, ಮುಂಬೈ ಸೇರಿದಂತೆ ಒಟ್ಟು 120 ಆಭರಣ ಸಂಸ್ಥೆಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ.
ಎಲ್ಲಿ?: ಸೇಂಟ್ ಜೋಸೆಫ್ಸ್ ಇಂಡಿಯನ್
ಹೈಸ್ಕೂಲ್ ಆವರಣ, ಯು.ಬಿ. ಸಿಟಿ ಎದುರು
ಯಾವಾಗ?: ಅ.19-21
ಪ್ರವೇಶ: ಉಚಿತ
ಸಂಪರ್ಕ: 7259514859